ಬ್ಯಾಂಕ್ ಆಫ್ ಬರೋಡಾ (BOB) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನ

ಉದ್ಯೋಗ ಹುಡುಕುತ್ತಿರುವ ಬ್ಯಾಂಕಿಂಗ್ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ! ಬ್ಯಾಂಕ್ ಆಫ್ ಬರೋಡಾ ತನ್ನ ವಿವಿಧ ವಿಭಾಗಗಳಲ್ಲಿನ ಮಾನವ ಸಂಪನ್ಮೂಲ ಹುದ್ದೆಗಳನ್ನು ಒಪ್ಪಂದ ಆಧಾರದ ಮೇಲೆ ನೇಮಕ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ನೂರಾರು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಅವಕಾಶ ಒದಗಿಸುವ ಸುಂದರ ಅವಕಾಶ ಇದಾಗಿದೆ.
ಬ್ಯಾಂಕ್ ಆಫ್ ಬರೋಡಾ ತನ್ನ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, BC Coordinators (ಬಿಸಿ ಸಂಯೋಜಕರು) ಹುದ್ದೆಗಳ ಭರ್ತಿಗೆ ಒಟ್ಟು 15 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ10-09-2025 ಆಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ bankofbaroda.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಯ ವಿವರಗಳು :
ಸಂಸ್ಥೆ ಹೆಸರು: ಬ್ಯಾಂಕ್ ಆಫ್ ಬರೋಡಾ
ಹುದ್ದೆಯ ಹೆಸರು: BC Coordinators (ಬಿಸಿ ಸಂಯೋಜಕರು)
ಒಟ್ಟು ಹುದ್ದೆಗಳು: 15
ಅರ್ಜಿ ವಿಧಾನ: ಆಫ್‌ಲೈನ್
ಅಂತಿಮ ದಿನಾಂಕ: 10 ಸೆಪ್ಟೆಂಬರ್ 2025
ಅರ್ಹತೆಗಳು:
- ನಿವೃತ್ತ ಬ್ಯಾಂಕ್ ನೌಕರರು : ಯಾವುದೇ ಬ್ಯಾಂಕ್‌ನ (PSU/RRB/ಪ್ರೈವೇಟ್ ಬ್ಯಾಂಕ್/ಕೋ-ಆಪರೇಟಿವ್ ಬ್ಯಾಂಕ್) ಮುಖ್ಯ ಮ್ಯಾನೇಜರ್ ಹುದ್ದೆಯವರೆಗೆ ನಿವೃತ್ತರಾಗಿರುವ ಅಧಿಕಾರಿಗಳು ಅಥವಾ JAIIB ಪಾಸಾದ ನಿವೃತ್ತ ಕ್ಲರ್ಕರು ಅರ್ಜಿ ಸಲ್ಲಿಸಬಹುದು.
- ಇತರ ಅಭ್ಯರ್ಥಿಗಳು: ಕನಿಷ್ಠ ಪದವಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ (MS Office, ಇಮೇಲ್, ಇಂಟರ್‌ನೆಟ್) ಇರಬೇಕು.
ಮೇಲ್ಮಟ್ಟದ ಅರ್ಹತೆಗೆ ಆದ್ಯತೆ: M.Sc (IT), BE (IT), MCA, MBA/PGDM.
ವಯೋಮಿತಿ :
- ಕನಿಷ್ಠ ವಯಸ್ಸು: 21 ವರ್ಷ
- ಗರಿಷ್ಠ ವಯಸ್ಸು: 45 ವರ್ಷ
(ಸರಕಾರದ ನಿಯಮಾನುಸಾರ ಸಡಿಲಿಕೆ ಅನ್ವಯವಾಗುತ್ತದೆ)
ವೇತನ ಶ್ರೇಣಿ :
- ಸ್ಥಿರ ವೇತನ: ₹15,000/-
- ಪ್ರೋತ್ಸಾಹಕ (ವೆರಿಯಬಲ್) ವೇತನ: ₹10,000/-
ಆಯ್ಕೆ ವಿಧಾನ :
- ಶಾರ್ಟ್‌ಲಿಸ್ಟಿಂಗ್
- ದಾಖಲೆ ಪರಿಶೀಲನೆ
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್ (bankofbaroda.in) ನಲ್ಲಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
- ಎಲ್ಲಾ ಸೂಚನೆಗಳನ್ನು ಓದಿ, ಅರ್ಜಿ ಫಾರ್ಮ್ ಭರ್ತಿ ಮಾಡಿ.
- ಅಗತ್ಯ ದಾಖಲೆಗಳು ಹಾಗೂ ಪಾಸ್‌ಪೋರ್ಟ್ ಸೈಸ್ ಫೋಟೋ ಲಗತ್ತಿಸಿ.
- ಪೂರ್ಣಗೊಂಡ ಅರ್ಜಿಯನ್ನು ನಿರ್ದಿಷ್ಟ ವಿಳಾಸಕ್ಕೆ ಕಳುಹಿಸಿ.
ಪ್ರಮುಖ ದಿನಾಂಕ :
ಅಂತಿಮ ದಿನಾಂಕ: 10-ಸೆಪ್ಟೆಂಬರ್-2025
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಫಾರ್ಮ್ ಪಡೆಯಲು bankofbaroda.in ಗೆ ಭೇಟಿ ನೀಡಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳುವವರಿಗೆ ಇದು ಉತ್ತಮ ಅವಕಾಶ!
Comments