ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 500 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | SSLC ಪಾಸಾದವರಿಗೆ ಅವಕಾಶ
Published by: Mallappa Myageri | Date:20 ನವೆಂಬರ್ 2021

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯಲ್ಲಿ ಖಾಲಿ ಇರುವ ಒಟ್ಟು 500 ಮೆಕ್ಯಾನಿಕ್ ಡೀಸೆಲ್ ಅಪ್ಪ್ರೆಂಟಿಸ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ದಿನಾಂಕ: 18-11-2021 ರಿಂದ 30-11-2021ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಿದೆ.
No. of posts: 500
Application Start Date: 18 ನವೆಂಬರ್ 2021
Application End Date: 30 ನವೆಂಬರ್ 2021
Work Location: ಬೆಂಗಳೂರು
Selection Procedure: ಮೆಕ್ಯಾನಿಕ್ ಡೀಸೆಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಿ ನಂತರ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification:
ಮೆಕ್ಯಾನಿಕ್ ಡೀಸೆಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ದಿಂದ SSLC / 10ನೇ ತರಗತಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
Pay Scale:
ಮೆಕ್ಯಾನಿಕ್ ಡೀಸೆಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ತಿಂಗಳಿಗೆ 8,000/-ರೂ ದಿಂದ 9,000/-ರೂಗಳ ಸ್ಟೈಫೆಂಡ್ ಅನ್ನು ಪಡೆಯುವರು.
* ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ಕ ಮಾಡುವ ಮೂಲಕ ಸವಿವರವಾದ ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.





Comments