ಬಳ್ಳಾರಿ ಡಿಸಿಸಿ ಬ್ಯಾಂಕ್ (BDCC Bank) ನೇಮಕಾತಿ 2026: ಒಟ್ಟು 82 FDA, SDA ಹಾಗೂ ಕಿರಿಯ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ.
Published by: Yallamma G | Date:6 ಮೇ 2026

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (BDCC Bank) ನಲ್ಲಿ ಖಾಲಿ ಇರುವ 82 ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ವಾಹನ ಚಾಲಕರು ಮತ್ತು ಕಿರಿಯ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಅರಸುತ್ತಿರುವ ಕರ್ನಾಟಕದ ಯುವಜನತೆಗೆ ಭರ್ಜರಿ ಸಿಹಿಸುದ್ದಿ! ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಹೊಸಪೇಟೆ (BDCC Bank) ಇದರಲ್ಲಿ ಖಾಲಿ ಇರುವ ಒಟ್ಟು 82 ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (BDCC Bank) ನಲ್ಲಿ ಖಾಲಿ ಇರುವ ವ್ಯವಸ್ಥಾಪಕರು / ಪ್ರಥಮ ದರ್ಜೆ ಸಹಾಯಕರು (FDA), ದ್ವಿತೀಯ ದರ್ಜೆ ಸಹಾಯಕರು (SDA), ವಾಹನ ಚಾಲಕರು (Driver) ಮತ್ತು ಕಿರಿಯ ಸೇವಕರು (Junior Attendants/Peon) ಸೇರಿದಂತ್ತೆ ಒಟ್ಟು 82 ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಬಳ್ಳಾರಿ - ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 06-ಮೇ-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ನೀವು SSLC, ದ್ವಿತೀಯ PUC ಅಥವಾ ಪದವಿ ಮುಗಿಸಿದ್ದರೆ, ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಈ ಲೇಖನದಲ್ಲಿ ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಇದನ್ನು ಓದಿ : ಯಾವುದೇ ವಿದ್ಯಾರ್ಹತೆ ಬೇಡ! ಹಾವೇರಿ ಜಿಲ್ಲೆಯಲ್ಲಿ 73 ನೇರಪಾವತಿ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಹುದ್ದೆಗಳ ವರ್ಗೀಕರಣ : 82
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು:
ವಯೋಮಿತಿ ಮತ್ತು ವಿಶೇಷ ಸಡಿಲಿಕೆ (Age Limit & Relaxation)
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:
ಮಾಸಿಕ ವೇತನ :
ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ನಡೆಯಲಿದೆ.
A. ಲಿಖಿತ ಪರೀಕ್ಷೆ (Written Exam):
=> ವ್ಯವಸ್ಥಾಪಕರು / ಪ್ರಥಮ ದರ್ಜೆ ಸಹಾಯಕರು (FDA) ಮತ್ತು ದ್ವಿತೀಯ ದರ್ಜೆ ಸಹಾಯಕರು (SDA):
ಈ ಹುದ್ದೆಗಳಿಗೆ ಒಟ್ಟು 200 ಅಂಕಗಳ ಲಿಖಿತ ಪರೀಕ್ಷೆ ಇರುತ್ತದೆ. ಪರೀಕ್ಷೆ ಬರೆಯಲು 2 ಗಂಟೆಗಳ ಕಾಲಾವಕಾಶ ಇರುತ್ತದೆ.
ಈ ಹುದ್ದೆಗಳಿಗೆ ಒಟ್ಟು 100 ಅಂಕಗಳ ಲಿಖಿತ ಪರೀಕ್ಷೆ ಇರುತ್ತದೆ.
ಲಿಖಿತ ಪರೀಕ್ಷೆಯಲ್ಲಿ ನೀವು ಗಳಿಸಿದ ಅಂಕಗಳ ಶೇಕಡಾವಾರು ಆಧಾರದ ಮೇಲೆ ಒಂದು ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ.
ಅಂತಿಮವಾಗಿ ಉದ್ಯೋಗಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಎರಡೂ ಅಂಕಗಳನ್ನು ಪರಿಗಣಿಸಲಾಗುತ್ತದೆ. ಇದರ ಲೆಕ್ಕಾಚಾರ ಹೀಗಿರುತ್ತದೆ:
ಅರ್ಜಿ ಸಲ್ಲಿಸುವುದು ಹೇಗೆ? (How to Apply)
ಇದೇ ರೀತಿಯ ದಿನನಿತ್ಯದ ಉದ್ಯೋಗ ಮಾಹಿತಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್‌ಗಳಿಗಾಗಿ ನಿರಂತರವಾಗಿ KPSCVaani ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ.
