ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿಯನ್ನು ಹೊಂದಿರತಕ್ಕದ್ದು.
ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಟ 18 ರಿಂದ ಗರಿಷ್ಟ 35 ವರ್ಷ
ಪ್ರವರ್ಗ-2A, 2B, 3A ಮತ್ತು 3B ಅಭ್ಯರ್ಥಿಗಳಿಗೆ ಕನಿಷ್ಟ 18 ರಿಂದ ಗರಿಷ್ಟ 38 ವರ್ಷ ಮತ್ತು
SC/ST/CAT-1ರ ಅಭ್ಯರ್ಥಿಗಳಿಗೆ ಕನಿಷ್ಟ 18 ರಿಂದ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ವಿವಿಧ ವೇತನವನ್ನು ನಿಗದಿಗೊಳಿಸಿದೆ.
ವೈದ್ಯಾಧಿಕಾರಿಗಳು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 45,000/-ರೂ,
ಹಿರಿಯ ಕ್ಷಯರೋಗಿ ಮೇಲ್ವಿಚಾರಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21,000/-ರೂ,
ಕ್ಷಯರೋಗ ಸಂದರ್ಶಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,850/-ರೂ,
ಅಕೌಂಟೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,697/-ರೂ,
ಕೌನ್ಸಿಲರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 13,283/-ರೂ ಮತ್ತು
ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 14,000/-ರೂ ವೇತನವನ್ನು ನೀಡಲಾಗುವುದು.





Comments