Loading..!

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ದರ್ಜೆಯ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ
Published by: Rukmini Krushna Ganiger | Date:4 ಆಗಸ್ಟ್ 2021
not found

- ರಾಜ್ಯದ ಜಾನುವಾರು ಸಂಪತ್ತಿಗೆ ಅರೋಗ್ಯ ರಕ್ಷಣೆ ನೀಡುವ ಹೊಣೆಗಾರಿಕೆಯ ಜೊತೆಗೆ ಜಾನುವಾರು ಅಭಿವೃದ್ಧಿ ಚಟುವಟಿಕೆ, ವಿಸ್ತರಣಾ ಸೇವೆಗಳು ಮತ್ತು ತರಬೇತಿ, ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನ, ಮಾದರಿ ಸಮೀಕ್ಷೆ ಮತ್ತು ಜಾನುವಾರು ಗಣತಿ ಮುಂತಾದ ಕಾರ್ಯಾಕ್ರಮಗಳನ್ನು ಕೈಗೊಳ್ಳುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಅನುಚ್ಛೇದ 371(ಜೆ)ರಡಿ ಕಲ್ಯಾಣ-ಕರ್ನಾಟಕ ಪ್ರದೇಶಕ್ಕೆ ಮೀಸಲಿರಿಸಿದ ಪಶುವೈದ್ಯಕೀಯ ಪರೀಕ್ಷಕರ 32 ಹುದ್ದೆಗಳು ಹಾಗೂ ಪಶುವೈದ್ಯಕೀಯ ಸಹಾಯಕರ 83 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. 

ಪ್ರಮುಖ ದಿನಾಂಕಗಳು:

- ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :16/08/2021 (ಸಾಯಂಕಾಲ:5:30 ರವರೆಗೆ)

- ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 20/08/2021 (ಅಂಚೆ ಕಚೇರಿ ಕರ್ತವ್ಯದ ವರೆಗೆ).

ವಿಶೇಷ ಸೂಚನೆ : ಈ ಹಿಂದೆ 01/07/2020 ರಿಂದ 07/07/2020 ರವರೆಗೆ  ONLINE RECRUITMENT SYSTEM ಮುಖೇನ ನೇಮಕಾತಿಗಾಗಿ ಪರಿಪೂರ್ಣ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವದಿಲ್ಲ.


No. of posts:  115
Application Start Date:  19 ಜೂನ್ 2021
Application End Date:  16 ಆಗಸ್ಟ್ 2021
Last Date for Payment:  20 ಆಗಸ್ಟ್ 2021
Work Location:  Karnataka
Selection Procedure: - ಅಭ್ಯರ್ಥಿಗಳು ಹೊಂದಿರುವಶೈಕ್ಷಣಿಕ ವಿದ್ಯಾರ್ಹತೆಯಅಂಕಗಳ ಆಧಾರದ ಮೇಲೆ ಹಾಗೂ ರೋಸ್ಟರ್ ವಿಧಾನವನ್ನು ಅನುಸರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು. 
Qualification: - ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ/ಬೋರ್ಡ್ ನಿಂದ ಬಿಎಸ್ಸಿ(ಪ್ರಾಣಿಶಾಸ್ತ್ರ ), ಪಶುಸಂಗೋಪನಾ ಡಿಪ್ಲೊಮಾ ವಿದ್ಯಾರ್ಹತೆಯನ್ನು ಪಡೆದಿರಬೇಕು.
Fee:
- ಸಾಮಾನ್ಯ ವರ್ಗದ ಅಭ್ಯರ್ಥಿಗಳು 520/-ರೂ (ಅರ್ಜಿ ಶುಲ್ಕ 500/-ರೂ ಹಾಗೂ ಅಂಚೆ ಸೇವಾ ಶುಲ್ಕ 20/-ರೂ).

- ಪ.ಜಾ/ಪ.ಪಂ/ಕೆಟಗರಿ - I/ ಅಂಗವಿಕಲ ಅಭ್ಯರ್ಥಿಗಳಿಗೆ 270/-ರೂ (ಅರ್ಜಿ ಶುಲ್ಕ 250/-ರೂ ಹಾಗೂ ಅಂಚೆ ಸೇವಾ ಶುಲ್ಕ 20/-ರೂ).
ಅರ್ಜಿ ಶುಲ್ಕವನ್ನು ಅಂಚೆ ಮೂಲಕ ಪಾವತಿಸಬೇಕಿರುತ್ತದೆ. 
Age Limit: ಅಭ್ಯರ್ಥಿಯು ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸಿರಬೇಕು.
- ಗರಿಷ್ಟ 35 ವರ್ಷದೊಳಗಿನ ಸಾಮಾನ್ಯ ವರ್ಗದ ಅಭ್ಯರ್ಥಿಗಳು, ಪ್ರವರ್ಗ-2(ಎ),2(ಬಿ),3(ಎ) ಮತ್ತು 3(ಬಿ) ಅಭ್ಯರ್ಥಿಗಳಿಗೆ ಗರಿಷ್ಟ 38 ವರ್ಷ ಮತ್ತು ಪ್ರವರ್ಗ-1/ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಗರಿಷ್ಟ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Pay Scale: * ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download the Official Notification

Comments