ಬಾಗಲಕೋಟೆ ಜಿಲ್ಲೆಯ ಪತ್ತಿನ ಸಹಕಾರಿ ಸಂಘ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಬಾಗಲಕೋಟೆ ಜಿಲ್ಲೆಯ ಮರ್ಚನಂಟ್ಸ್ ಪತ್ತಿನ ಸಹಕಾರಿ ಸಂಘ ನಿ.ಕೆರೂರದಲ್ಲಿ ಖಾಲಿ ಇರುವ 08 ದ್ವಿತೀಯ ದರ್ಜೆ ಸಹಾಯಕ ಮತ್ತು ಸಿಪಾಯಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ದಿನಾಂಕ 03/03/2023 ರೊಳಗಾಗಿ ಖುದ್ದಾಗಿ ಬಂದು/ ಅಂಚೆ/ ಕೊರಿಯರ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಳಾಸ :
ಮರ್ಚನಂಟ್ಸ್ ಪತ್ತಿನ ಸಹಕಾರಿ ಸಂಘ ನಿ. ಕೆರೂರ,
ತಾ|| ಬಾದಾಮಿ, ಜಿ|| ಬಾಗಲಕೋಟೆ ಪಿನ್ ಕೋಡ್-587206
ಹುದ್ದೆಗಳ ವಿವರ : 8
ದ್ವಿತೀಯ ದರ್ಜೆ ಸಹಾಯಕ : 05
ಸಿಪಾಯಿ : 03
- ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅಂಗೀಕೃತ ವಿಶ್ವವಿದ್ಯಾಲಯ /ಸಂಸ್ಥೆಯಿಂದ ಯಾವುದೇ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ವಿದ್ಯಾರ್ಹತೆಯನ್ನು ಪಡೆದಿರಬೇಕು. ಕನ್ನಡ ಮಾದ್ಯಮದಲ್ಲಿ ಮಾತ್ರ ವ್ಯಾಸಂಗವನ್ನು ಮಾಡಿರಬೇಕು.
- ಸಿಪಾಯಿ ಹುದ್ದೆಗಳಿಗೆ SSLC ವಿದ್ಯಾರ್ಹತೆಯನ್ನು ಪಡೆದಿರಬೇಕು. ಕನ್ನಡ ಮಾದ್ಯಮದಲ್ಲಿ ಮಾತ್ರ ವ್ಯಾಸಂಗವನ್ನು ಮಾಡಿರಬೇಕು.
- ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ
ಸಾಮಾನ್ಯ ಅಭ್ಯರ್ಥಿಗಳು 1000 /- ರೂ ಅರ್ಜಿ ಶುಲ್ಕವನ್ನು
SC / ST ಅಭ್ಯರ್ಥಿಗಳು 500 /- ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
- ಸಿಪಾಯಿ ಹುದ್ದೆಗಳಿಗೆ
ಸಾಮಾನ್ಯ ಅಭ್ಯರ್ಥಿಗಳು 500 /- ರೂ ಅರ್ಜಿ ಶುಲ್ಕವನ್ನು
SC / ST ಅಭ್ಯರ್ಥಿಗಳು 250 /- ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಹಾಗೂ ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ.
SC / ST ಅಭ್ಯರ್ಥಿಗಳಿಗೆ 40 ವರ್ಷಗಳು
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ38 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ
- ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ 16000/- ರಿಂದ 29600/-
- ಸಿಪಾಯಿ ಹುದ್ದೆಗಳಿಗೆ 10400/- ರಿಂದ 16400/- ವರೆಗೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments