ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್(BEL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ನವರತ್ನ ಸಂಸ್ಥೆಯಲ್ಲಿ ಒಂದಾಗಿರುವ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್(BEL)ನಲ್ಲಿ ಖಾಲಿ ಇರುವ 111 ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಟ್ರೇನಿ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ23/11/2022 ರೊಳಗೆ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಳಾಸ :
Manager (HR),
Product Development & Innovation Centre (PDIC),
Bharat Electronics Limited,
Prof. U R Rao Road, Near Nagaland Circle,
Jalahalli Post, Bengaluru – 560 013, India.
ಹುದ್ದೆಗಳ ವಿವರ : 111
- ಟ್ರೇನಿ ಇಂಜಿನಿಯರಿಂಗ್ - 50
- ಪ್ರಾಜೆಕ್ಟ್ ಇಂಜಿನಿಯರಿಂಗ್ - 61
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
- ಟ್ರೇನಿ ಇಂಜಿನಿಯರಿಂಗ್ ಹುದ್ದೆಗಳಿಗೆ 150/- ರೂ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
- ಪ್ರಾಜೆಕ್ಟ್ ಇಂಜಿನಿಯರಿಂಗ್ ಹುದ್ದೆಗಳಿಗೆ 400/- ರೂ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
- SC ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಇರುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 32ವರ್ಷಗಳ ವಯೋಮಿತಿಯನ್ನು ಮೀರಿರಬಾರದು,
OBC ಅಭ್ಯರ್ಥಿಗಳು 3 ವರ್ಷ
SC/ST ಅಭ್ಯರ್ಥಿಗಳು 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
ಟ್ರೇನಿ ಇಂಜಿನಿಯರ್ ಹುದ್ದೆಗಳಿಗೆ
- 1ನೇ ವರ್ಷ 30,000/-
- 2ನೇ ವರ್ಷ 35,000/-
- 3ನೇ ವರ್ಷ 40,000/- ಮಾಸಿಕ ವೇತನ ಇರಲಿದ
ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ
- 1ನೇ ವರ್ಷ 40,000/-
- 2ನೇ ವರ್ಷ 45,000/-
- 3ನೇ ವರ್ಷ 50,000/-
- 4ನೇ ವರ್ಷ 55,000/- ಮಾಸಿಕ ವೇತನ ಇರಲಿದೆ
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments