ಬ್ಯಾಂಕ್ ಆಫ್ ಇಂಡಿಯಾ (BIO) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ
Published by: Hanamant Katteppanavar | Date:10 ಡಿಸೆಂಬರ್ 2020

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಇಂಡಿಯಾ (BIO) ದಲ್ಲಿ ಖಾಲಿ ಇರುವ ಒಟ್ಟು 21 ವಿಶೇಷ ಭದ್ರತಾ ಅಧಿಕಾರಿಗಳು ಮತ್ತು ಅಗ್ನಿಶಾಮಕ ಅಧಿಕಾರಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪೂರ್ಣ ಸಮಯದ ಆಧಾರದ ಮೇಲೆ ಮುಂಬೈ, ಮಹಾರಾಷ್ಟ್ರದ BOI ಪ್ರಧಾನ ಕಚೇರಿಯಲ್ಲಿ ಅಥವಾ ಭಾರತದ ಯಾವುದೇ ಶಾಖೆಗಳಲ್ಲಿ ಪೋಸ್ಟ್ ಮಾಡಲಾಗುವುದು. ಆನ್‌ಲೈನ್ ಅರ್ಜಿಯು ಡಿಸೆಂಬರ್ 07- 2020 ರಿಂದ ಪ್ರಾರಂಭಗೊಂಡು ಮತ್ತು ಡಿಸೆಂಬರ್ 21, 2020 ರಂದು ಕೊನೆಗೊಳ್ಳುತ್ತದೆ.
No. of posts: 21
Application Start Date: 7 ಡಿಸೆಂಬರ್ 2020
Application End Date: 21 ಡಿಸೆಂಬರ್ 2020
Selection Procedure:
- ಹುದ್ದೆಗೆ ಅನುಸಾರವಾಗಿ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿ, ವೈಯಕ್ತಿಕ ಸಂದರ್ಶನ ಅಥವಾ ಗುಂಪು ಚರ್ಚೆ ಮೂಲಕ ಆಯ್ಕೆ ಮಾಡಲಾಗುವುದು.
Qualification:
- ಹುದ್ದೆಗಳಿಗೆ ಅನುಗುಣವಾಗಿ ಬಿಇ / ಬಿಟೆಕ್ ಇನ್ (ಫೈರ್ ಎಂಜಿನಿಯರಿಂಗ್ / ಸುರಕ್ಷತೆ ಮತ್ತು ಅಗ್ನಿಶಾಮಕ ಎಂಜಿನಿಯರಿಂಗ್ / ಅಗ್ನಿಶಾಮಕ ತಂತ್ರಜ್ಞಾನ) ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
Fee:
- ಹುದ್ದೆಗೆ ಅನುಸಾರವಾಗಿ
* ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು- 850 ರೂ
* ಪ.ಪಂಗಡ ಮತ್ತು ಪ.ಜಾ ಮತ್ತು ಉಳಿದ ಅಭ್ಯರ್ಥಿಗಳು- 175 ರೂ ಗಳ ಅರ್ಜಿ ಶುಲ್ಕವನ್ನು ತುಂಬಬೇಕು.
* ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು- 850 ರೂ
* ಪ.ಪಂಗಡ ಮತ್ತು ಪ.ಜಾ ಮತ್ತು ಉಳಿದ ಅಭ್ಯರ್ಥಿಗಳು- 175 ರೂ ಗಳ ಅರ್ಜಿ ಶುಲ್ಕವನ್ನು ತುಂಬಬೇಕು.
Age Limit:
- BOI ನೇಮಕಾತಿ 2020 ಅಧಿಸೂಚನೆಯಂತೆ ನವೆಂಬರ್ 1, 2020 ರ ಪ್ರಕಾರ ಕನಿಷ್ಠ- 25 ವರ್ಷ ಪೂರ್ಣಗೊಳಿಸಿರಬೇಕು ಮತ್ತು ಗರಿಷ್ಠ- 40 ವರ್ಷಗಳನ್ನು (ಅಗ್ನಿಶಾಮಕ ಅಧಿಕಾರಿಗೆ 35 ವರ್ಷಗಳು) ಮೀರಿರಬಾರದು.
Pay Scale:
- ಹುದ್ದೆಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ತಿಂಗಳಿಗೆ 31,705 /- ರೂ ದಿಂದ 45,950 /- ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.





Comments