Loading..!

ಬ್ಯಾಂಕ್ ಆಫ್ ಮಹಾರಾಷ್ಟ್ರ (BOM) ದಲ್ಲಿ ಖಾಲಿ ಇರುವ 600 ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree
Published by: Yallamma G | Date:24 ಅಕ್ಟೋಬರ್ 2024
not found

ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ) ದಲ್ಲಿ ಖಾಲಿ ಇರುವ 600 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತದೆಲ್ಲೆಡೆ ಪೂರ್ಣ ಸಮಯದ ಆಧಾರದ ಮೇಲೆ ಕೆಲಸ ಮಾಡಲು ಸಿದ್ಧರಿರುವ ಆಸಕ್ತ  ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕದಲ್ಲಿ 21 ಹುದ್ದೆಗಳು ಖಾಲಿ ಇವೆ. 

ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳೆಗೆ ನೀಡಲಾಗಿದೆ.

No. of posts:  600
Application Start Date:  15 ಅಕ್ಟೋಬರ್ 2024
Application End Date:  24 ಅಕ್ಟೋಬರ್ 2024
Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯನ್ನು ಮಾಡುವ ಮೂಲಕ ಆಯ್ಕೆ ಮಾಡಲಾಗುವುದು.
Qualification: ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ವಿದ್ಯಾರ್ಹತೆ ಹೊಂದಿರಬೇಕು.
Fee:

* ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ/ಆರ್ಥಿಕವಾಗಿ ಹಿಂದುಳಿದ/ಓಬಿಸಿ ಅಭ್ಯರ್ಥಿಗಳು 150/-ರೂ ಮತ್ತು
* ಪರಿಶಿಷ್ಟ ಪಂಗಡ/ಪರಿಶಿಷ್ಟ ಜಾತಿ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ.
* ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

Age Limit:

* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 28 ವರ್ಷ ವಯೋಮಿತಿಯೊಳಗಿರಬೇಕು.
* ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

Employment Type: FULL_TIME
Hiring Organization: KPSC Vaani https://www.kpscvaani.com
Work Location: ಭಾರತದಾದ್ಯಂತ, KA,
To Download Official Notification
Related Tags: Degree

Comments