Loading..!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಖಾಲಿ ಇರುವ ವಿವಿಧ 42 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:21 ಡಿಸೆಂಬರ್ 2019
not found
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಘನತ್ಯಾಜ್ಯ ಮತ್ತು ಕೆರೆ ನಿರ್ವಹಣೆ ವಿಭಾಗದಲ್ಲಿ ಖಾಲಿ ಇರುವ ಎಂಜಿನಿಯರಿಂಗ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಬಿಬಿಎಂಪಿಯು ಘನತ್ಯಾಜ್ಯ ನಿರ್ವಹಣೆ ವಿಭಾಗಕ್ಕೆ ಎನ್ವಿರಾನ್ಮೆಂಟಲ್ ಎಂಜಿನಿಯರ್ಗಳನ್ನು ಮತ್ತು ಕೆರೆಗಳ ವಿಭಾಗಕ್ಕೆ ಸಿವಿಲ್ ಎಂಜಿನಿಯರ್ಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು ಈ ಗುತ್ತಿಗೆ ಅವಧಿಯು ಒಂದು ವರ್ಷಗಳ ಅವಧಿಯದ್ದಾಗಿರುತ್ತದೆ.

ಈ ಹುದ್ದೆಗಳಿಗೆ ಡಿಸೆಂಬರ್ 23, 2019 ರಂದು ನೇರ ಸಂದರ್ಶನವನ್ನು ಏರ್ಪಡಿಸಲಾಗಿದ್ದು, ಸಂದರ್ಶನವು "ಐಪಿಪಿ ಸೆಂಟರ್, 16 ನೇ ಅಡ್ಡ ರಸ್ತೆ, ಚೌಡಯ್ಯ ಮೆಮೋರಿಯಲ್ ಹಾಲ್ ಎದುರು, ಮಲ್ಲೇಶ್ವರಂ, ಬೆಂಗಳೂರು-560003" ಇಲ್ಲಿ ಏರ್ಪಡಿಸಲಾಗಿರುತ್ತದೆ.
ಅಭ್ಯರ್ಥಿಗಳು ಆ ದಿನ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯ ನಡುವೆ ತಮ್ಮ ಹೆಸರನ್ನು ನೋಂದಾಯಿಸಿ ಸಂದರ್ಶನಕ್ಕೆ ಹಾಜರಾಗಬೇಕು, ಹಾಗೂ ಹಾಜರಾಗುವ ಮುನ್ನ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಯನ್ನು ಜೊತೆಗೆ ಒಂದು ಗುರುತಿನ ಚೀಟಿಯನ್ನು ತೆಗೆದುಕೊಂಡು ಹಾಜರಾಗಬೇಕು.
No. of posts:  42
Application End Date:  23 ಡಿಸೆಂಬರ್ 2019
Selection Procedure: ನೇರ ಸಂದರ್ಶನದ ಮೂಲಕ
Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿಯನ್ನು ಕನಿಷ್ಠ ಶೇಕಡ 60% ಕ್ಕಿಂತ ಕಡಿಮೆ ಇಲ್ಲದಂತೆ ಪಾಸಾಗಿರಬೇಕು.
Age Limit: ಈ ಎಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 35 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
Pay Scale: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಸುಮಾರು 40,000 ಮಾಸಿಕ ವೇತನ ನೀಡಲಾಗುವುದು
PDO ಮತ್ತು GPS ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments