Loading..!

ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯದ ಕಾರ್ಯಾಲಯ ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ
Published by: Savita Halli | Date:26 ಎಪ್ರಿಲ್ 2022
not found

ಬೆಂಗಳೂರಿನಲ್ಲಿರುವ ನಗರ ಸಿವಿಲ್ ನ್ಯಾಯಾಲಯದ ಕಾರ್ಯಾಲಯ, ನ್ಯಾಯಾಲಯದ ಸಂಕೀರ್ಣ ಬೆಂಗಳೂರು ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು ಗ್ರೇಡ್ - III, ಬೆರಳಚ್ಚುಗಾರ, ಆದೇಶ ಜಾರಿಕರ ಮತ್ತು ಜವಾನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 20/05/2022 ರಾತ್ರಿ 11:59 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ: 133
* ಶೀಘ್ರಲಿಪಿಗಾರ ಗ್ರೇಡ್ - III : 17
* ಬೆರಳಚ್ಚುಗಾರ : 24
* ಆದೇಶ ಜಾರಿಕರ : 05 ಮತ್ತು 
* ಜವಾನ : 87


ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ನಿಗದಪಡಿಸಿರುವ ಪ್ರಾರಂಭಿಕ ದಿನಾಂಕ: 21/04/2022
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20/05/2022
* ಈ ಚಲನ್ ಮೂಲಕ: 21/05/2022 

No. of posts:  133
Application Start Date:  26 ಎಪ್ರಿಲ್ 2022
Application End Date:  20 ಮೇ 2022
Work Location:  ಬೆಂಗಳೂರು
Selection Procedure:

* ಶೀಘ್ರಲಿಪಿಗಾರ, ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಹತಾ ಶೈಕ್ಷಣಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹಾಗೂ ಈ ಪ್ರಾಧಿಕಾರ ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ ಒಟ್ಟು ಅಂಕಗಳ ಶೇ ಆಧಾರದ ಮೇಲೆ ಒಂದು ಹುದ್ದೆಗೆ 1:5 ಅನುಪಾತದಂತೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು ಸಂದರ್ಶನಕ್ಕೆ ಒಟ್ಟು 5 ಅಂಕಗಳನ್ನು ನಿಗದಿಪಡಿಸಲಾಗಿದೆ.
* ಆದೇಶ ಜಾರಿಕರ ಮತ್ತು ಜವಾನ ಹುದ್ದೆಗಳಿಗೆ SSLC ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡಾವಾರು ಆಧಾರದ ಮೇಲೆ ಒಂದು ಹುದ್ದೆಗೆ 1:25 ಅನುಪಾತದಂತೆ ಮತ್ತು ಜವಾನ ಹುದ್ದೆಗಳಿಗೆ 1:10 ಅನುಪಾತದಂತೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ಒಟ್ಟು 10 ಅಂಕಗಳನ್ನು ನಿಗದಿಪಡಿಸಲಾಗಿದೆ

Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಶೀಘ್ರಲಿಪಿಗಾರ ಗ್ರೇಡ್ - III, ಬೆರಳಚ್ಚುಗಾರ ಹುದ್ದೆಗಳಿಗೆ - ಪಿ.ಯು.ಸಿ.(12th) ಅಥವಾ ಡಿಪ್ಲೋಮ (diploma) ವಿದ್ಯಾರ್ಹತೆಯನ್ನು ಹೊಂದಿರಬೇಕು.
*  ಆದೇಶ ಜಾರಿಕರ ಮತ್ತು ಜವಾನ ಹುದ್ದೆಗಳಿಗೆ SSLC ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಕನ್ನಡ ಓದಲು ಬರೆಯಲು ಬರಬೇಕು

Fee:

* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ. 200/-
*  ಪ್ರವರ್ಗ 2A, 2B, 3A, 3Bಗೆ ಸೇರಿದ ಅಭ್ಯರ್ಥಿಗಳು ರೂ. 100/-
* ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ - 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದ ವಿನಾಯಿತಿ ಇರುತ್ತದೆ.

Age Limit:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು. ಮತ್ತು ಗರಿಷ್ಠ ವಯಸ್ಸು ಈ ಕೆಳಕಂಡಂತೆ ಇರಬೇಕು.
* ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 35 ವರ್ಷಗಳು
*  ಪ್ರವರ್ಗ 2A, 2B, 3A, 3Bಗೆ ಸೇರಿದ ಅಭ್ಯರ್ಥಿಗಳು 38 ವರ್ಷಗಳು ಹಾಗೂ
* ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ - 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

Pay Scale:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ವೇತನ ನೀಡಲಾಗುವುದು.
* ಶೀಘ್ರಲಿಪಿಗಾರ ಗ್ರೇಡ್ - III: 27,650/- ರಿಂದ  52,650/-
* ಬೆರಳಚ್ಚುಗಾರ : 21,400/- ರಿಂದ  42,000/-
* ಆದೇಶ ಜಾರಿಕರ :  19,950/- ರಿಂದ  37,900/-
* ಜವಾನ : 17,000/- ರಿಂದ  28,950/-
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

To Download Official Notification

Comments