ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಮಾಲೀಕತ್ವದಲ್ಲಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಮ್ಯಾನೇಜರ್, ಮ್ಯಾನೇಜರ್ ಅಸಿಸ್ಟಂಟ್ ಹಾಗೂ ಅಕೌಂಟ್ ಅಸಿಸ್ಟಂಟ್ ಟ್ರೇನಿ ಹುದ್ದೆಗಳನ್ನೊಳಗೊಂಡಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 1/5/2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 68
ಗ್ರೂಪ್ ಎ ವಿಭಾಗದಲ್ಲಿ ಮ್ಯಾನೇಜರ್-8
ಅಸಿಸ್ಟೆಂಟ್ ಮ್ಯಾನೇಜರ್-1
ಆಫೀಸರ್-10
ಗ್ರೂಪ್ ಬಿ ವಿಭಾಗದಲ್ಲಿ ಅಸಿಸ್ಟೆಂಟ್ ಆಫೀಸರ್-9
ಗ್ರೂಪ್ ಸಿ ವಿಭಾಗದಲ್ಲಿ ಡಿಪ್ಲೊಮಾ ಟ್ರೇನಿ-34
ಆಫೀಸ್ ಅಸಿಸ್ಟೆಂಟ್-4
ಅಕೌಂಟ್ಸ್ ಅಸಿಸ್ಟೆಂಟ್ ಟ್ರೇನಿ-2
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಅನುಗುಣವಾಗುವಂತೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸುವದರ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಇಂಜಿನಿಯರಿಂಗ್/ CA/ MBA ಹಾಗೂ ಪದವಿ ವಿದ್ಯಾರ್ಹತೆಯನ್ನು ಅಂಗೀಕೃತ ಸಂಸ್ಥೆ/ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 500/- ರೂ ಅರ್ಜಿ ಶುಲ್ಕವನ್ನು ಪಾವತಿಸಬಹುದಾಗಿದೆ.
ಮೀಸಲಾತಿ ವರ್ಗದವರಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಇರಲಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಅನುಗುಣವಾಗುವಂತೆ ಕನಿಷ್ಠ 27 ವರ್ಷ ವಯಸ್ಸು ಹಾಗೂ ಗರಿಷ್ಠ 34 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ವಯೋಮಿತಿ ಸಡಿಲಿಕೆ :
SC/ST ಅಭ್ಯರ್ಥಿಗಳಿಗೆ 5 ವರ್ಷ
OBC ಅಭ್ಯರ್ಥಿಗಳಿಗೆ 3 ವರ್ಷ
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಈ ಕೆಳಗಿನಂತೆ ನೀಡಲಾಗುತ್ತದೆ.
ಗ್ರೂಪ್ ಎ ಹುದ್ದೆಗಳಿಗೆ 60,000ದಿಂದ 1,60,000 ರೂ.ವರೆಗೆ
ಗ್ರೂಪ್ ಬಿ ಹುದ್ದೆಗಳಿಗೆ 30,000/- ರಿಂದ 1,30,000/- ಗ್ರೂಪ್
ಗ್ರೂಪ್ ಸಿ ಹುದ್ದೆಗಳಿಗೆ 23,910/- ರಿಂದ 60,650/- ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ. ಜೊತೆಗೆ ಇತರ ಭತ್ಯೆಗಳು ಇರುತ್ತವೆ.
- ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗೆ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.




Comments