Loading..!

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ(SSC) 2025 : 14,582 ಹುದ್ದೆಗಳ ಪರೀಕ್ಷಾ ದಿನಾಂಕ ಇದೀಗ ಪ್ರಕಟ – ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ!
Published by: Yallamma G | Date:5 ಆಗಸ್ಟ್ 2025
Image not found

                                  ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಅಭ್ಯರ್ಥಿಗಳನ್ನು ನೇಮಿಸಲು ಸಿಬ್ಬಂದಿ ಆಯ್ಕೆ ಆಯೋಗವು (SSC) ಗ್ರೂಪ್ ಬಿ, ಗ್ರೂಪ್ ಸಿ ಹುದ್ದೆಗಳಿಗೆ ಪ್ರತಿವರ್ಷ ಹಲವು ರೀತಿಯ / ವಿವಿಧ ಲೆವೆಲ್‌ನ ಪರೀಕ್ಷೆಗಳನ್ನು ನಡೆಸುತ್ತದೆ. ಈ ಪರೀಕ್ಷೆಗಳ ಮೂಲಕ ಪ್ರತಿವರ್ಷ 50 ಸಾವಿರಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ಹುದ್ದೆಗಳನ್ನು ಸಚಿವಾಲಯಗಳು, ಕಚೇರಿಗಳು, ಇಲಾಖೆಗಳು, ಸಂಸ್ಥೆಗಳಡಿ ನೇಮಕ ಮಾಡಲಾಗುತ್ತದೆ. ಅಂತಹ ಪರೀಕ್ಷೆಗಳ ಪೈಕಿ ಸಿಜಿಎಲ್, ಸಿಹೆಚ್‌ಎಸ್‌ಎಲ್, ಜೆಹೆಚ್‌ಟಿ, ಸಿಪಿಒ, ಎಸ್‌ಐ, ದೆಹಲಿ ಪೊಲೀಸ್, ಕಾನ್ಸ್‌ಟೇಬಲ್ ಜಿಡಿ, ಜೂನಿಯರ್ ಇಂಜಿನಿಯರ್, ಸ್ಟೆನೋಗ್ರಾಫ‌ರ್ ಇತರೆ 3 ಹಲವು ಪರೀಕ್ಷೆಗಳು ಸೇರಿವೆ. ಇದೀಗ ಈ ಪರೀಕ್ಷೆಗಳ ಪೈಕಿ ಎಸ್‌ಎಸ್‌ಸಿ (CGL) 2025ರ ಟೈಯರ್-1 ಪರೀಕ್ಷೆಯ ವೇಳಾಪಟ್ಟಿಯನ್ನು SSC ಬಿಡುಗಡೆ ಮಾಡಿದೆ. 


                        ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ 09/06/2025 ರಂದು 14,582 Combined Graduate Level (CGL) (Group- B & C ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಸದರಿ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ನೇಮಕಾತಿಯ ಮೊದಲನೇ ಹಂತವಾಗಿ ಟೈಯರ್-1 ಪರೀಕ್ಷೆಯನ್ನು ನಡೆಸಲು ಪರೀಕ್ಷಾ ದಿನಾಂಕವನ್ನು ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು ಇದೀಗ ಪ್ರಕಟಿಸಿದೆ. ಈ CGL ಪರೀಕ್ಷೆಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜೂನ್ 9ರಂದು ಪ್ರಾರಂಭವಾಗಿ ಜುಲೈ 4ರಂದು ಕೊನೆಗೊಂಡಿತ್ತು.


📅 ಟೈಯರ್-1 ಪರೀಕ್ಷೆಯು ಆಗಸ್ಟ್ 13ರಿಂದ ಆಗಸ್ಟ್ 30ರ ವರೆಗೆ ನಡೆಸಲಿದೆ. ಟೈಯರ್-2 ಪರೀಕ್ಷೆಯು ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ. ಈ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತ (CBT) ಆಗಿರುತ್ತವೆ. 


                  ಸಿಬ್ಬಂದಿ ಆಯ್ಕೆ ಆಯೋಗವು (SSC) 2025ನೇ ಈ ಸಿಜಿಎಲ್ ಪರೀಕ್ಷೆ ಮೂಲಕ ಒಟ್ಟಾರೆ 14,582 ಕೇಂದ್ರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಿದೆ. ಇದರಲ್ಲಿ 6,183 ಹುದ್ದೆಗಳನ್ನು ಕಾಯ್ದಿರಿಸದ ವರ್ಗಕ್ಕೆ, 2,167 ಹುದ್ದೆಗಳನ್ನು ಪ.ಜಾತಿಗೆ, 1,088 ಹುದ್ದೆ ಪ.ಪಂಗಡ, 3,721 ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮತ್ತು 1423 ಹುದ್ದೆಗಳನ್ನು ಇಡಬ್ಲ್ಯುಎಸ್ ವರ್ಗಗಳಿಗೆ ಕಾಯ್ದಿರಿಸಲಾಗಿದೆ. 


