ಪದವಿ ಪಾಸಾದ ಅಭ್ಯರ್ಥಿಗಳಿಗೆ ಇದೀಗ Good News - ಬ್ಯಾಂಕ್ ಆಫ್ ಇಂಡಿಯಾದಲ್ಲಿ 514 ಕ್ರೆಡಿಟ್ ಆಫೀಸರ್ ಹುದ್ದೆಗಳ ಭರ್ಜರಿ ನೇಮಕಾತಿ!

🏦 ಈಗ ಬ್ಯಾಂಕ್ ಉದ್ಯೋಗದಲ್ಲಿ ಸ್ಥಿರತೆ ಮತ್ತು ಭದ್ರತೆ ಬಯಸುತ್ತಿದ್ದೀರಾ? ನಿಮ್ಮ ಅವಕಾಶ ಇಲ್ಲಿದೆ!
ಬ್ಯಾಂಕ್ ಆಫ್ ಇಂಡಿಯಾ (BOI) 2025-26 ರ ನೇಮಕಾತಿ ಅಧುಸೂಚನೆಯನ್ನು ಪ್ರಕಟಿಸಿದೆ. ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಟ್ಟು 514 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ - ಈ ಮಾಹಿತಿ ನಿಮ್ಮ ಬದುಕನ್ನೇ ಬದಲಾಯಿಸಬಹುದು. ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಮುಗಿಯಲಿದೆ. ಯಾವುದೇ ಪದವಿಯನ್ನು ಪಾಸಾದ ಅಭ್ಯಥಿಗಳಿಗೆ ಸರ್ಕಾರಿ ಕೆಲಸ ಪಡೆಯಲು ಇದೊಂದು ಸುವರ್ಣಾವಕಾಶ!
ಸಾರ್ವಜನಿಕ ಕ್ಷೇತ್ರದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ (BOI) 2025-26ನೇ ಸಾಲಿಗಾಗಿ ವಿವಿಧ ವೇತನ ಶ್ರೇಣಿಯ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಭಾರತದಾದ್ಯಂತ ಒಟ್ಟು 514 ಕ್ರೆಡಿಟ್ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಭಾರತದೆಲ್ಲೆಡೆ ಸರ್ಕಾರಿ ಬ್ಯಾಂಕ್ ಉದ್ಯೋಗವನ್ನು ಬಯಸುವವರಿಗೆ ಇದು ದೊಡ್ಡ ಅವಕಾಶವಾಗಿದೆ.
ಬ್ಯಾಂಕ್ ಉದ್ಯೋಗಕ್ಕಾಗಿ ನಿರೀಕ್ಷಿಸುತ್ತಿರುವ ಯುವಕರಿಗೆ ಇದು ಅಸಾಧಾರಣ ಅವಕಾಶ. ಪದವಿ ಪಾಸಾದ ಯುವಕ ಯುವತಿಯರಿಗೆ ಇದು ಉಜ್ವಲ ಅವಕಾಶವಾಗಿದ್ದು, ಇದು ನಿಮ್ಮ ಸರ್ಕಾರ ಉದ್ಯೋಗದ ಕನಸು ಸಾಕಾರಗೊಳಿಸಬಹುದಾದ ಸನ್ನಿವೇಶವಾಗಿದೆ. ಉತ್ಸಾಹಿ ಮತ್ತು ಅರ್ಹ ಭಾರತದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2026ರ ಜನವರಿ 05ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
📌ಹುದ್ದೆಗಳ ಪ್ರಮುಖ ವಿವರಗಳು :
🏛️ಬ್ಯಾಂಕ್ ಹೆಸರು: ಬ್ಯಾಂಕ್ ಆಫ್ ಇಂಡಿಯಾ (BOI)
🧾ಒಟ್ಟು ಹುದ್ದೆಗಳು: 514
👨💼ಹುದ್ದೆಯ ಹೆಸರು: ಕ್ರೆಡಿಟ್ ಅಧಿಕಾರಿ
📍ಉದ್ಯೋಗ ಸ್ಥಳ: ಅಖಿಲ ಭಾರತ
💰ವೇತನ ಶ್ರೇಣಿ: ತಿಂಗಳಿಗೆ ರೂ. 64,820 – 1,20,940/-
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ
📌 ಹುದ್ದೆಗಳ ವಿವರ : 514
ಕ್ರೆಡಿಟ್ ಅಧಿಕಾರಿ (MMGS-II) : 418
ಕ್ರೆಡಿಟ್ ಅಧಿಕಾರಿ (MMGS-III) : 60
ಕ್ರೆಡಿಟ್ ಅಧಿಕಾರಿ (SMG-IV) : 36
🎓 ಅರ್ಹತಾ ಮಾನದಂಡ : (ಹುದ್ದೆಗನುಸಾರ ಈ ಕೆಳಗಿನಂತೆ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.
