Loading..!

ಪದವಿ ಪಾಸಾದ ಅಭ್ಯರ್ಥಿಗಳಿಗೆ ಇದೀಗ Good News - ಬ್ಯಾಂಕ್ ಆಫ್ ಇಂಡಿಯಾದಲ್ಲಿ 115 ಮ್ಯಾನೇಜರ್ ಹುದ್ದೆಗಳ ಭರ್ಜರಿ ನೇಮಕಾತಿ!
Tags: Degree
Published by: Yallamma G | Date:18 ನವೆಂಬರ್ 2025
not found

🏦 ಈಗ ಬ್ಯಾಂಕ್ ಉದ್ಯೋಗದಲ್ಲಿ ಸ್ಥಿರತೆ ಮತ್ತು ಭದ್ರತೆ ಬಯಸುತ್ತಿದ್ದೀರಾ? ನಿಮ್ಮ ಅವಕಾಶ ಇಲ್ಲಿದೆ! 


                 ಬ್ಯಾಂಕ್ ಆಫ್ ಇಂಡಿಯಾ (BOI) 2025-26 ರ ನೇಮಕಾತಿ ಅಧುಸೂಚನೆಯನ್ನು ಪ್ರಕಟಿಸಿದೆ. ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಟ್ಟು 115 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ - ಈ ಮಾಹಿತಿ ನಿಮ್ಮ ಬದುಕನ್ನೇ ಬದಲಾಯಿಸಬಹುದು. ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಮುಗಿಯಲಿದೆ. ಯಾವುದೇ ಪದವಿಯನ್ನು ಪಾಸಾದ ಅಭ್ಯಥಿಗಳಿಗೆ ಸರ್ಕಾರಿ ಕೆಲಸ ಪಡೆಯಲು ಇದೊಂದು ಸುವರ್ಣಾವಕಾಶ!


           ಸಾರ್ವಜನಿಕ ಕ್ಷೇತ್ರದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ  ಬ್ಯಾಂಕ್ ಆಫ್ ಇಂಡಿಯಾ (BOI) 2025-26ನೇ ಸಾಲಿಗಾಗಿ ವಿವಿಧ ವೇತನ ಶ್ರೇಣಿಯ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಭಾರತದಾದ್ಯಂತ ಒಟ್ಟು 115 ಮುಖ್ಯ ವ್ಯವಸ್ಥಾಪಕರು, ಹಿರಿಯ ವ್ಯವಸ್ಥಾಪಕರು ಮತ್ತು ಮೇನೇಜರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಭಾರತದೆಲ್ಲೆಡೆ ಸರ್ಕಾರಿ ಬ್ಯಾಂಕ್ ಉದ್ಯೋಗವನ್ನು ಬಯಸುವವರಿಗೆ ಇದು ದೊಡ್ಡ ಅವಕಾಶವಾಗಿದೆ.


                  ಬ್ಯಾಂಕ್ ಉದ್ಯೋಗಕ್ಕಾಗಿ ನಿರೀಕ್ಷಿಸುತ್ತಿರುವ ಯುವಕರಿಗೆ ಇದು ಅಸಾಧಾರಣ ಅವಕಾಶ. ಪದವಿ ಪಾಸಾದ ಯುವಕ ಯುವತಿಯರಿಗೆ ಇದು ಉಜ್ವಲ ಅವಕಾಶವಾಗಿದ್ದು, ಇದು ನಿಮ್ಮ ಸರ್ಕಾರ ಉದ್ಯೋಗದ ಕನಸು ಸಾಕಾರಗೊಳಿಸಬಹುದಾದ ಸನ್ನಿವೇಶವಾಗಿದೆ. ಉತ್ಸಾಹಿ ಮತ್ತು ಅರ್ಹ ಭಾರತದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2025ರ ನವೆಂಬರ್ 30ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


📌ಹುದ್ದೆಗಳ ಪ್ರಮುಖ ವಿವರಗಳು : 


🏛️ಬ್ಯಾಂಕ್ ಹೆಸರು:  ಬ್ಯಾಂಕ್ ಆಫ್ ಇಂಡಿಯಾ (BOI)
🧾ಒಟ್ಟು ಹುದ್ದೆಗಳು: 115
👨‍💼ಹುದ್ದೆಯ ಹೆಸರು: ಅಧಿಕಾರಿ (ಮ್ಯಾನೇಜರ್)
📍ಉದ್ಯೋಗ ಸ್ಥಳ: ಅಖಿಲ ಭಾರತ
💰ವೇತನ ಶ್ರೇಣಿ: ₹64,820 – ₹1,20,940 ಪ್ರತಿಮಾಸ

ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ

Application End Date:  30 ನವೆಂಬರ್ 2025
Selection Procedure:

📌 ಹುದ್ದೆಗಳ ವಿವರ : 115


ಮುಖ್ಯ ವ್ಯವಸ್ಥಾಪಕರು : 15
ಹಿರಿಯ ವ್ಯವಸ್ಥಾಪಕರು : 54 
ಕಾನೂನು ಅಧಿಕಾರಿ : 2
ವ್ಯವಸ್ಥಾಪಕ : 44


🎓 ಅರ್ಹತಾ ಮಾನದಂಡ :  (ಹುದ್ದೆಗನುಸಾರ ಈ ಕೆಳಗಿನಂತೆ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.
 ಮುಖ್ಯ ವ್ಯವಸ್ಥಾಪಕರು : ಬಿ.ಎಸ್ಸಿ, ಬಿಇ/ ಬಿ.ಟೆಕ್, ಎಂಇ/ ಎಂ.ಟೆಕ್, ಎಂಸಿಎ, ಎಂ.ಎಸ್ಸಿ, ಸ್ನಾತಕೋತ್ತರ ಪದವಿ
ಹಿರಿಯ ವ್ಯವಸ್ಥಾಪಕರು : ಬಿ.ಎಸ್ಸಿ, ಬಿಇ/ ಬಿ.ಟೆಕ್ , ಪದವಿ, ಎಂಇ/ ಎಂ.ಟೆಕ್, ಎಂಸಿಎ, ಎಂ.ಎಸ್ಸಿ, ಸ್ನಾತಕೋತ್ತರ ಪದವಿ
ಕಾನೂನು ಅಧಿಕಾರಿ : ಕಾನೂನು ಪದವಿ, ಎಲ್‌ಎಲ್‌ಬಿ
ವ್ಯವಸ್ಥಾಪಕ : CA, ICWA, B.Sc, BE/ B.Tech, ಪದವಿ, ME/ M.Tech, MCA, M.Sc, ಸ್ನಾತಕೋತ್ತರ ಪದವಿ, MBA


⏳ ವಯಸ್ಸಿನ ಮಿತಿ : ಹುದ್ದೆಗನುಸಾರ ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.
ಮುಖ್ಯ ವ್ಯವಸ್ಥಾಪಕರು : ಕನಿಷ್ಠ 28 ವರ್ಷ ಹಾಗೂ ಗರಿಷ್ಠ 45 ವರ್ಷಗಳು  
ಹಿರಿಯ ವ್ಯವಸ್ಥಾಪಕರು : ಕನಿಷ್ಠ 28 ವರ್ಷ ಹಾಗೂ ಗರಿಷ್ಠ 37 ವರ್ಷಗಳು  
ಕಾನೂನು ಅಧಿಕಾರಿ  : ಕನಿಷ್ಠ 28 ವರ್ಷ ಹಾಗೂ ಗರಿಷ್ಠ 32 ವರ್ಷಗಳು
ವ್ಯವಸ್ಥಾಪಕ  : ಕನಿಷ್ಠ 23 ವರ್ಷ ಹಾಗೂ ಗರಿಷ್ಠ 35 ವರ್ಷಗಳು  
✅ ವಯೋಮಿತಿ ಇಳಿವು:
- OBC (NCL) ಅಭ್ಯರ್ಥಿಗಳಿಗೆ : 3 ವರ್ಷ
- SC/ST ಮತ್ತುಮಜಿ ಸೈನಿಕ ಅಭ್ಯರ್ಥಿಗಳಿಗೆ : 5 ವರ್ಷ
- PwBDಅಭ್ಯರ್ಥಿಗಳಿಗೆ : 10 ವರ್ಷ


💰 ಮಾಸಿಕ ವೇತನ : 
ಮುಖ್ಯ ವ್ಯವಸ್ಥಾಪಕರು : ರೂ. 1,02,300 – 1,20,940/-
ಹಿರಿಯ ವ್ಯವಸ್ಥಾಪಕರು : ರೂ. 85,920 – 1,05,280/-
ಕಾನೂನು ಅಧಿಕಾರಿ ಮತ್ತು ವ್ಯವಸ್ಥಾಪಕ : ರೂ. 64,820 – 93,960/-


💸ಅರ್ಜಿ ಶುಲ್ಕ :
ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳು: ರೂ. 850/-
SC, ST, PWD ಅಭ್ಯರ್ಥಿಗಳು: ರೂ. 175/-
ಪಾವತಿ ವಿಧಾನ: ಆನ್‌ಲೈನ್


📥ಆಯ್ಕೆ ವಿಧಾನ :
ಆನ್‌ಲೈನ್ ಪರೀಕ್ಷೆ
ಸಂದರ್ಶನ: ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 100 ಅಂಕಗಳ ಸಂದರ್ಶನಕ್ಕೆ ಕರೆಯಲಾಗುತ್ತದೆ.