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.

- ವ್ಯವಸ್ಥಾಪಕರು / ಪ್ರಥಮ ದರ್ಜೆ ಸಹಾಯಕರು (FDA): 22 ಹುದ್ದೆಗಳು
- ದ್ವಿತೀಯ ದರ್ಜೆ ಸಹಾಯಕರು (SDA): 28 ಹುದ್ದೆಗಳು
- ವಾಹನ ಚಾಲಕರು (Driver): 1 ಹುದ್ದೆ
- ಕಿರಿಯ ಸೇವಕರು (Junior Attendants/Peon): 31 ಹುದ್ದೆಗಳು
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು:
- ವ್ಯವಸ್ಥಾಪಕರು / FDA: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಪೂರ್ಣಗೊಳಿಸಿರಬೇಕು. ಕಂಪ್ಯೂಟರ್ ನಿರ್ವಹಣೆ ಜ್ಞಾನ ಕಡ್ಡಾಯ.
- ದ್ವಿತೀಯ ದರ್ಜೆ ಸಹಾಯಕರು (SDA): ಮಾನ್ಯತೆ ಪಡೆದ ಪದವಿ ಪೂರ್ವ ಮಂಡಳಿಯಿಂದ ದ್ವಿತೀಯ ಪಿ.ಯು.ಸಿ (2nd PUC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ನಿರ್ವಹಣೆ ಜ್ಞಾನ ಕಡ್ಡಾಯ.
- ವಾಹನ ಚಾಲಕರು: SSLC ಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕಾನೂನುಬದ್ಧ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
- ಕಿರಿಯ ಸೇವಕರು: SSLC ಯಲ್ಲಿ ಉತ್ತೀರ್ಣರಾಗಿರಬೇಕು.
- ಸೂಚನೆ: ಎಲ್ಲಾ ಹುದ್ದೆಗಳಿಗೂ ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು ಹಾಗೂ ಕನ್ನಡ ಓದುವ, ಬರೆಯುವ, ಮಾತನಾಡುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು
ವಯೋಮಿತಿ ಮತ್ತು ವಿಶೇಷ ಸಡಿಲಿಕೆ (Age Limit & Relaxation)
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:
- ಪರಿಶಿಷ್ಟ ಜಾತಿ (SC) / ಪರಿಶಿಷ್ಟ ಪಂಗಡ (ST) / ಪ್ರವರ್ಗ-1: 40 ವರ್ಷ.
- ಪ್ರವರ್ಗ 2A, 2B, 3A, 3B (OBC): 38 ವರ್ಷ.
- ಸಾಮಾನ್ಯ ವರ್ಗ (General): 35 ವರ್ಷ.
- ಬಂಪರ್ ಆಫರ್ (ವಿಶೇಷ ಸೂಚನೆ): ಸರ್ಕಾರದ ಆದೇಶದನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (As a One Time Measure) 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ!.
- ಇದಲ್ಲದೆ ವಿಕಲಚೇತನರು ಮತ್ತು ವಿಧವೆಯರಿಗೆ 10 ವರ್ಷಗಳ ಹೆಚ್ಚುವರಿ ಸಡಿಲಿಕೆ ಇರುತ್ತದೆ.
- ಸಾಮಾನ್ಯ ಮತ್ತು ಇತರೆ ಪ್ರವರ್ಗ (2A, 2B, 3A, 3B): ರೂ. 1,000/-.
- SC, ST, ಪ್ರವರ್ಗ-1, ವಿಕಲಚೇತನ ಮತ್ತು ಮಾಜಿ ಸೈನಿಕರು: ರೂ. 500/-.
- (ಶುಲ್ಕವನ್ನು Net Banking, Credit Card, Debit Card, UPI ಮುಖಾಂತರ ಆನ್‌ಲೈನ್‌ನಲ್ಲಿಯೇ ಪಾವತಿಸಬೇಕು).
