Loading..!

SSC GD 2026 ಪರೀಕ್ಷೆ ಬರೆಯುವವರಿಗೆ ಬಿಗ್‌ ಅಲರ್ಟ್: ಪರೀಕ್ಷೆ ಮುಂದೂಡಿಕೆ & ಹಾಲ್ ಟಿಕೆಟ್ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ!
Published by: Yallamma G | Date:18 ಫೆಬ್ರುವರಿ 2026
not found
ಭಾರತದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ನಿರೀಕ್ಷಿಸಿದ್ದ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 25,000 ಕ್ಕೂ ಅಧಿಕ ಕಾನ್ಸ್‌ಟೇಬಲ್ ಜಿಡಿ (GD Constable) ಪರೀಕ್ಷೆ 2026 ಕುರಿತು ಮಹತ್ವದ ಅಧಿಸೂಚನೆಯನ್ನು Staff Selection Commission (SSC) ಬಿಡುಗಡೆ ಮಾಡಿದೆ. ಫೆಬ್ರವರಿ 23, 2026 ರಿಂದ ಆರಂಭವಾಗಬೇಕಿದ್ದ ಈ ಪರೀಕ್ಷೆಯನ್ನು ಆಡಾಳಿತಾತ್ಮಕ ಕಾರಣಗಳಿಂದಾಗಿ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ. ಈ ಕುರಿತಾದ ಸಂಪೂರ್ಣ ವಿವರ, ಹೊಸ ನಿಯಮಗಳು ಮತ್ತು ಪ್ರವೇಶ ಪತ್ರದ (Admit Card) ಕುರಿತಾದ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

1. ಪರೀಕ್ಷೆ ಮುಂದೂಡಿಕೆ (Exam Deferred)
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs), SSF ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ರೈಫಲ್‌ಮ್ಯಾನ್ (GD) ಹುದ್ದೆಗಳ ನೇಮಕಾತಿಗಾಗಿ ಫೆಬ್ರವರಿ 23, 2026 ರಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (CBE) ನಿಗದಿಪಡಿಸಲಾಗಿತ್ತು. ಆದರೆ, ಆಯೋಗವು ಬಿಡುಗಡೆ ಮಾಡಿರುವ ಇತ್ತೀಚಿನ ಅಧಿಸೂಚನೆಯ ಪ್ರಕಾರ (ದಿನಾಂಕ: 17.02.2026), ಈ ಪರೀಕ್ಷೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ (Deferred till further notice).

SSC GD Constable ನೇಮಕಾತಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಪ್ರಾಕ್ಟೀಸ್ (ಅಭ್ಯಸಿಸಲು) ಮಾಡಲು ಇಲ್ಲಿ ಕ್ಲಿಕ್  ಮಾಡಿ. 

2. ಮುಂದಿನ ದಿನಾಂಕ ಯಾವಾಗ? (Next Exam Date)
ಸದ್ಯಕ್ಕೆ ಆಯೋಗವು ಯಾವುದೇ ನಿರ್ದಿಷ್ಟ ದಿನಾಂಕವನ್ನು ಪ್ರಕಟಿಸಿಲ್ಲ. "ಹೊಸ ದಿನಾಂಕಗಳನ್ನು ಸೂಕ್ತ ಸಮಯದಲ್ಲಿ ಪ್ರಕಟಿಸಲಾಗುವುದು" ಎಂದು SSC ತಿಳಿಸಿದೆ. ಆದ್ದರಿಂದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಅಥವಾ KPSCVaani ಯನ್ನು ಆಗಾಗ ಪರಿಶೀಲಿಸುತ್ತಿರಲು ಕೋರಲಾಗಿದೆ.

3. ಸ್ಲಾಟ್ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ (Important Change in Slot Selection)
ಇದು ಅಭ್ಯರ್ಥಿಗಳು ಗಮನಿಸಬೇಕಾದ ಅತ್ಯಂತ ಪ್ರಮುಖ ಅಂಶವಾಗಿದೆ. ಈ ಬಾರಿಯ ಪರೀಕ್ಷೆಗೆ "ಸ್ಲಾಟ್ ಆಯ್ಕೆ ಸೌಲಭ್ಯ" (Slot Selection facility) ಅನ್ವಯಿಸುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಅಂದರೆ, ಅಭ್ಯರ್ಥಿಗಳು ತಮಗೆ ಬೇಕಾದ ಪರೀಕ್ಷಾ ದಿನಾಂಕ ಅಥವಾ ಸಮಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ; ಆಯೋಗವು ನಿಗದಿಪಡಿಸಿದ ಸ್ಲಾಟ್‌ನಲ್ಲಿಯೇ ಪರೀಕ್ಷೆ ಬರೆಯಬೇಕಾಗುತ್ತದೆ.

4. ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರದ ಮಾಹಿತಿ (Admit Card & City Intimation)
ಪರೀಕ್ಷೆ ನಡೆಯುವ ವಿಧಾನ ಮತ್ತು ಹಾಲ್ ಟಿಕೆಟ್ ಬಿಡುಗಡೆಯ ಬಗ್ಗೆ ಆಯೋಗವು ಸ್ಪಷ್ಟ ನಿಯಮಗಳನ್ನು ತಿಳಿಸಿದೆ:


  • ಪರೀಕ್ಷಾ ನಗರದ ಮಾಹಿತಿ (Exam City Status): ಪರೀಕ್ಷೆ ಪ್ರಾರಂಭವಾಗುವ 8 ರಿಂದ 10 ದಿನಗಳ ಮೊದಲು ನಿಮ್ಮ ಪರೀಕ್ಷಾ ನಗರ (City Live) ಯಾವುದು ಎಂಬುದು ತಿಳಿಯಲಿದೆ.

  • ಪ್ರವೇಶ ಪತ್ರ (Admit Card): ಅಭ್ಯರ್ಥಿಗಳ ಪರೀಕ್ಷಾ ದಿನಾಂಕಕ್ಕೆ 2 ರಿಂದ 3 ದಿನಗಳ ಮೊದಲು ಮಾತ್ರ ಪ್ರವೇಶ ಪತ್ರವನ್ನು (Admission Certificates) ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.


ತ್ವರಿತ ಮುಖ್ಯಾಂಶಗಳು (Quick Summary Table):




ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಅಭ್ಯರ್ಥಿಗಳು ಈಗ ಏನು ಮಾಡಬೇಕು?
ಪರೀಕ್ಷೆ ಮುಂದೂಡಲಾಗಿದೆ ಎಂದು ಆತಂಕಪಡಬೇಕಾಗಿಲ್ಲ. ಬದಲಾಗಿ ಈ ಸಮಯವನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು.
✔️ ಓದು ಮುಂದುವರಿಸಿ
General Knowledge & Current Affairs
Reasoning ಮತ್ತು Mathematics ಅಭ್ಯಾಸ
Previous Year Question Papers
✔️ ಅಧಿಕೃತ ವೆಬ್‌ಸೈಟ್ ಪರಿಶೀಲನೆ
SSC ನ ಅಧಿಕೃತ ಅಧಿಸೂಚನೆಗಳು
Exam Date Update
Admit Card ಮಾಹಿತಿ
✔️ ನಕಲಿ ಸುದ್ದಿಗಳಿಂದ ದೂರವಿರಿ
Social Media ವದಂತಿಗಳನ್ನು ನಂಬಬೇಡಿ
ಅಧಿಕೃತ PDF/ನೋಟಿಸ್ ಮಾತ್ರ ಗಮನಿಸಿ

ಅಭ್ಯರ್ಥಿಗಳಿಗೆ ಸಲಹೆ:
ಪರೀಕ್ಷೆ ಮುಂದೂಡಲ್ಪಟ್ಟಿರುವುದರಿಂದ ಓದಲು ಹೆಚ್ಚಿನ ಕಾಲಾವಕಾಶ ಸಿಕ್ಕಂತಾಗಿದೆ. ಗಾಬರಿಗೊಳ್ಳದೆ ನಿಮ್ಮ ತಯಾರಿ ಮುಂದುವರಿಸಿ. ಅಧಿಕೃತ ಪ್ರಕಟಣೆ ಬಂದ ತಕ್ಷಣ ನಾವು KPSCVaaniಯಲ್ಲಿ ಅಪ್‌ಡೇಟ್ ಮಾಡುತ್ತೇವೆ.

📢 SSC, KPSC, RRB, KEA ಹಾಗೂ ಇತರೆ ಉದ್ಯೋಗ ಸುದ್ದಿಗಳ ತ್ವರಿತ ಅಪ್ಡೇಟ್‌ಗಳಿಗೆ KPSCVaani.com ಅನ್ನು ನಿರಂತರವಾಗಿ ಫಾಲೋ ಮಾಡಿ.

Comments