ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ನೇಮಕಾತಿ 2025: 96 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ

ಉದ್ಯೋಗ ಅರಸುತ್ತಿರುವ ಇಂಜಿನಿಯರ್‌ಗಳಿಗೆ ಸಿಹಿ ಸುದ್ದಿ ಇದೆ! ನಿಮಗೆ ಸರ್ಕಾರಿ ಉದ್ಯೋಗದ ಕನಸಿದೆಯಾ? ಹಾಗಾದರೆ, ಇದು ನಿಮ್ಮ ಅವಕಾಶ.
ಭಾರತ ಎರ್ಥ್ ಮೂವರ್ಸ್ ಲಿಮಿಟೆಡ್ (BEML) ನೇಮಕಾತಿ 2025 ಅಡಿಯಲ್ಲಿ 96 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ನಿಮ್ಮ ಕೆರಿಯರ್ ಪಯಣಕ್ಕೆ ಹೊಸ ತಿರುವು ನೀಡಬಹುದಾದ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಆದರೆ ಅರ್ಜಿ ಸಲ್ಲಿಸುವ ಮುನ್ನ, ನೀವು ಅರ್ಹತೆ ಪಡೆದಿದ್ದೀರಾ? ಯಾವ ವಿಭಾಗಗಳಲ್ಲಿ ಹುದ್ದೆಗಳಿವೆ? ಎಲ್ಲಿ ಮತ್ತು ಯಾವಾಗ ಸಂದರ್ಶನಗಳು ನಡೆಯಲಿವೆ? ಸಿದ್ಧತೆಗಾಗಿ ನಿಮಗೆ ತಿಳಿದಿರಬೇಕಾದ ಪ್ರಮುಖ ವಿಷಯಗಳೇನು? ಕೇರಳದ ಪಾಲಕ್ಕಾಡ್, ಕರ್ನಾಟಕದ ಕೋಲಾರ, ಮೈಸೂರು, ಬೆಂಗಳೂರು, ನವದೆಹಲಿ, ಪುಣೆ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ಶಾಖೆಗಳಿಗಾಗಿ ಈ ನೇಮಕಾತಿ ಜರುಗಲಿದೆ.
ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಸಂಸ್ಥೆಯು 96 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ 2025 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು 2025ರ ಆಗಸ್ಟ್ 11 ರಿಂದ 12 ರವರೆಗೆ ನಡೆಯುವ ವಾಕ್-ಇನ್ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಈ ಹುದ್ದೆಗಳಿಗೆ B.E./B.Tech ಪದವೀಧರರು ಅರ್ಹರಾಗಿದ್ದು, ಇಲಾಖಾವಾರಿಯಾಗಿ ವಿವಿಧ ಘಟಕಗಳಲ್ಲಿ ಹುದ್ದೆಗಳು ಖಾಲಿ ಇವೆ.
📌ನೇಮಕಾತಿ ಪ್ರಾಥಮಿಕ ಮಾಹಿತಿ :
🏛️ಸಂಸ್ಥೆ : ಭಾರತ ಎರ್ಥ್ ಮೂವರ್ಸ್ ಲಿಮಿಟೆಡ್ (BEML)
🔹ಹುದ್ದೆ ಹೆಸರು : ಜೂನಿಯರ್ ಎಕ್ಸಿಕ್ಯೂಟಿವ್
🧾ಒಟ್ಟು ಹುದ್ದೆಗಳ ಸಂಖ್ಯೆ : 96
📝ಅರ್ಜಿ ವಿಧಾನ : ವಾಕ್-ಇನ್ ಸಂದರ್ಶನ
📍ಉದ್ಯೋಗ ಸ್ಥಳ: ಪಾಲಕ್ಕಾಡ್ (ಕೇರಳ), ಕೋಲಾರ, ಮೈಸೂರು, ಬೆಂಗಳೂರು (ಕರ್ನಾಟಕ), ನವದೆಹಲಿ, ಪುಣೆ (ಮಹಾರಾಷ್ಟ್ರ), ಹೈದರಾಬಾದ್ (ತೆಲಂಗಾಣ)
🎓ಅರ್ಹತೆಗಳು:
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BE / B.Tech ಪದವಿ ಪೂರೈಸಿರಬೇಕು.
