ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ ಖಾಲಿ ಇರುವ 125 ಟ್ರೈನೀ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ
Published by: Hanamant Katteppanavar | Date:24 ನವೆಂಬರ್ 2020

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ ಖಾಲಿ ಇರುವ 125 ವಿವಿಧ ತರಬೇತಿ ಎಂಜಿನಿಯರ್ ಹಾಗೂ ಟ್ರೈನಿ ಆಫೀಸರ್ ಹುದ್ದೆಗಳನ್ನು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಫೈನಾನ್ಸ್, ಸಿವಿಲ್, ಎಲೆಕ್ಟ್ರಿಕಲ್ ಮತ್ತು ಹ್ಯೂಮನ್ ರಿಸೋರ್ಸ್(HR) ವಿಭಾಗಗಳಲ್ಲಿ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ಪಡೆಯಬಹುದಾಗಿದೆ.
ಹುದ್ದೆಗಳ ವಿವರ:
- ಟ್ರೈನಿ ಎಂಜಿನಿಯರ್ - 60 ಹುದ್ದೆಗಳು
- ಟ್ರೈನಿ ಎಂಜಿನಿಯರ್- 35 ಹುದ್ದೆಗಳು
- ಪ್ರಾಜೆಕ್ಟ್ ಎಂಜಿನಿಯರ್- 29 ಹುದ್ದೆಗಳು
- ಟ್ರೈನಿ ಆಫೀಸರ್ - 02 ಹುದ್ದೆಗಳು
- ಪ್ರಾಜೆಕ್ಟ್ ಆಫೀಸರ್ - 01 ಹುದ್ದೆಗಳು
No. of posts: 125
Application Start Date: 4 ನವೆಂಬರ್ 2020
Application End Date: 25 ನವೆಂಬರ್ 2020
Selection Procedure: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆಯ ಹಾಗೂ ಕೆಲಸದ ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುವದು.
Qualification:
ಹುದ್ದೆಗಳಿಗೆ ಅನುಗುಣವಾಗಿ BE /ಬಿ.ಟೆಕ್ /ಬಿ.ಎಸ್ಸಿ ( ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, E&C, ಸಿವಿಲ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್), MBA ( ಫೈನಾನ್ಸ್,ಎಂಎಸ್ ಡಬ್ಲ್ಯೂ (HRM) ವಿದ್ಯಾರ್ಹತೆಯನ್ನು ಕೇಳಲಾಗಿದೆ.
Fee:
- ಪ್ರಾಜೆಕ್ಟ್ ಎಂಜಿನಿಯರ್ / ಅಧಿಕಾರಿ -I: General / OBC ಅಭ್ಯರ್ಥಿಗಳು- 500 ರೂ
- ಪ್ರಾಜೆಕ್ಟ್ ಎಂಜಿನಿಯರ್ / ತರಬೇತಿ ಎಂಜಿನಿಯರ್ : General / OBC ಅಭ್ಯರ್ಥಿಗಳು -200 ರೂ
- ಎಸ್‌ಸಿ / ಎಸ್‌ಟಿ ಮತ್ತು ಪಿಡಬ್ಲ್ಯುಡಿ: ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವನ್ನು ಇರುವುದಿಲ್ಲ.
Age Limit:
ದಿನಾಂಕ ನವೆಂಬರ್ 1, 2020 ಕ್ಕೆ ಅನ್ವಯಿಸುವಂತೆ ಟ್ರೈನಿ ಎಂಜಿನಿಯರ್, ಆಫೀಸರ್- ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 25 ವರ್ಷ ವಯೋಮಿತಿಯನ್ನು ಮೀರಿರಬಾರದು.
ಹಾಗೂ ಟ್ರೈನಿ ಎಂಜಿನಿಯರ್ಸ್- II / ಪ್ರಾಜೆಕ್ಟ್ ಎಂಜಿನಿಯರ್ / ಆಫೀಸರ್ ಹುದ್ದೆಗಳಿಗೆ ಗರಿಷ್ಠ 28 ವರ್ಷ ವಯೋಮಿತಿಯನ್ನು ಮೀರಿರಬಾರದು.
- OBC ಅಭ್ಯರ್ಥಿಗಳಿಗೆ- 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ - 5 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
Pay Scale: ಈ ಹುದ್ದೆಗಳಿಗೆ ಪ್ರತಿ ತಿಂಗಳು 25,000 ರೂ. ದಿಂದ 50,000 ರೂ ವೇತನ ನಿಗದಿಪಡಿಸಲಾಗಿದೆ





Comments