Loading..!

ರಾಜ್ಯದಲ್ಲಿ ವರ್ಚುವಲ್ ಉದ್ಯೋಗ ಮೇಳ ಆಯೋಜನೆ : ದೇಶದಲ್ಲೇ ಮೊದಲ ಪ್ರಯೋಗ
Published by: Basavaraj Halli | Date:8 ಜುಲೈ 2020
Image not found
ಬೆಂಗಳೂರು: ಕರೊನಾ ಲಾಕ್​ಡೌನ್​ನಿಂದಾಗಿ ಅನೇಕರು ಉದ್ಯೋಗ ಕಳೆದುಕೊಂಡಿದ್ದು, ಇಂತವರಿಗೆ ಉದ್ಯೋಗ ಕಲ್ಪಿಸಿಕೊಡಲು ಮತ್ತು ಅನೇಕ ಉದ್ಯೋಗದಾತರು ಅರ್ಹ ಅಭ್ಯರ್ಥಿಗಳ ಶೋಧದಲ್ಲಿದ್ದಾರೆ. ಈ ಸಮಸ್ಯೆಗೆ ಏಕಕಾಲಕ್ಕೆ ಪರಿಹಾರ ರೂಪದಲ್ಲಿ ಅಂತರ್ಜಾಲ ತಾಣದ ವೇದಿಕೆ ಮೂಲಕ ಪರಿಹಾರ ನೀಡಲು ರಾಜ್ಯ ಸರ್ಕಾರವು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವರ್ಚುವಲ್ ಉದ್ಯೋಗ ಮೇಳವನ್ನು ಇದೆ ಜುಲೈ 10 ರಂದು ಆಯೋಜಿಸಿದೆ.

* ವರ್ಚುವಲ್ ಉದ್ಯೋಗ ಮೇಳ ಹೆಸರೇ ಹೇಳುವಂತೆ ಇದು ನೇರ ಸಂದರ್ಶನವಲ್ಲ, ಅಂತರ್ಜಾಲ ಹಾಗೂ ಹೊಸ ತಂತ್ರಜ್ಞಾನ ಬಳಸಿಕೊಂಡು ಏರ್ಪಡಿಸಿರುವ ವರ್ಚುವಲ್ ಮೇಳ. ಈ ಪ್ರಯೋಗವನ್ನು ಫಲಪ್ರದಗೊಳಿಸಲೆಂದು ಪ್ರತಿಷ್ಠಿತ ಕಂಪನಿಗಳನ್ನು ಕರೆತರಲು ಸರ್ಕಾರ ಕಾರ್ಯತಂತ್ರ ಹೆಣೆದಿದೆ. ಆ ಮೂಲಕ ವಿವಿಧ ಕೌಶಲವಿರುವ ಅಭ್ಯರ್ಥಿಗಳು, ಲಾಕ್​ಡೌನ್​ನಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ ಅವಕಾಶ ಸೃಷ್ಟಿಸುವ ಆಶಾಭಾವನೆ ಹೊಂದಿದೆ.

* ಮೇಳದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಉದ್ಯೋಗದಾತರು ಹಾಗೂ ಅಭ್ಯರ್ಥಿಗಳು ಹೆಸರನ್ನು ಕೌಶಲ ಕರ್ನಾಟಕದಲ್ಲಿ ನೋಂದಾಯಿಸುವುದಕ್ಕೆ ಜು.8 ಕೊನೆಯ ದಿನವಾಗಿದೆ. ನೋಂದಾಯಿಸಿದ ಪ್ರತಿಯೊಬ್ಬರಿಗೂ ಉಚಿತವಾಗಿ ಮೇಲ್ ಮೂಲಕ ಪ್ರತ್ಯೇಕ ಲಾಗಿನ್ ಸೃಜಿಸಲಾಗುತ್ತದೆ.

*ಗಮನಿಸಿ : ಈ ಉದ್ಯೋಗ ಮೇಳದಲ್ಲಿ ಒಟ್ಟು 6100 ಕ್ಕೂ ಹೆಚ್ಚು ಹುದ್ದೆಗಳ ನೇಮಕ ನಡೆಯಲಿದೆ ಹಾಗು 34 ಅಧಿಕ ವಿಭಾಗಗಳಿಂದ ನೇಮಕಾತಿ ನಡೆಯಲಿದೆ.

ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ರಿಜಿಸ್ಟರ್ ಮಾಡಿಕೊಂಡು ಈ ವರ್ಚುಯಲ್ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು

Comments

Ramesh Badiger ಜುಲೈ 8, 2020, 11:17 ಪೂರ್ವಾಹ್ನ
Rajashekhar Tontanal ಜುಲೈ 8, 2020, 1:40 ಅಪರಾಹ್ನ
Rajashekhar Tontanal ಜುಲೈ 8, 2020, 1:40 ಅಪರಾಹ್ನ
Hanamant Hakkal ಜುಲೈ 28, 2020, 5:47 ಪೂರ್ವಾಹ್ನ
Hanamant Hakkal ಜುಲೈ 28, 2020, 5:47 ಪೂರ್ವಾಹ್ನ