Loading..!

ಬಾಗಲಕೋಟೆ B.V.V ಸಂಘದಲ್ಲಿ ಬೃಹತ್ ಉದ್ಯೋಗಾವಕಾಶ: ಪ್ರಾಂಶುಪಾಲರು, ಶಿಕ್ಷಕರು, ಉಪನ್ಯಾಸಕರು ಹಾಗೂ SDA ಹುದ್ದೆಗಳಿಗೆ ಅರ್ಜಿ ಆಹ್ವಾನ!
Tags: Degree
Published by: Yallamma G | Date:12 ಮಾರ್ಚ್ 2026
not found
ಬಾಗಲಕೋಟೆ, ಮುಧೋಳ, ರಾಮದುರ್ಗ, ಬೀಳಗಿ ಹಾಗೂ ಹುನಗುಂದ ತಾಲೂಕಿನ ಸುತ್ತಮುತ್ತಲಿನ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ! ಬಾಗಲಕೋಟೆಯ ಪ್ರತಿಷ್ಠಿತ "ಶ್ರೀ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ" (B.V.V. Sangha) ದ ಅಧೀನದಲ್ಲಿ ನಡೆಯುತ್ತಿರುವ ವಿವಿಧ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.

ಈ ನೇಮಕಾತಿ ಅಡಿಯಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತವುದೇ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಸೂಚನೆ ಪ್ರಕಟಗೊಂಡ ದಿನದಿಂದ 10 ದಿನಗಳವಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಕೊನೆಯ ದಿನದ ವರೆಗೂ ಕಾಯದೆ ಕೂಡಲೇ ಅರ್ಜಿ ಸಲ್ಲಿಸಿ.  

ಶಿಕ್ಷಕ ವೃತ್ತಿ ಅರಸುತ್ತಿರುವವರು ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ (SDA) ಆಸಕ್ತಿ ಇರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ನೇಮಕಾತಿಯ ಸಂಪೂರ್ಣ ವಿವರ, ವಿದ್ಯಾರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ.

ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ

ನೇಮಕಾತಿ ನಡೆಸುವ ಸಂಸ್ಥೆ


  • ಸಂಸ್ಥೆ: Banavellagar Veerashaiva Vidyavardhaka Sangha

  • ಸ್ಥಳ: ಬಾಗಲಕೋಟೆ, ಕರ್ನಾಟಕ

  • ಉದ್ಯೋಗ ಪ್ರಕಾರ: ಶಿಕ್ಷಣ ಸಂಸ್ಥೆಗಳ ಹುದ್ದೆಗಳು

  • ಅರ್ಜಿ ವಿಧಾನ: ಪ್ರಕಟಣೆಯಲ್ಲಿ ನೀಡಿರುವ ವಿಳಾಸಕ್ಕೆ ಅರ್ಜಿ ಸಲ್ಲಿಕೆ


ವಿಭಾಗವಾರು ಖಾಲಿ ಇರುವ ಹುದ್ದೆಗಳ ವಿವರ:
೧. ಪದವಿ ಪೂರ್ವ ಕಾಲೇಜು ವಿಭಾಗ (PU College):


  • ಪ್ರಾಚಾರ್ಯರು (Principal): ರಾಮದುರ್ಗ

  • ಕಲಾ ವಿಭಾಗ (Arts): ಕನ್ನಡ (ರಾಮದುರ್ಗ), ಇಂಗ್ಲೀಷ್ (ಬಾಗಲಕೋಟೆ, ಮುಧೋಳ, ರಾಮದುರ್ಗ), ಅರ್ಥಶಾಸ್ತ್ರ (ಮುಧೋಳ), ಇತಿಹಾಸ (ರಾಮದುರ್ಗ).

  • ವಾಣಿಜ್ಯ ವಿಭಾಗ (Commerce): ವ್ಯವಹಾರ ಅಧ್ಯಯನ/ಲೆಕ್ಕಶಾಸ್ತ್ರ (ಮುಧೋಳ, ರಾಮದುರ್ಗ).

  • ವಿಜ್ಞಾನ ವಿಭಾಗ (Science): ರಸಾಯನಶಾಸ್ತ್ರ (ಬಾಗಲಕೋಟೆ, ಮುಧೋಳ), ಭೌತಶಾಸ್ತ್ರ (ಮುಧೋಳ), ಜೀವಶಾಸ್ತ್ರ (ರಾಮದುರ್ಗ).

  • ದೈಹಿಕ ಉಪನ್ಯಾಸಕರು (PE Lecturer): ಮುಧೋಳ, ರಾಮದುರ್ಗ.


೨. ಪ್ರೌಢಶಾಲೆ ವಿಭಾಗ (High School):


  • ಮುಖ್ಯಾಧ್ಯಾಪಕರು (ಕನ್ನಡ ಮಾಧ್ಯಮ): ರಾಮದುರ್ಗ.

  • ಸಹ-ಶಿಕ್ಷಕರು (ಇಂಗ್ಲೀಷ್ ಮಾಧ್ಯಮ): ಕನ್ನಡ, ಇಂಗ್ಲೀಷ್, ವಿಜ್ಞಾನ (PCM/CBZ), ಸಮಾಜಶಾಸ್ತ್ರ (ಆಂಗ್ಲ), ಮತ್ತು ಹಿಂದಿ ವಿಷಯಗಳಿಗೆ ಶಿಕ್ಷಕರು ಬೇಕಾಗಿದ್ದಾರೆ. (ಸ್ಥಳ: ಬಾಗಲಕೋಟೆ, ಹುನಗುಂದ, ಮುಧೋಳ, ರಾಮದುರ್ಗ).

  • ಇತರೆ ಹುದ್ದೆಗಳು:

  • ದೈಹಿಕ ಶಿಕ್ಷಕರು (ಬಾಗಲಕೋಟೆ, ಬೀಳಗಿ)

  • ಡ್ರಾಯಿಂಗ್ ಶಿಕ್ಷಕರು (ಬಾಗಲಕೋಟೆ, ಬೀಳಗಿ)

  • ಸಂಗೀತ ಶಿಕ್ಷಕರು (ಬಾಗಲಕೋಟೆ)

  • ದ್ವಿತೀಯ ದರ್ಜೆ ಸಹಾಯಕರು (SDA) - ರಾಮದುರ್ಗ.


೩. ಪ್ರಾಥಮಿಕ ವಿಭಾಗ (Primary School - ಇಂಗ್ಲೀಷ್ ಮಾಧ್ಯಮ):

ಇಂಗ್ಲೀಷ್, ಸಮಾಜಶಾಸ್ತ್ರ (EVS), ಮತ್ತು ಗಣಿತ ಶಿಕ್ಷಕರು (ಸ್ಥಳ: ಬಾಗಲಕೋಟೆ).


ಹುದ್ದೆಗಳಿಗೆ ಬೇಕಾದ ಶೈಕ್ಷಣಿಕ ಅರ್ಹತೆ (Educational Qualification):


  • ಪ್ರಾಚಾರ್ಯರು / ಮುಖ್ಯಾಧ್ಯಾಪಕರು: ಎಂ.ಎ / ಎಂ.ಎಸ್.ಸಿ / ಎಂ.ಕಾಂ ಜೊತೆಗೆ ಬಿ.ಇಡಿ (B.Ed) ಪದವಿ ಹೊಂದಿರಬೇಕು. ಜೊತೆಗೆ ಕನಿಷ್ಠ ೫ ರಿಂದ ೮ ವರ್ಷಗಳ ಸೇವಾ ಅನುಭವ ಕಡ್ಡಾಯ.

  • ಪಿಯುಸಿ / ಪ್ರೌಢಶಾಲೆ ಉಪನ್ಯಾಸಕರು/ಶಿಕ್ಷಕರು: ಸಂಬಂಧಪಟ್ಟ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ (B.A / B.Sc / B.Com / M.A / M.Sc / M.Com) ಜೊತೆಗೆ ಬಿ.ಇಡಿ ಕಡ್ಡಾಯ. (ಆಂಗ್ಲ ಮಾಧ್ಯಮದ ಶಾಲೆಗಳಿಗೆ ಆಂಗ್ಲ ಮಾಧ್ಯಮದಲ್ಲಿ ಓದಿದವರಿಗೆ ಆದ್ಯತೆ).

  • ಪ್ರಾಥಮಿಕ ವಿಭಾಗ: M.Sc / M.A / B.A / B.Sc / D.Ed (ಆಂಗ್ಲ ಮಾಧ್ಯಮ).

  • ದೈಹಿಕ ಶಿಕ್ಷಣ ವಿಭಾಗ: B.A / B.Sc / B.Com ಜೊತೆಗೆ B.P.Ed ಅಥವಾ M.P.Ed.

  • ದ್ವಿತೀಯ ದರ್ಜೆ ಸಹಾಯಕ (SDA): B.Com / B.Sc / BBA ಜೊತೆಗೆ ಕಡ್ಡಾಯವಾಗಿ Tally ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

  • ಚಿತ್ರಕಲಾ / ಸಂಗೀತ ಶಿಕ್ಷಕರು: ಬಿ.ಎಫ್.ಎ/ಬಿ.ವಿ.ಎ (ಚಿತ್ರಕಲೆ) ಅಥವಾ ಯಾವುದೇ ಪದವಿ ಜೊತೆಗೆ ಸಂಗೀತ/ನೃತ್ಯ ಜ್ಞಾನ.


ವೇತನ ಹಾಗೂ ಹುದ್ದೆಯ ಸ್ವರೂಪ:
ಈ ಪ್ರಕಟಣೆಯಲ್ಲಿ ತಿಳಿಸಿರುವ ಮೇಲಿನ ಎಲ್ಲ ಹುದ್ದೆಗಳು ಅನುದಾನ ರಹಿತ (Unaided) ಹುದ್ದೆಗಳಾಗಿವೆ.
ಆಯ್ಕೆಯಾಗುವ ಅಭ್ಯರ್ಥಿಗಳ ಅನುಭವ ಮತ್ತು ಅರ್ಹತೆಗೆ ತಕ್ಕಂತೆ ಬಿ.ವಿ.ವಿ ಸಂಘದ ನಿಯಮಾವಳಿಯ ಪ್ರಕಾರ ಆಕರ್ಷಕ ವೇತನವನ್ನು ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ (How to Apply):
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಸ್ವ-ವಿವರವುಳ್ಳ ಅರ್ಜಿ (Resume/Bio-data) ಹಾಗೂ ಎಲ್ಲಾ ಶೈಕ್ಷಣಿಕ ಅರ್ಹತಾ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಪ್ರಕಟಣೆ ಹೊರಡಿಸಿದ ದಿನಾಂಕದಿಂದ 10 ದಿನಗಳ ಒಳಗಾಗಿ ಕಳುಹಿಸಬೇಕು.


  • ಅರ್ಜಿ ಸಲ್ಲಿಸಬೇಕಾದ ವಿಳಾಸ: ಕಾರ್ಯಾಧ್ಯಕ್ಷರು, ಶ್ರೀ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಬಾಗಲಕೋಟೆ.

  • ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಲು: ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು chairmanhscom@gmail.com ಗೆ ಇ-ಮೇಲ್ ಕೂಡ ಮಾಡಬಹುದು.

  • ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 8073021367 / 9902005315 (ಕಾರ್ಯಾಧ್ಯಕ್ಷರು, ಹೈಸ್ಕೂಲ್ ಆಡಳಿತ ಮಂಡಳಿ, B.V.V. ಸಂಘ).


 ಅಭ್ಯರ್ಥಿಗಳಿಗೆ ಸಲಹೆ


  • ಅರ್ಜಿ ಸಲ್ಲಿಸುವ ಮೊದಲು ಪ್ರಕಟಣೆಯನ್ನು ಸಂಪೂರ್ಣವಾಗಿ ಓದಿ

  • ಸಂಬಂಧಿತ ವಿದ್ಯಾರ್ಹತೆ ಹಾಗೂ ಅನುಭವ ದಾಖಲೆಗಳನ್ನು ಸಿದ್ಧಪಡಿಸಿ

  • ಇಮೇಲ್ ಮೂಲಕ ಸರಿಯಾದ ಮಾಹಿತಿ ನೀಡಿ ಅರ್ಜಿ ಸಲ್ಲಿಸಿ.


ಸಾರಾಂಶ:
ಬಾಗಲಕೋಟೆಯ Banavellagar Veerashaiva Vidyavardhaka Sangha ಸಂಸ್ಥೆಯಲ್ಲಿ ಶಿಕ್ಷಕರು, ಕ್ಲರ್ಕ್, ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
To Download Official Notification

Comments