🎂ವಯೋಮಿತಿ:
ಅಭ್ಯರ್ಥಿಗಳು ಗರಿಷ್ಠ 29 ವರ್ಷ (BEML ನಿಯಮಾನುಸಾರ ವಯೋಮಿತಿ ಇಳಿವೂ ಲಭ್ಯವಿದೆ)
💰ವೇತನದ ವಿವರ :
1ನೇ ವರ್ಷ : ₹35,000
2ನೇ ವರ್ಷ : ₹37,500
3ನೇ ವರ್ಷ : ₹40,000
4ನೇ ವರ್ಷ : ₹43,000
📌ಹುದ್ದೆಗಳ ಸ್ಥಳವಾರ ವಿವರಗಳು :
🔹ಪಾಲಕ್ಕಾಡ್ ಘಟಕ (ಕೇರಳ) :
ಮೆಕಾನಿಕಲ್ : 38
ಎಲೆಕ್ಟ್ರಿಕಲ್ : 06
ಮೆಟಲರ್ಜಿ : 03
ಐಟಿ : 01
🔹ಕೊಲಾರ ಗೋಲ್ಡ್ ಫೀಲ್ಡ್ಸ್ ಘಟಕ (ಕರ್ನಾಟಕ) :
ಮೆಕಾನಿಕಲ್ : 23
ಮೆಟಲರ್ಜಿ : 02
🔹ಮೈಸೂರು ಘಟಕ (ಕರ್ನಾಟಕ) :
ಮೆಕಾನಿಕಲ್ : 13
ಎಲೆಕ್ಟ್ರಿಕಲ್ : 02
🔹ಮಾರ್ಕೆಟಿಂಗ್ ಕಚೇರಿ (ಬೆಂಗಳೂರು, ದೆಹಲಿ, ಪುಣೆ, ಹೈದರಾಬಾದ್) :
ಮೆಕಾನಿಕಲ್ : 05
ಎಲೆಕ್ಟ್ರಿಕಲ್ : 03
💵ವಾಕ್-ಇನ್ ಸಂದರ್ಶನ ಸ್ಥಳಗಳು:
ಪಾಲಕ್ಕಾಡ್ (ಕೇರಳ):
BEML Palakkad Complex, KINFRA Wise Park, Menon Para Road, Kanjikode East, Palakkad – 678621
ಕೋಲಾರ (ಕರ್ನಾಟಕ):
H&P Unit, BEML KGF Complex, BEML Nagar, Kolar Gold Fields – 563115
ಮೈಸೂರು, ಬೆಂಗಳೂರು, ನವದೆಹಲಿ, ಪುಣೆ, ಹೈದರಾಬಾದ್:
BEML Mysore Complex, Belavadi Post, Mysuru – 570018
💵ವಾಕ್-ಇನ್ ಸಂದರ್ಶನಕ್ಕೆ ಹಾಜರಾಗುವುದು ಹೇಗೆ?
1. ಅರ್ಹ ಅಭ್ಯರ್ಥಿಗಳು ಬಿಎಂಎಲ್ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಅಧಿಸೂಚನೆಯನ್ನು ಓದಿಕೊಳ್ಳಬೇಕು.
2. ವಾಕ್-ಇನ್ ಸಂದರ್ಶನ ದಿನಾಂಕಕ್ಕೆ ಬರ್ಮಾ ದಾಖಲೆಗಳು, ಅಗತ್ಯ ಪ್ರಮಾಣಪತ್ರಗಳು, ಪಾಸ್‌ಪೋರ್ಟ್ ಸೈಸ್ ಫೋಟೋ ಹಾಗೂ ಗುರುತಿನ ದಾಖಲೆಗಳನ್ನು ತೆಗೆದುಕೊಂಡು ಹಾಜರಾಗಬೇಕು.
3. ಯಾವುದೇ ಪೂರ್ವ ಅರ್ಜಿ ಸಲ್ಲಿಕೆಯ ಅಗತ್ಯವಿಲ್ಲ.
📝ಅರ್ಜಿ ಸಲ್ಲಿಸುವ ವಿಧಾನ :
- ಮೊದಲನೆಯದಾಗಿ BEML ನೇಮಕಾತಿ ಅಧಿಸೂಚನೆ 2025 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
- ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
- ಕೆಳಗೆ ನೀಡಲಾದ BEML ಜೂನಿಯರ್ ಎಕ್ಸಿಕ್ಯೂಟಿವ್ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ - ಲಿಂಕ್ ಅನ್ನು ಕ್ಲಿಕ್ ಮಾಡಿ.
- BEML ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
- ಕೊನೆಯದಾಗಿ BEML ನೇಮಕಾತಿ 2025 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ.
- ಮುಖ್ಯವಾಗಿ ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಸೆರೆಹಿಡಿಯಿರಿ.
📅ಪ್ರಮುಖ ದಿನಾಂಕಗಳು :
- ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : 30-ಜುಲೈ-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-ಆಗಸ್ಟ್-2025
- ವಾಕ್-ಇನ್ ಸಂದರ್ಶನ ದಿನಾಂಕಗಳು : 11 ಮತ್ತು 12 ಆಗಸ್ಟ್ 2025
ಈ ಉದ್ಯೋಗ ಅವಕಾಶವನ್ನು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಖಂಡಿತವಾಗಿ ಬಳಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗಾಗಿ [https://bemlindia.in](https://bemlindia.in) ಗೆ ಭೇಟಿ ನೀಡಿ.
Comments