🔹 ಕ್ರೆಡಿಟ್ ಆಫೀಸ್ MMGS-II : ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ 03 ವರ್ಷಗಳ ಅನುಭವದೊಂದಿಗೆ ಪದವಿ ಅಥವಾ ತತ್ಸಮಾನ ಅರ್ಹತೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆ ಅಥವಾ ತತ್ಸಮಾನದಿಂದ 60% ಅಂಕಗಳೊಂದಿಗೆ (SC/ST/OBC/PwBD ಅಭ್ಯರ್ಥಿಗಳಿಗೆ 55%) ಅಂಕಗಳೊಂದಿಗೆ ಪದವಿ ಪಡೆದಿರಬೇಕು.
🎓 ಅರ್ಹತಾ ಮಾನದಂಡ : ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ 05 ವರ್ಷಗಳ ಅನುಭವದೊಂದಿಗೆ ಪದವಿ ಅಥವಾ ತತ್ಸಮಾನ ಅರ್ಹತೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆ ಅಥವಾ ತತ್ಸಮಾನದಿಂದ 60% ಅಂಕಗಳೊಂದಿಗೆ (SC/ST/OBC/PwBD ಅಭ್ಯರ್ಥಿಗಳಿಗೆ 55%) ಅಂಕಗಳೊಂದಿಗೆ ಪದವಿ ಪಡೆದಿರಬೇಕು.
🔹ಕ್ರೆಡಿಟ್ ಆಫೀಸ್ MMGS-IV : ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಪದವಿ, MBA/ PGDBM ಅಥವಾ ಯಾವುದೇ ಸ್ನಾತಕೋತ್ತರ ಪದವಿ ಅಥವಾ CA ಅಥವಾ ತತ್ಸಮಾನ ಅರ್ಹತೆ ಮತ್ತು 03 ವರ್ಷಗಳ ಅನುಭವ.
ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ, ದಯವಿಟ್ಟು ಬ್ಯಾಂಕ್ ಆಫ್ ಇಂಡಿಯಾ (BOI ಬ್ಯಾಂಕ್) ನೇಮಕಾತಿ ಪರೀಕ್ಷೆಯ ಅಧಿಸೂಚನೆ 2025 ಅನ್ನು ಓದಿ.
⏳ ವಯಸ್ಸಿನ ಮಿತಿ : ಹುದ್ದೆಗನುಸಾರ ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.
ಕ್ರೆಡಿಟ್ ಆಫೀಸರ್ MMGS-II: 25 ರಿಂದ 35 ವರ್ಷಗಳು\
ಕ್ರೆಡಿಟ್ ಆಫೀಸರ್ MMGS-III: 28 ರಿಂದ 38 ವರ್ಷಗಳು
ಕ್ರೆಡಿಟ್ ಆಫೀಸರ್ SMGS-IV: 30 ರಿಂದ 40 ವರ್ಷಗಳು
✅ ವಯೋಮಿತಿ ಸಡಿಲಿಕೆ :
- OBC (NCL) ಅಭ್ಯರ್ಥಿಗಳಿಗೆ : 3 ವರ್ಷ
- SC/ST ಮತ್ತುಮಜಿ ಸೈನಿಕ ಅಭ್ಯರ್ಥಿಗಳಿಗೆ : 5 ವರ್ಷ
- PwBDಅಭ್ಯರ್ಥಿಗಳಿಗೆ : 10 ವರ್ಷ
💰 ಮಾಸಿಕ ವೇತನ :
ಎಂಎಂಜಿಎಸ್-II : ರೂ. 64,820 – 2,340 – 67,160 – 2,680 – 93,960
ಎಂಎಂಜಿಎಸ್-III : ರೂ. 85,920 – 2,680 – 99,320 – 2,980 – 1,05,280
ಎಸ್‌ಎಂಜಿಎಸ್-IV : ರೂ. 1,02,300 – 2,980 – 1,14,220 – 3,360 – 1,20,940
💸ಅರ್ಜಿ ಶುಲ್ಕ :
ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳು: ರೂ. 850/-
SC, ST, PWD ಅಭ್ಯರ್ಥಿಗಳು: ರೂ. 175/-
ಪಾವತಿ ವಿಧಾನ: ಆನ್‌ಲೈನ್
📥ಆಯ್ಕೆ ವಿಧಾನ :
ಲಿಖಿತ ಪರೀಕ್ಷೆ
ಸಂದರ್ಶನ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ.
🧭ಪರೀಕ್ಷಾ ಮಾದರಿ :
=> ಪರೀಕ್ಷೆಯು ಇಂಗ್ಲಿಷ್ ಭಾಷೆಯನ್ನು ಹೊರತುಪಡಿಸಿ ದ್ವಿಭಾಷಾ (ಇಂಗ್ಲಿಷ್ ಮತ್ತು ಹಿಂದಿ) ಆಗಿರುತ್ತದೆ.
=> ಇಂಗ್ಲಿಷ್ ಭಾಷೆ ಅರ್ಹತಾ ಪರೀಕ್ಷೆಗೆ ಅರ್ಹವಾಗಿದೆ; ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸುವಾಗ ಅದರ ಅಂಕಗಳನ್ನು ಸೇರಿಸಲಾಗುವುದಿಲ್ಲ, ಆದರೆ ಅಭ್ಯರ್ಥಿಗಳು ಕನಿಷ್ಠ ಅರ್ಹತಾ ಅಂಕಗಳನ್ನು ಪಡೆಯಬೇಕು.
