Loading..!

ವಿದ್ಯುತ್ ಹಾಗೂ ನೀರಾವರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ l ಕೂಡಲೇ ಅರ್ಜಿ ಸಲ್ಲಿಸಿ
Published by: Yallamma G | Date:22 ಜುಲೈ 2025
Image not found

ವಾಟರ್ ಅಂಡ್ ಪವರ್ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್‌ (WAPCOS) ಸಂಸ್ಥೆ 2025ರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಒಟ್ಟು 10 ತಂಡದ ನಾಯಕ, ವಿಪತ್ತು ಅಪಾಯ ನಿರ್ವಹಣೆ (DRM) ತಜ್ಞ, ನೈರ್ಮಲ್ಯ ಎಂಜಿನಿಯರ್, ಜಲ ಎಂಜಿನಿಯರ್, ಕ್ಷೇತ್ರ ಸಂಯೋಜಕರು ಪರಿಸರ ತಜ್ಞರು, ಬೆಂಬಲ ಸಿಬ್ಬಂದಿ ಮತ್ತು ಕ್ಷೇತ್ರ ಸಂಯೋಜಕರು ಪರಿಸರ ತಜ್ಞರು ಸರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇವು ಅಖಿಲ ಭಾರತೀಯ ಮಟ್ಟದಲ್ಲಿ ನಿಗದಿಯಾಗಿರುವ ಹುದ್ದೆಗಳಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಇಮೇಲ್ ಮೂಲಕ 2025ರ ಜುಲೈ 30ರೊಳಗೆ ಕಳುಹಿಸಬೇಕು.


WAPCOS ಹುದ್ದೆಯ ಅಧಿಸೂಚನೆ : 
ಸಂಸ್ಥೆಯ ಹೆಸರು : ವಾಟರ್ ಅಂಡ್ ಪವರ್ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್ ( WAPCOS )
ಹುದ್ದೆಗಳ ಸಂಖ್ಯೆ: 10
ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
ಹುದ್ದೆಯ ಹೆಸರು: ಆಡಿಟ್ ಮ್ಯಾನೇಜರ್, ಸಪೋರ್ಟ್ ಸ್ಟಾಫ್
ಸಂಬಳ: WAPCOS ಮಾನದಂಡಗಳ ಪ್ರಕಾರ


ಹುದ್ದೆಗಳ ವಿಭಾಗವಾರು ವಿವರ :
ತಂಡದ ನಾಯಕ : 1
ಆಡಿಟ್ ವ್ಯವಸ್ಥಾಪಕ : 1
ವಿಪತ್ತು ಅಪಾಯ ನಿರ್ವಹಣೆ (DRM) ತಜ್ಞ : 1
ನೈರ್ಮಲ್ಯ ಎಂಜಿನಿಯರ್ : 1
ಜಲ ಎಂಜಿನಿಯರ್ : 1
ಕ್ಷೇತ್ರ ಸಂಯೋಜಕರು ಪರಿಸರ ತಜ್ಞರು : 3
ಬೆಂಬಲ ಸಿಬ್ಬಂದಿ : 2


ಶೈಕ್ಷಣಿಕ ಅರ್ಹತೆ :
ಹುದ್ದೆಗನುಸಾರ ವಿದ್ಯಾರ್ಹತೆಗಳಾದ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು. ಅರ್ಹತೆಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.


ಆಯ್ಕೆ ವಿಧಾನ :
1. ಶೈಕ್ಷಣಿಕ ಅರ್ಹತೆ
2. ಅನುಭವ
3. ವೈಯಕ್ತಿಕ ಸಂದರ್ಶನ


ಅರ್ಜಿ ಸಲ್ಲಿಸುವ ವಿಧಾನ :
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, wapcosblr.iva@gmail.com , wapcosudipi@yahoo.com , wapcoscvs@gmail.com ಗೆ 30-ಜುಲೈ-2025 ರಂದು ಅಥವಾ ಅದಕ್ಕೂ ಮೊದಲು ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಕಳುಹಿಸಬಹುದು.


📅 ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆ ದಿನಾಂಕ: 08-07-2025
ಇಮೇಲ್ ಕಳುಹಿಸಲು ಕೊನೆಯ ದಿನಾಂಕ: 30-ಜುಲೈ-2025


ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಅಥವಾ ಅಧಿಸೂಚನೆಯನ್ನು ಭೇಟಿ ನೀಡಿ.

Comments