ಬಾಗಲಕೋಟ ಜಿಲ್ಲೆಯಲ್ಲಿರುವ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕೊಂದರಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ
Published by: Basavaraj Halli | Date:7 ಸೆಪ್ಟೆಂಬರ್ 2021

ಬಾಗಲಕೋಟೆ ಜಿಲ್ಲೆಯ ಹುನಗುಂದ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ "ಹುನಗುಂದ ತಾಲ್ಲೂಕಾ ಕನಕದಾಸರ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ" ಇಲ್ಲಿ ಈ ಕೆಳಗೆ ತಿಳಿಸಿರುವ ವಿವಿಧ ಹುದ್ದೆಗಳನ್ನು ನೇಮಕ ಮಾಡುವ ಸಲುವಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಹುದ್ದೆಗಳ ವಿವರ ಈ ಕೆಳಗಿನಂತಿರುತ್ತದೆ.
- ಶಾಖಾ ವ್ಯವಸ್ಥಾಪಕ 1
- ಕಿರಿಯ ಸಹಾಯಕ 05
- ಸಿಪಾಯಿ 4
ಒಟ್ಟು ಹುದ್ದೆಗಳು : 10
No. of posts: 10
Application Start Date: 7 ಸೆಪ್ಟೆಂಬರ್ 2021
Application End Date: 30 ಸೆಪ್ಟೆಂಬರ್ 2021
Work Location: ಬಾಗಲಕೋಟೆ ಜಿಲ್ಲೆ
Qualification:
- ಶಾಖಾ ವ್ಯವಸ್ಥಾಪಕ ಮತ್ತು ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ( ಶೇಕಡಾ 50 ಅಂಕಗಳೊಂದಿಗೆ) ಪದವಿ ಪಾಸಾಗಿರಬೇಕು. ಸಹಕಾರ ವಿಷಯದಲ್ಲಿ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿರುತ್ತದೆ.
- ಸಿಪಾಯಿ ಹುದ್ದೆ : SSLC ಯಲ್ಲಿ ಶೇಕಡ ಐವತ್ತ ಅಂಕಗಳಿಗಿಂತ ಕಡಿಮೆ ಇಲ್ಲದಂತೆ ಪಾಸಾಗಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
Fee:
ಶಾಖಾ ವ್ಯವಸ್ಥಾಪಕ ಹಾಗೂ ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 1000₹ ಹಾಗೂ ಸಿಪಾಯಿ ಹುದ್ದೆಗಳಿಗೆ 500₹ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
Age Limit:
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2021
Pay Scale:
* ನೇಮಕಗೊಂಡ ಸಿಬ್ಬಂದಿಗಳಿಗೆ 2 ವರ್ಷ ಪರೀಕ್ಷಾರ್ಥ ಅವಧಿಯಿದ್ದು, ಕ್ರೂಢೀಕೃತ ವೇತನವನ್ನು ನೀಡಲಾಗುವುದು. ನಂತರ ಸೇವೆಯನ್ನು ಖಾಯಂಗೊಳಿಸಿ ಅವರಿಗೆ ಚಾಲ್ತಿಯಲ್ಲಿರುವ ವೇತನ ಶ್ರೇಣಿ ನೀಡಲಾಗುವುದು.

Comments