Loading..!

ಪದವಿ ಪಾಸಾದ ಅಭ್ಯರ್ಥಿಗಳಿಗೆ ಇದೀಗ Good News - ಬ್ಯಾಂಕ್ ಆಫ್ ಇಂಡಿಯಾದಲ್ಲಿ 400 ಅಪ್ರೆಂಟಿಸ್ ಹುದ್ದೆಗಳ ಭರ್ಜರಿ ನೇಮಕಾತಿ!
Tags: Degree
Published by: Yallamma G | Date:27 ಡಿಸೆಂಬರ್ 2025
not found

🏦 ಈಗ ಬ್ಯಾಂಕ್ ಉದ್ಯೋಗದಲ್ಲಿ ಸ್ಥಿರತೆ ಮತ್ತು ಭದ್ರತೆ ಬಯಸುತ್ತಿದ್ದೀರಾ? ನಿಮ್ಮ ಅವಕಾಶ ಇಲ್ಲಿದೆ! 


                 ಬ್ಯಾಂಕ್ ಆಫ್ ಇಂಡಿಯಾ (BOI) 2025-26 ರ ನೇಮಕಾತಿ ಅಧುಸೂಚನೆಯನ್ನು ಪ್ರಕಟಿಸಿದೆ. ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಟ್ಟು 400 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ - ಈ ಮಾಹಿತಿ ನಿಮ್ಮ ಬದುಕನ್ನೇ ಬದಲಾಯಿಸಬಹುದು. ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಮುಗಿಯಲಿದೆ. ಯಾವುದೇ ಪದವಿಯನ್ನು ಪಾಸಾದ ಅಭ್ಯಥಿಗಳಿಗೆ ಸರ್ಕಾರಿ ಕೆಲಸ ಪಡೆಯಲು ಇದೊಂದು ಸುವರ್ಣಾವಕಾಶ!


           ಸಾರ್ವಜನಿಕ ಕ್ಷೇತ್ರದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ  ಬ್ಯಾಂಕ್ ಆಫ್ ಇಂಡಿಯಾ (BOI) 2025-26ನೇ ಸಾಲಿಗಾಗಿ ವಿವಿಧ ವೇತನ ಶ್ರೇಣಿಯ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಭಾರತದಾದ್ಯಂತ ಒಟ್ಟು 400 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಭಾರತದೆಲ್ಲೆಡೆ ಸರ್ಕಾರಿ ಬ್ಯಾಂಕ್ ಉದ್ಯೋಗವನ್ನು ಬಯಸುವವರಿಗೆ ಇದು ದೊಡ್ಡ ಅವಕಾಶವಾಗಿದೆ.


                  ಬ್ಯಾಂಕ್ ಉದ್ಯೋಗಕ್ಕಾಗಿ ನಿರೀಕ್ಷಿಸುತ್ತಿರುವ ಯುವಕರಿಗೆ ಇದು ಅಸಾಧಾರಣ ಅವಕಾಶ. ಪದವಿ ಪಾಸಾದ ಯುವಕ ಯುವತಿಯರಿಗೆ ಇದು ಉಜ್ವಲ ಅವಕಾಶವಾಗಿದ್ದು, ಇದು ನಿಮ್ಮ ಸರ್ಕಾರ ಉದ್ಯೋಗದ ಕನಸು ಸಾಕಾರಗೊಳಿಸಬಹುದಾದ ಸನ್ನಿವೇಶವಾಗಿದೆ. ಉತ್ಸಾಹಿ ಮತ್ತು ಅರ್ಹ ಭಾರತದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2026ರ ಜನವರಿ 10ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


📌ಹುದ್ದೆಗಳ ಪ್ರಮುಖ ವಿವರಗಳು : 


🏛️ಬ್ಯಾಂಕ್ ಹೆಸರು:  ಬ್ಯಾಂಕ್ ಆಫ್ ಇಂಡಿಯಾ (BOI)
🧾ಒಟ್ಟು ಹುದ್ದೆಗಳು: 400
👨‍💼ಹುದ್ದೆಯ ಹೆಸರು: ಅಪ್ರೆಂಟಿಸ್ 
📍ಉದ್ಯೋಗ ಸ್ಥಳ: ಅಖಿಲ ಭಾರತ
💰ವೇತನ ಶ್ರೇಣಿ: ತಿಂಗಳಿಗೆ ರೂ. 13,000/-

ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ


🎓 ಅರ್ಹತಾ ಮಾನದಂಡ : ಯಾವುದೇ ವಿಭಾಗದಲ್ಲಿ ಪದವಿ ಅಥವಾ ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಮಂಡಳಿ/ ಸಂಸ್ಥೆಯಿಂದ ತತ್ಸಮಾನ ಅರ್ಹತೆ ಹಾಗೂ ಸ್ಥಳೀಯ ಭಾಷೆಯ ಜ್ಞಾನ.
ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ, ದಯವಿಟ್ಟು ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ನೇಮಕಾತಿ ಪರೀಕ್ಷಾ ಅಧಿಸೂಚನೆ 2026 ಅನ್ನು ಓದಿ.



⏳ ವಯಸ್ಸಿನ ಮಿತಿ:ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01-12-2025 ರಂತೆ ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು.
✅ ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು
SC, ST ಅಭ್ಯರ್ಥಿಗಳು: 5 ವರ್ಷಗಳು
ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು: 10 ವರ್ಷಗಳು


💰 ಮಾಸಿಕ ವೇತನ : ತಿಂಗಳಿಗೆ ₹13,000/-. ಸರ್ಕಾರಿ ಮಾನದಂಡಗಳ ಪ್ರಕಾರ ಇತರ ಭತ್ಯೆಗಳು ಇರಲಿದೆ. 


💸ಅರ್ಜಿ ಶುಲ್ಕ :
ಸಾಮಾನ್ಯ ಅಭ್ಯರ್ಥಿಗಳು: ರೂ. 800/-
ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು: ರೂ. 600/-
ಪಿಡಬ್ಲ್ಯೂಡಿ ಅಭ್ಯರ್ಥಿಗಳು: ರೂ. 400/-
ಪಾವತಿ ವಿಧಾನ: ಆನ್‌ಲೈನ್


📥ಆಯ್ಕೆ ವಿಧಾನ :
ಲಿಖಿತ ಪರೀಕ್ಷೆ
ಸಂದರ್ಶನ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ.


🧭ಪರೀಕ್ಷಾ ಮಾದರಿ :
=> ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಪರೀಕ್ಷೆಯು ಆನ್‌ಲೈನ್ ಪರೀಕ್ಷೆಯಾಗಿದೆ.
=> ಪ್ರಶ್ನೆಗಳು ಬಹು ಆಯ್ಕೆಯ ಪ್ರಶ್ನೆಗಳಾಗಿರುತ್ತವೆ.
=> ಪರೀಕ್ಷೆಯು ಸಾಮಾನ್ಯ / ಆರ್ಥಿಕ ಜಾಗೃತಿ, ಇಂಗ್ಲಿಷ್ ಭಾಷೆ, ಪರಿಮಾಣಾತ್ಮಕ ಮತ್ತು ತಾರ್ಕಿಕ => ಸಾಮರ್ಥ್ಯ ಮತ್ತು ಕಂಪ್ಯೂಟರ್ ಜ್ಞಾನ ವಿಷಯಗಳಿಂದ ತಲಾ 100 ಅಂಕಗಳಿಗೆ 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
=> ಪರೀಕ್ಷೆಯ ಅವಧಿ 90 ನಿಮಿಷಗಳು.
=> ಇಂಗ್ಲಿಷ್ ವಿಷಯವನ್ನು ಹೊರತುಪಡಿಸಿ, ಪ್ರಶ್ನೆಗಳು ದ್ವಿಭಾಷಾ ಭಾಷೆಯಲ್ಲಿರುತ್ತವೆ.


ಸಾಮಾನ್ಯ / ಆರ್ಥಿಕ ಅರಿವು 25 ಪ್ರಶ್ನೆಗಳು 25 ಅಂಕಗಳು 
ಆಂಗ್ಲ ಭಾಷೆ 25 ಪ್ರಶ್ನೆಗಳು 25 ಅಂಕಗಳು 
ಪರಿಮಾಣಾತ್ಮಕ ಮತ್ತು ತಾರ್ಕಿಕ ಸಾಮರ್ಥ್ಯ 25 ಪ್ರಶ್ನೆಗಳು 25 ಅಂಕಗಳು 
ಕಂಪ್ಯೂಟರ್ ಜ್ಞಾನ 75 ಪ್ರಶ್ನೆಗಳು 75 ಅಂಕಗಳು 


💻 ಅರ್ಜಿ ಸಲ್ಲಿಸುವ ವಿಧಾನ : ಬ್ಯಾಂಕ್ ಆಫ್ ಇಂಡಿಯಾ (BOI ಬ್ಯಾಂಕ್) ನಲ್ಲಿ ಡಿಸೆಂಬರ್ 27, 2025 ರಿಂದ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ 2025 ಗಾಗಿ bankofindia.bank.in, ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025 ಪ್ರಾರಂಭವಾಗಲಿದೆ. ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಆನ್‌ಲೈನ್ ನೋಂದಣಿ ಅರ್ಜಿ ನಮೂನೆ 2025 ಲಿಂಕ್‌ಗಾಗಿ ಈ ಹಂತಗಳನ್ನು ಅನುಸರಿಸಿ.


1. ಮೊದಲನೆಯದಾಗಿ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಆಫೀಸ್ ಅಧಿಸೂಚನೆ 2025 PDF ಅನ್ನು ಪರಿಶೀಲಿಸಬೇಕು.
2. ಕೆಳಗೆ ನೀಡಲಾದ ಆನ್‌ಲೈನ್ ಅರ್ಜಿ ಲಿಂಕ್ ಅನ್ನು ಕ್ಲಿಕ್ ಮಾಡಿ ಅಥವಾ ಪ್ರಾಧಿಕಾರದ
3. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, bankofindia.bank.in ಬ್ಯಾಂಕ್ ಆಫ್ ಇಂಡಿಯಾ ಕ್ರೆಅಪ್ರೆಂಟಿಸ್ ನೇಮಕಾತಿ 2025.
4. ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಆನ್‌ಲೈನ್ ಅರ್ಜಿ ನಮೂನೆ 2025 ಅನ್ನು ಭರ್ತಿ ಮಾಡಿ.
5. ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
6. ಅರ್ಜಿ ಶುಲ್ಕವನ್ನು ಪಾವತಿಸಿ.
7. ಅಂತಿಮವಾಗಿ, ಅರ್ಜಿ ನಮೂನೆಯನ್ನು ಮುದ್ರಿಸಿ.


📅 ಪ್ರಮುಖ ದಿನಾಂಕಗಳು :
✅ ಅಧಿಸೂಚನೆ ದಿನಾಂಕ: 23 ಡಿಸೆಂಬರ್ 2025
✅ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 25 ಡಿಸೆಂಬರ್ 2025
✅ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಜನವರಿ 2026
✅ ಶುಲ್ಕ ಪಾವತಿ ದಿನಾಂಕ: 10 ಜನವರಿ 2026
✅ ತಿದ್ದುಪಡಿ ದಿನಾಂಕ: ವೇಳಾಪಟ್ಟಿಯ ಪ್ರಕಾರ


👉 ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಸಲು BOI ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ.

Application End Date:  10 ಜನವರಿ 2026
To Download Official Notification

Comments