Loading..!

SSC ನೇಮಕಾತಿ 2025 : ಪರೀಕ್ಷಾ ದಿನಾಂಕ, MTS ಮತ್ತು ಹವಾಲ್ದಾರ್ ಹುದ್ದೆಗಳಿಗೆ 7948 ಪರಿಷ್ಕೃತ ಖಾಲಿ ಹುದ್ದೆಗಳು ಪ್ರಕಟ
Published by: Yallamma G | Date:1 ಡಿಸೆಂಬರ್ 2025
not found

                              ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ನಾನ್ ಟೆಕ್ನಿಕಲ್) ಹಾಗೂ ಹವಾಲ್ದಾರ್‌ಗಳ ಒಟ್ಟಾರೆ 7.948 ಹುದ್ದೆಗಳು ಭರ್ತಿಗೆ ಲಭ್ಯವಿರುವುದಾಗಿ ಸಿಬ್ಬಂದಿ ಆಯ್ಕೆ ಆಯೋಗ (ಎಸ್ಎಸ್‌ಸಿ) ಮಾಹಿತಿ ನೀಡಿದೆ. ಕಳೆದ ಜೂನ್‌ನಲ್ಲಿ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಈ ನೇಮಕಾತಿಯ ಪರೀಕ್ಷೆಗಳು ಫೆಬ್ರವರಿ 2026 ರಲ್ಲಿ ನಡೆಯುವ ನಿರೀಕ್ಷೆಯಿದೆ.  


                     ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ ಖಾಲಿ ಇರುವ 1075  Multi Tasking (Non-Technical)Staff, ಮತ್ತು ಹವಾಲ್ದಾರ್ ಹುದ್ದೆಗಳ ನೇಮಕಾತಿಗಾಗಿ SSLC ಪಾಸಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದೀಗ ಪರಿಷ್ಕೃತ ಅಧಿಸೂಚನೆಯ ಪ್ರಕಾರ, ಈ ನೇಮಕಾತಿ ಡ್ರೈವ್ ಮೂಲಕ ಒಟ್ಟು 7948 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇವುಗಳಲ್ಲಿ 6810 ಬಹುಕಾರ್ಯಕ ಸಿಬ್ಬಂದಿ ಹುದ್ದೆಗೆ ಮತ್ತು 1138 ಹವಾಲ್ದಾರ್ ಹುದ್ದೆಗಳಿಗೆ  ಕಾಯ್ದಿರಿಸಲಾಗಿದೆ. 


ಹುದ್ದೆಗಳ ವಿವರ : 7948
SSC MTS 18-25 ವಯೋಮಿತಿಯವರಿಗೆ : 6078 ಹುದ್ದೆಗಳು 
SSC MTS 18-27 ವಯೋಮಿತಿಯವರಿಗೆ : 732 ಹುದ್ದೆಗಳು 
CBIC & CBN ನಲ್ಲಿ ಹವಾಲ್ದಾರ್ : 1138 ಹುದ್ದೆಗಳು  


                           ದೆಹಲಿ ಪೊಲೀಸ್ ಪರೀಕ್ಷೆಗಳು ಜನವರಿ 22, 2026 ರವರೆಗೆ ನಿಗದಿಯಾಗಿರುವುದರಿಂದ SSC MTS ಹವಾಲ್ದಾರ್‌ಪರೀಕ್ಷಾ ದಿನಾಂಕ 2025 ಫೆಬ್ರವರಿ 2026 ರಲ್ಲಿ ನಡೆಯುವ ನಿರೀಕ್ಷೆಯಿದೆ. ಅಧಿಕೃತ ಪರೀಕ್ಷಾ ದಿನಾಂಕವನ್ನು ಸಿಬ್ಬಂದಿ ಆಯ್ಕೆ ಆಯೋಗ (SSC) ಜನವರಿ 2026 ರಲ್ಲಿ ತಮ್ಮ ಅಧಿಕೃತ ವೆಬ್‌ಸೈಟ್ www.ssc.gov.in ನಲ್ಲಿ ಬಿಡುಗಡೆ ಮಾಡುತ್ತದೆ. 

Comments