ಭಾರತೀಯ ಸೇನೆಯಲ್ಲಿ ಖಾಲಿ ಇರುವ 400 ವೈದ್ಯಾಧಿಕಾರಿಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ಸೇನೆಯ ರಕ್ಷಣಾ ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು(AFMS) ನಲ್ಲಿ ಖಾಲಿ ಇರುವ ಒಟ್ಟು 400 ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಕೆ ಪ್ರಕ್ರಿಯೆ 2025 ಏಪ್ರಿಲ್ 19 ರಂದು ಆರಂಭಗೊಂಡಿದ್ದು, 2025 ಮೇ 12 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು . ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಹುದ್ದೆಗಳ ವಿವರ : 400
ಪುರುಷ ಅಭ್ಯರ್ಥಿಗಳಿಗೆ : 300
ಮಹಿಳಾ ಅಭ್ಯರ್ಥಿಗಳಿಗೆ : 100
ವೇತನ ಶ್ರೇಣಿ: ₹61,300/- ಪ್ರತಿ ತಿಂಗಳು
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19-04-2025
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-ಮೇ-2025
ಸಂದರ್ಶನದ ತಾತ್ಕಾಲಿಕ ದಿನಾಂಕ: 19-ಜೂನ್-2025
ವಿದ್ಯಾರ್ಹತೆ:
- ಅಭ್ಯರ್ಥಿಗಳು ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆಯಿಂದ MBBS ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
- ಅಭ್ಯರ್ಥಿಗಳು ಯಾವುದೇ ರಾಜ್ಯ ವೈದ್ಯಕೀಯ ಮಂಡಳಿ/NMC/MCI ನಿಂದ ಶಾಶ್ವತ ನೋಂದಣಿಯನ್ನು ಹೊಂದಿರಬೇಕು.
ಅರ್ಜಿ ಶುಲ್ಕ:
ಅರ್ಜಿದಾರರಿಗೆ: ₹200/-
ಪಾವತಿ ವಿಧಾನ: ಆನ್‌ಲೈನ್ ಮೂಲಕ (ಇಂಟರ್ನೆಟ್ ಬ್ಯಾಂಕಿಂಗ್/ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್)
ವಯೋಮಿತಿ:
ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷ ಆಗಿರಬೇಕು (2025 ಡಿಸೆಂಬರ್ 31 ರಂತೆ).
ಅರ್ಜಿ ಸಲ್ಲಿಕೆ ವಿಧಾನ:
ಅಧಿಕೃತ ವೆಬ್‌ಸೈಟ್ www.amcsscentry.gov.in ಗೆ ಭೇಟಿ ನೀಡಿ
"New Registration" ಕ್ಲಿಕ್ ಮಾಡಿ ಮತ್ತು ಸೂಚನೆಗಳನ್ನು ಅನುಸರಿಸಿ
ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ
ಅರ್ಜಿ ಶುಲ್ಕವನ್ನು ಪಾವತಿಸಿ
ಅರ್ಜಿ ಸಲ್ಲಿಸಿ ಮತ್ತು ಭವಿಷ್ಯದಲ್ಲಿ ಬಳಸಲು ಅರ್ಜಿ ಸಂಖ್ಯೆಯನ್ನು ಸಂರಕ್ಷಿ
Comments