=> ಎಲ್ಲಾ ಪರೀಕ್ಷೆಗಳಲ್ಲಿ ಕನಿಷ್ಠ ಅರ್ಹತಾ ಅಂಕಗಳು ಸಾಮಾನ್ಯ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ 35 ಅಂಕಗಳು ಮತ್ತು ಎಸ್‌ಸಿ/ಎಸ್‌ಟಿ/ಒಬಿಸಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 5 ಅಂಕಗಳು ಕಡಿಮೆ.
=> ಪ್ರತಿ ತಪ್ಪು ಉತ್ತರಕ್ಕೆ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ ನಾಲ್ಕನೇ ಒಂದು ಭಾಗದಷ್ಟು ದಂಡವಿದೆ; ಉತ್ತರಿಸದ ಪ್ರಶ್ನೆಗಳಿಗೆ ಯಾವುದೇ ದಂಡವಿಲ್ಲ.
=> ಪರೀಕ್ಷೆಗೆ 120 ನಿಮಿಷಗಳು ಕಾಲಾವಕಾಶವನ್ನು ನೀಡಲಾಗಿದೆ.
ಆಂಗ್ಲ ಭಾಷೆ 25 ಪ್ರಶ್ನೆಗಳು 25 ಅಂಕಗಳು
ತಾರ್ಕಿಕ ಸಾಮರ್ಥ್ಯ 25 ಪ್ರಶ್ನೆಗಳು 25 ಅಂಕಗಳು
ಪರಿಮಾಣಾತ್ಮಕ ಯೋಗ್ಯತೆ 25 ಪ್ರಶ್ನೆಗಳು 25 ಅಂಕಗಳು
ವೃತ್ತಿಪರ ಜ್ಞಾನ 75 ಪ್ರಶ್ನೆಗಳು 75 ಅಂಕಗಳು
💻 ಅರ್ಜಿ ಸಲ್ಲಿಸುವ ವಿಧಾನ :ಬ್ಯಾಂಕ್ ಆಫ್ ಇಂಡಿಯಾ (BOI ಬ್ಯಾಂಕ್) ನಲ್ಲಿ ಡಿಸೆಂಬರ್ 20, 2025 ರಿಂದ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಆಫೀಸ್ ಭಾರ್ತಿ 2025 ಗಾಗಿ bankofindia.bank.in, ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಆಫೀಸ್ MMGS-II, MMGS-III ಮತ್ತು SMGS-IV ನೇಮಕಾತಿ 2025 ಪ್ರಾರಂಭವಾಗಲಿದೆ. ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಆಫೀಸ್ ಆನ್‌ಲೈನ್ ನೋಂದಣಿ ಅರ್ಜಿ ನಮೂನೆ 2025 ಲಿಂಕ್‌ಗಾಗಿ ಈ ಹಂತಗಳನ್ನು ಅನುಸರಿಸಿ.
1. ಮೊದಲನೆಯದಾಗಿ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಆಫೀಸ್ ಅಧಿಸೂಚನೆ 2025 PDF ಅನ್ನು ಪರಿಶೀಲಿಸಬೇಕು.
2. ಕೆಳಗೆ ನೀಡಲಾದ ಆನ್‌ಲೈನ್ ಅರ್ಜಿ ಲಿಂಕ್ ಅನ್ನು ಕ್ಲಿಕ್ ಮಾಡಿ ಅಥವಾ ಪ್ರಾಧಿಕಾರದ
3. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, bankofindia.bank.in ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಆಫೀಸ್ ನೇಮಕಾತಿ 2025.
4. ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಆಫೀಸ್ ಆನ್‌ಲೈನ್ ಅರ್ಜಿ ನಮೂನೆ 2025 ಅನ್ನು ಭರ್ತಿ ಮಾಡಿ.
5. ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
6. ಅರ್ಜಿ ಶುಲ್ಕವನ್ನು ಪಾವತಿಸಿ.
7. ಅಂತಿಮವಾಗಿ, ಅರ್ಜಿ ನಮೂನೆಯನ್ನು ಮುದ್ರಿಸಿ.
📅 ಪ್ರಮುಖ ದಿನಾಂಕಗಳು :
✅ ಅಧಿಸೂಚನೆ ದಿನಾಂಕ: 17 ಡಿಸೆಂಬರ್ 2025
✅ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20 ಡಿಸೆಂಬರ್ 2025
✅ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05 ಜನವರಿ 2026
✅ ಶುಲ್ಕ ಪಾವತಿ ದಿನಾಂಕ: 05 ಜನವರಿ 2026
✅ ತಿದ್ದುಪಡಿ ಕೊನೆಯ ದಿನಾಂಕ: ವೇಳಾಪಟ್ಟಿಯ ಪ್ರಕಾರ
👉 ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಸಲು BOI ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ.





Comments