Loading..!

ಶಿಕ್ಷಕರ ಅರ್ಹತಾ ಪರೀಕ್ಷೆ : ಇನ್ನು ಪ್ರಮಾಣ ಪತ್ರಕ್ಕೆ ಜೀವಿತಾವಧಿವರೆಗೂ ಮಾನ್ಯತೆ : ಕೇಂದ್ರ ಸರ್ಕಾರ
Published by: Basavaraj Halli | Date:3 ಜೂನ್ 2021
Image not found
ಎನ್‌ಸಿಟಿಇ 2011ರಲ್ಲಿ ಹೊರಡಿಸಿರುವ ಮಾರ್ಗಸೂಚಿ ಅನ್ವಯ ಭಾರತದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಪ್ರಮಾಣ ಪತ್ರ ಒಟ್ಟು 7 ವರ್ಷಗಳ ಮಾನ್ಯತೆ ಹೊಂದಿತ್ತು, ಇದೀಗ ಈ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿ ಜೀವಿತಾವಧಿವರೆಗೂ ಮಾನ್ಯತೆಯನ್ನು ವಿಸ್ತರಿಸಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಘೋಷಿಸಿದ್ದಾರೆ.

ಈ ನಿಯಮವು 2011 ನೇ ವರ್ಷದಿಂದ ಪೂರ್ವಾನ್ವಯವಾಗಲಿದ್ದು, 2011ಕ್ಕೆ ಯಾರು ಮಾನ್ಯತೆ ಕಳೆದುಕೊಂಡಿದ್ದಾರೋ ಅವರೂ ಕೂಡ ಶಿಕ್ಷಕ ಕೆಲಸಕ್ಕೆ ಅರ್ಹತೆ ಪಡೆಯಲಿದ್ದಾರೆ. ಹಾಗು ಈ ಅಭ್ಯರ್ಥಿಗಳಿಗೆ ಪರಿಷ್ಕೃತ ಟಿಇಟಿ ಪ್ರಮಾಣ ಪತ್ರ ನೀಡಲು ಕೇಂದ್ರಾಡಳಿತ ಹಾಗೂ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಲಾಗಿದೆ.

Comments