🧭ಪರೀಕ್ಷಾ ಮಾದರಿ :
ಆಂಗ್ಲ ಭಾಷೆ : 25
ಹುದ್ದೆಗೆ ಸಂಬಂಧಿಸಿದ ವೃತ್ತಿಪರ ಜ್ಞಾನ : 100 
ಅವಧಿ : 100 ನಿಮಿಷಗಳು


💻 ಅರ್ಜಿ ಸಲ್ಲಿಸುವ ವಿಧಾನ : 
ಹಂತ :1 ಅಭ್ಯರ್ಥಿಗಳು ಬ್ಯಾಂಕ್ ಆಫ್ ಇಂಡಿಯಾ (BOI) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಅಂದರೆ www.bankofindia.co.in
ಹಂತ :2 ಈಗ ಕೊನೆಯವರೆಗೂ ಸ್ಕ್ರಾಲ್ ಮಾಡಿ, ಮತ್ತು ನೀವು ಪ್ರಮುಖ ಲಿಂಕ್‌ಗಳ ವಿಭಾಗವನ್ನು ಕಾಣಬಹುದು.
ಹಂತ :3 ಪ್ರಮುಖ ಲಿಂಕ್ ವಿಭಾಗದಲ್ಲಿ, ವೃತ್ತಿಜೀವನದ ಮೇಲೆ ಕ್ಲಿಕ್ ಮಾಡಿ.
ಹಂತ :4 ವೃತ್ತಿಜೀವನದ ಮೇಲೆ ಕ್ಲಿಕ್ ಮಾಡಿದ ನಂತರ, ಅಭ್ಯರ್ಥಿಗಳನ್ನು ಹೊಸ URL-https://bankofindia.co.in/career ಗೆ ನಿರ್ದೇಶಿಸಲಾಗುತ್ತದೆ.
ಹಂತ :5 “ಸ್ಪೆಷಲಿಸ್ಟ್ ಆಫೀಸರ್ (SO) ನೇಮಕಾತಿ 2025” ಲಿಂಕ್ ನೋಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
ಹಂತ :6 ಹೊಸಬರಾಗಿದ್ದಲ್ಲಿ, ನಿಮ್ಮ ವಿವರಗಳೊಂದಿಗೆ ನೋಂದಾಯಿಸಿ. ನೀವು ಖಾತೆಯನ್ನು ಹೊಂದಿದ್ದರೆ, ಲಾಗಿನ್ ಆಗಿ.
ಹಂತ :7 ನಿಮ್ಮ ವೈಯಕ್ತಿಕ, ಶೈಕ್ಷಣಿಕ ಮತ್ತು ವೃತ್ತಿಪರ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಹಂತ :8 ಸೂಚನೆಯಂತೆ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
ಹಂತ :9 ನಿಮ್ಮ ವಿವರಗಳನ್ನು ಪರಿಶೀಲಿಸಿದ ನಂತರ, ಅರ್ಜಿಯನ್ನು ಸಲ್ಲಿಸಿ.
ಹಂತ :10 ಉಲ್ಲೇಖಕ್ಕಾಗಿ ನಿಮ್ಮ ಅರ್ಜಿ ನಮೂನೆ ಮತ್ತು ಪಾವತಿ ರಶೀದಿಯನ್ನು ಮುದ್ರಿಸಿ.


📅 ಪ್ರಮುಖ ದಿನಾಂಕಗಳು :
✅ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17-11-2025
✅ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-ನವೆಂಬರ್-2025
✅ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 30-11-2025


👉 ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಸಲು BOI ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ.

To Download Official Notification
ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025
ಬ್ಯಾಂಕ್ ಉದ್ಯೋಗ 2025 ಕರ್ನಾಟಕ
ಪದವಿ ಅಭ್ಯರ್ಥಿಗಳಿಗೆ ಬ್ಯಾಂಕ್ ಹುದ್ದೆಗಳು
BOI Specialist Officer job Kannada
ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳ ವಿವರ

Comments