💡 ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೇಮಕಾತಿ 2025 – SSLC ಪಾಸಾದವರಿಗೆ ಇಲ್ಲಿದೆ ಸುವರ್ಣಾವಕಾಶ! ✨

SSLC ಪಾಸಾದ ಹಾಗೂ ITI ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉತ್ಸಾಹ ಮೂಡಿಸುವ ಸರ್ಕಾರಿ ಉದ್ಯೋಗದ ಸುದ್ದಿ! ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತನ್ನ 2025 ನೇ ಸಾಲಿನ 58 ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಭಾರತದ ಪ್ರಮುಖ ರಕ್ಷಣಾ ಪಿಎಸ್‌ಯು ಸಂಸ್ಥೆಯಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಇದು ಚಿನ್ನದ ಅವಕಾಶವಾಗಿದೆ.
ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ನವರತ್ನ ಕಂಪನಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆಯಿಂದ 2025ನೇ ಸಾಲಿನ 58 ಹುದ್ದೆಗಳ ಭರ್ಜರಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಎಂಜಿನಿಯರಿಂಗ್ ಸಹಾಯಕ ತರಬೇತಿದಾರರು, ತಂತ್ರಜ್ಞ ಸಿ ಮತ್ತು ಹಿರಿಯ ಸಹಾಯಕ ಎಂಜಿನಿಯರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಾಗುತ್ತದೆ. ಈ ಅವಕಾಶ SSLC ಪಾಸಾದ ಹಾಗೂ ITI ತರಬೇತಿ ಪಡೆದ ಅಭ್ಯರ್ಥಿಗಳಿಗೆ ಸುವರ್ಣಾವಕಾಶವಾಗಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆಯು ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಉದ್ಯೋಗಾವಕಾಶಗಳಿದ್ದು, ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಆಸಕ್ತರು30/10/2025ರರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ರಾಜ್ಯಗಳಲ್ಲಿ ಜಾಬ್ಸ್ ಹುಡುಕುತ್ತಿರುವವರಿಗೆ ಇದು ಅತ್ಯುತ್ತಮ ಸರ್ಕಾರಿ ಉದ್ಯೋಗ ಅವಕಾಶ. ನೀವು ಎಲ್ಲಾ ವಿವರಗಳನ್ನು ಕ್ರಮವಾಗಿ ಓದಿ ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಬಹುದು. ಈ ಬ್ಲಾಗ್ ಪೋಸ್ಟ್‌ನಲ್ಲಿ, ನಾವು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೇಮಕಾತಿ 2025ರ ಪ್ರಮುಖ ವಿವರಗಳು, ಖಾಲಿ ಹುದ್ದೆಗಳ ವಿವರವಾದ ಮಾಹಿತಿ, ಅರ್ಹತಾ ಮಾನದಂಡಗಳು ಮತ್ತು ಅಧಿಕೃತ ಸಂಪರ್ಕ ಮಾಹಿತಿಯನ್ನು ವಿವರವಾಗಿ ಚರ್ಚಿಸಲಿದ್ದೇವೆ. ಆಸಕ್ತ ಅಭ್ಯರ್ಥಿಗಳು ಮುಂದೆ ಓದಿ ಈ ಅವಕಾಶವನ್ನು ಪಡೆಯಲು ಸಿದ್ಧರಾಗಿ!
📌 BEL ಹುದ್ದೆಯ ಅಧಿಸೂಚನೆ
ಸಂಸ್ಥೆಯ ಹೆಸರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ( BEL )
ಹುದ್ದೆಗಳ ಸಂಖ್ಯೆ: 58
ಉದ್ಯೋಗ ಸ್ಥಳ: ಕರ್ನಾಟಕ - ಕೇರಳ - ಮಹಾರಾಷ್ಟ್ರ - ಉತ್ತರ ಪ್ರದೇಶ
ಹುದ್ದೆಯ ಹೆಸರು: ಎಂಜಿನಿಯರಿಂಗ್ ಸಹಾಯಕ ತರಬೇತಿ, ಹಿರಿಯ ಸಹಾಯಕ ಎಂಜಿನಿಯರ್
ಸಂಬಳ: ತಿಂಗಳಿಗೆ ರೂ.21500-120000/-
Comments