ಮಾಸಿಕ ವೇತನ :
- ವ್ಯವಸ್ಥಾಪಕರು / ಪ್ರಥಮ ದರ್ಜೆ ಸಹಾಯಕರು (FDA): ವೇತನ ಶ್ರೇಣಿ: ರೂ. 44,425 ರಿಂದ ರೂ. 83,700 ರವರೆಗೆ.
- ದ್ವಿತೀಯ ದರ್ಜೆ ಸಹಾಯಕರು (SDA): ವೇತನ ಶ್ರೇಣಿ: ರೂ. 34,100 ರಿಂದ ರೂ. 67,600 ರವರೆಗೆ.
- ವಾಹನ ಚಾಲಕರು (Driver): ವೇತನ ಶ್ರೇಣಿ: ರೂ. 31,775 ರಿಂದ ರೂ. 61,300 ರವರೆಗೆ.
- ಕಿರಿಯ ಸೇವಕರು (Junior Attendants/Peon): ವೇತನ ಶ್ರೇಣಿ: ರೂ. 29,600 ರಿಂದ ರೂ. 52,800 ರವರೆಗೆ.
ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ನಡೆಯಲಿದೆ.
A. ಲಿಖಿತ ಪರೀಕ್ಷೆ (Written Exam):
=> ವ್ಯವಸ್ಥಾಪಕರು / ಪ್ರಥಮ ದರ್ಜೆ ಸಹಾಯಕರು (FDA) ಮತ್ತು ದ್ವಿತೀಯ ದರ್ಜೆ ಸಹಾಯಕರು (SDA):
ಈ ಹುದ್ದೆಗಳಿಗೆ ಒಟ್ಟು 200 ಅಂಕಗಳ ಲಿಖಿತ ಪರೀಕ್ಷೆ ಇರುತ್ತದೆ. ಪರೀಕ್ಷೆ ಬರೆಯಲು 2 ಗಂಟೆಗಳ ಕಾಲಾವಕಾಶ ಇರುತ್ತದೆ.
- ಕನ್ನಡ ಭಾಷೆ: 50 ಅಂಕಗಳು
- ಸಾಮಾನ್ಯ ಇಂಗ್ಲೀಷ್ ಭಾಷೆ: 25 ಅಂಕಗಳು
- ಸಾಮಾನ್ಯ ಜ್ಞಾನ: 25 ಅಂಕಗಳು
- ಸಹಕಾರ ವಿಷಯ: 50 ಅಂಕಗಳು
- ಭಾರತದ ಸಂವಿಧಾನ: 25 ಅಂಕಗಳು
- ಬ್ಯಾಂಕಿಂಗ್, ಸಮಾಜಯುಕ್ತವಾದ ಚಟುವಟಿಕೆ ಮತ್ತು ವಸ್ತು ನಿಷ್ಠೆ ವಿಷಯ: 25 ಅಂಕಗಳು
ಈ ಹುದ್ದೆಗಳಿಗೆ ಒಟ್ಟು 100 ಅಂಕಗಳ ಲಿಖಿತ ಪರೀಕ್ಷೆ ಇರುತ್ತದೆ.
- ಪರೀಕ್ಷೆ ಬರೆಯಲು 1 ಗಂಟೆ ಕಾಲಾವಕಾಶ ಇರುತ್ತದೆ.
- ಕನ್ನಡ ಭಾಷೆ: 50 ಅಂಕಗಳು
- ಸಾಮಾನ್ಯ ಜ್ಞಾನ: 50 ಅಂಕಗಳು
ಲಿಖಿತ ಪರೀಕ್ಷೆಯಲ್ಲಿ ನೀವು ಗಳಿಸಿದ ಅಂಕಗಳ ಶೇಕಡಾವಾರು ಆಧಾರದ ಮೇಲೆ ಒಂದು ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ.
- ಈ ಪಟ್ಟಿಯನ್ನು ಆಧರಿಸಿ, ಒಂದು ಹುದ್ದೆಗೆ 5 ಅಭ್ಯರ್ಥಿಗಳಂತೆ (1:5 ರ ಅನುಪಾತದಲ್ಲಿ) ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
- ಸಂದರ್ಶನಕ್ಕೆ ಒಟ್ಟು 15 ಅಂಕಗಳನ್ನು ನಿಗದಿಪಡಿಸಲಾಗಿದೆ.
ಅಂತಿಮವಾಗಿ ಉದ್ಯೋಗಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಎರಡೂ ಅಂಕಗಳನ್ನು ಪರಿಗಣಿಸಲಾಗುತ್ತದೆ. ಇದರ ಲೆಕ್ಕಾಚಾರ ಹೀಗಿರುತ್ತದೆ:
- ಲಿಖಿತ ಪರೀಕ್ಷೆಯಲ್ಲಿ ನೀವು ಪಡೆದ ಒಟ್ಟು ಅಂಕಗಳನ್ನು ಶೇಕಡ 85 ಕ್ಕೆ (85%) ಇಳಿಸಲಾಗುತ್ತದೆ.
- ಈ 85% ಅಂಕಗಳ ಜೊತೆಗೆ ಸಂದರ್ಶನದಲ್ಲಿ ನೀವು ಗಳಿಸಿದ ಅಂಕಗಳನ್ನು (15 ಕ್ಕೆ) ಒಟ್ಟುಗೂಡಿಸಲಾಗುತ್ತದೆ.
- ಹೀಗೆ ಬಂದ ಅಂತಿಮ ಅಂಕಗಳ ಆಧಾರದ ಮೇಲೆ ಅಂತಿಮ ಅರ್ಹತಾ ಪಟ್ಟಿಯನ್ನು (Merit List) ತಯಾರಿಸಿ, ಮೀಸಲಾತಿ ನಿಯಮಗಳನ್ನು ಅನುಸರಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
- ವಿಶೇಷ ಸೂಚನೆ (Tie-Breaker): ಒಂದು ವೇಳೆ ಲಿಖಿತ ಪರೀಕ್ಷೆಯಲ್ಲಿ ಒಂದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಸಮಾನವಾದ ಅಂಕಗಳನ್ನು ಪಡೆದರೆ, ಸರ್ಕಾರಿ ನೇಮಕಾತಿ ನಿಯಮಾವಳಿ ಪ್ರಕಾರ ಹೆಚ್ಚಿನ ವಯಸ್ಸಿನ (ಹಿರಿಯ) ಅಭ್ಯರ್ಥಿಗೆ ಸಂದರ್ಶನಕ್ಕೆ ಹಾಜರಾಗಲು ಮೊದಲ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ? (How to Apply)
- ಅಭ್ಯರ್ಥಿಗಳು ಬಳ್ಳಾರಿ ಡಿಸಿಸಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ www.bellarydcc.bank.in ಗೆ ಭೇಟಿ ನೀಡಬೇಕು.
- 'BDCC RECRUITMENT 2026' ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಮೂಲ ವಿವರಗಳನ್ನು (ಮೊಬೈಲ್ ನಂಬರ್, ಇಮೇಲ್, ಜನ್ಮ ದಿನಾಂಕ) ನೀಡಿ OTP ಮೂಲಕ ನೊಂದಣಿ (Register) ಮಾಡಿಕೊಳ್ಳಿ.
- ಲಾಗಿನ್ ಆಗಿ ಅರ್ಜಿಯನ್ನು ಭರ್ತಿ ಮಾಡಿ, ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
- ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ, ಅರ್ಜಿಯ ಪ್ರಿಂಟ್ ಔಟ್ / ಡೌನ್‌ಲೋಡ್ ಕಾಪಿಯನ್ನು ನಿಮ್ಮ ಬಳಿ ಸುರಕ್ಷಿತವಾಗಿರಿಸಿಕೊಳ್ಳಿ.
- ಸೂಚನೆ: ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ/ಕೊರಿಯರ್ ಮೂಲಕ ಕಳುಹಿಸಲು ಅವಕಾಶವಿರುವುದಿಲ್ಲ. ಕೇವಲ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 06-04-2026.
- ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ: 06-05-2026 (ರಾತ್ರಿ 11.59 ರವರೆಗೆ).
ಇದೇ ರೀತಿಯ ದಿನನಿತ್ಯದ ಉದ್ಯೋಗ ಮಾಹಿತಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್‌ಗಳಿಗಾಗಿ ನಿರಂತರವಾಗಿ KPSCVaani ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ.
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
Application End Date: 6 ಮೇ 2026
Employment Type: FULL_TIME
Hiring Organization: Bellary DCC bank https://bellarydcc.bank.in/index.html
Job Location: KA,

Comments