Loading..!

UPSC ಯಿಂದ CAPF ಸಹಾಯಕ ಕಮಾಂಡೆಂಟ್ (ACs) ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ ಇದೀಗ ಪ್ರಕಟ
Published by: Bhagya R K | Date:26 ಜುಲೈ 2025
Image not found

ಕೇಂದ್ರ ಲೋಕ ಸೇವಾ ಆಯೋಗ ಆಯೋಗ (UPSC)ವು ಸಂಯೋಜಿತ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಸಹಾಯಕ ಕಮಾಂಡೆಂಟ್ (ACs) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಇದೀಗ ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ UPSCಯು ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ 2025 ಆಗಸ್ಟ್ 03 ರಂದು ನಡೆಸಲಿದ್ದು ಪರೀಕ್ಷೆಯ ಪ್ರವೇಶ ಪತ್ರವನ್ನು ಇದೀಗ ಬಿಡುಗಡೆ ಮಾಡಿದೆ.


ಮಾರ್ಚ್ 5ರಂದು ಪ್ರಕಟಿಸಲಾದ ಅಧಿಸೂಚನೆಯ ಆಧಾರವಾಗಿ, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಈಗ ತಮ್ಮ ಇ-ಅಡ್ಮಿಟ್ ಕಾರ್ಡ್‌ ಅನ್ನು UPSCನ ಅಧಿಕೃತ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.


ಪರೀಕ್ಷೆಯ ಮಾಹಿತಿಗಳು :
ಪರೀಕ್ಷೆ ಹೆಸರು : CAPF ಸಹಾಯಕ ಕಮಾಂಡೆಂಟ್ (ACs) ಪರೀಕ್ಷೆ 2025
ಪರೀಕ್ಷೆ ದಿನಾಂಕ : ಆಗಸ್ಟ್ 03, 2025
ಪ್ರವೇಶ ಪತ್ರ ಬಿಡುಗಡೆ ದಿನಾಂಕ : 25 ಜುಲೈ 2025
ಪ್ರವೇಶ ಪತ್ರ ಲಭ್ಯತೆ : ಈಗ ಡೌನ್‌ಲೋಡ್ ಮಾಡಬಹುದಾಗಿದೆ
ಅಧಿಕೃತ ವೆಬ್‌ಸೈಟ್ : [https://upsconline.gov.in](https://upsconline.gov.in)


ಪ್ರವೇಶ ಪತ್ರ ಡೌನ್‌ಲೋಡ್ ಮಾಡುವ ವಿಧಾನ :
1. UPSC ಅಧಿಕೃತ ವೆಬ್ಸೈಟ್ https://upsconline.gov.in/eadmitcard/admitcard_capf_2025/ಗೆ ಭೇಟಿ ನೀಡಿ.
2. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳ (ACs) ಪರೀಕ್ಷೆ, 2025 – ಇ-ಅಡ್ಮಿಟ್ ಕಾರ್ಡ್ ವಿಭಾಗದ ಕೆಳಗೆ ಇಲ್ಲಿ ಕ್ಲಿಕ್ ಮಾಡಿ ಲಿಂಕ್ ಮೇಲೆ ಟ್ಯಾಪ್ ಮಾಡಿ.
3. ನಂತರ ಹೌದು ಆಯ್ಕೆ ಕ್ಲಿಕ್ ಮಾಡಿ ಮುಂದುವರೆಯಿರಿ.
4. ಮುಂದಿನ ಪುಟದಲ್ಲಿ “Yes” ಆಯ್ಕೆ ಮಾಡಿ.
5. ನೋಂದಣಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ Submit ಕ್ಲಿಕ್ ಮಾಡಿ.
6 ನಿಮ್ಮ ಇ-ಅಡ್ಮಿಟ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ.
7. ಭವಿಷ್ಯದ ಉಲ್ಲೇಖಕ್ಕಾಗಿ ಮುದ್ರಣ ತೆಗೆದುಕೊಳ್ಳಿ.


ಗಮನಿಸಬೇಕಾದ ಸೂಚನೆಗಳು :
* ಪರೀಕ್ಷೆಯ ದಿನದಂದು ಪ್ರವೇಶ ಪತ್ರವನ್ನು ಆಧಾರ್ ಕಾರ್ಡ್ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿ ಜೊತೆಗೆ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.
* ಪ್ರವೇಶ ಪತ್ರವಿಲ್ಲದೇ ಯಾವುದೇ ಅಭ್ಯರ್ಥಿಗೆ ಪರೀಕ್ಷೆಗೆ ಪ್ರವೇಶ ನೀಡಲಾಗದು.
* ಪರೀಕ್ಷಾ ಸ್ಥಳ, ಸಮಯ, ಸೂಚನೆಗಳು ಮೊದಲೇ ಪರಿಶೀಲಿಸಿ ಅಗತ್ಯ ತಯಾರಿ ಮಾಡಿಕೊಂಡಿರಲಿ.


- CAPF ACs ಹುದ್ದೆಗಾಗಿರುವ ಈ ಸ್ಪರ್ಧಾತ್ಮಕ ಪರೀಕ್ಷೆ ಪ್ರಮುಖ ಕಡ್ಡಾಯ ಹಂತವಾಗಿದ್ದು, ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ತಕ್ಷಣವೇ ಡೌನ್‌ಲೋಡ್ ಮಾಡಿಕೊಂಡು, ಪರೀಕ್ಷೆಗೆ ತಯಾರಾಗಬೇಕಾಗಿದೆ.

Comments