📝ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆ ಹಂತಗಳು : 
# ಎಸ್‌ಎಸ್‌ಸಿ ಕಂಬೈನ್ಸ್ ಗ್ರಾಜುಯೇಟ್ ಲೆವೆಲ್‌ನ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ನಾಲ್ಕು ಹಂತಗಳಲ್ಲಿ ಪರೀಕ್ಷೆಯನ್ನು ಕೆಳಗಿನಂತೆ ನಡೆಸುತ್ತದೆ.
- ಟೈಯರ್ -1: ಕಂಪ್ಯೂಟರ್ ಆಧಾರಿತ ಪರೀಕ್ಷೆ
- ಟೈಯರ್-2: ಕಂಪ್ಯೂಟರ್ ಆಧಾರಿತ ಪರೀಕ್ಷೆ
- ಟೈಯರ್ 1, 2 ಪರೀಕ್ಷೆಗಳು ಆಪ್ಟೆಕ್ಟಿವ್ ಮಾದರಿ, ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳನ್ನು ಹೊಂದಿರುತ್ತವೆ.
- ಟೈಯರ್-3: ವಿವರಣಾತ್ಮಕ ಪರೀಕ್ಷೆ
- ಟೈಯರ್-4 : ಕಂಪ್ಯೂಟರ್ ಪ್ರೊಫೀಸಿಯೆನ್ಸಿ ಟೆಸ್ಟ್ / ಡಾಟಾ ಎಂಟ್ರಿ ಸ್ಕಿಲ್ ಟೆಸ್ಟ್ ಅನ್ನು ಯಾವ ಹುದ್ದೆಗಳಿಗೆ ಅನ್ವಯಿಸುತ್ತದೋ ಆ ಹುದ್ದೆಗಳಿಗೆ ಮಾತ್ರ ನಡೆಸಲಾಗುತ್ತದೆ.


➡️ ಟೈಯರ್-1 ಪರೀಕ್ಷೆ ಮಾದರಿ : 
ಟೈಯರ್-1 ಪರೀಕ್ಷೆಯಲ್ಲಿ ಒಟ್ಟು 100 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರಲ್ಲಿ ಜನರಲ್ ಇಂಟೆಲಿಜೆನ್ಸ್ ಆ್ಯಂಡ್ ರೀಸನಿಂಗ್‌ಗೆ ಸಂಬಂಧಿಸಿದ 25 ಪ್ರಶ್ನೆಗಳು, 25 ಜನರಲ್ ಅವೇರ್‌ನೆಸ್, 25 ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, 25 ಇಂಗ್ಲಿಷ್ ಕಾಂಪ್ರಹೆನ್ನನ್ ಇರುತ್ತದೆ. ಇಡೀ ಪ್ರಶ್ನೆ ಪತ್ರಿಕೆಯು ಒಟ್ಟು 200 ಅಂಕಗಳನ್ನು ಹೊಂದಿರುತ್ತದೆ. ಮುಖ್ಯವಾದ ವಿಷಯವೆಂದರೆ ಪ್ರತಿ ತಪ್ಪು ಉತ್ತರಕ್ಕೂ 0.50 ಋಣಾತ್ಮಕ ಅಂಕಗಳು ಇರುತ್ತವೆ. ಇದನ್ನು ಹೊರತುಪಡಿಸಿ, ಇಂಗ್ಲಿಷ್ ಕಾಂಪ್ರಹೆನ್ನನ್ ವಿಭಾಗವನ್ನು ಹೊರತುಪಡಿಸಿ, ಉಳಿದ ಎಲ್ಲಾ ಪ್ರಶ್ನೆಗಳು ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ಇರುತ್ತವೆ.


➡️ ಟೈಯರ್-2 ಪರೀಕ್ಷೆ ಮಾದರಿ : 
ಟೈಯರ್-2 ಪರೀಕ್ಷೆಯಲ್ಲಿ ನಾಲ್ಕು ಪೇಪರ್‌ಗಳಿರುತ್ತವೆ. ಪ್ರತಿ ಪೇಪರ್‌ನಲ್ಲಿ 200 ಅಂಕಗಳಿಗೆ ಪ್ರಶ್ನೆ ಕೇಳಲಾಗುತ್ತದೆ. 2 ಗಂಟೆಗಳ ಕಾಲ ಪರೀಕ್ಷೆ ಇರುತ್ತದೆ. 
- ಪೇಪರ್-1: ಕ್ವಾಂಟಿಟೇಟಿವ್ ಎಬಿಲಿಟೀಸ್ (100, 200 )
- ಪೇಪರ್-2: ಇಂಗ್ಲಿಷ್ ಭಾಷೆ ಮತ್ತು ಕಂಪ್ರೆಹೆನ್ನನ್ (200 5, 200 50៩)
- ಪೇಪರ್-3: ಸಂಖ್ಯಾಶಾಸ್ತ್ರ (100 ಪ್ರಶ್ನೆ, 2000៩)
- ಪೇಪರ್-4: ಸಾಮಾನ್ಯ ಜ್ಞಾನ (ಫೈನಾನ್ಸ್ ಮತ್ತು ಆರ್ಥಿಕತೆ) (100 ಪ್ರಶ್ನೆ, 200 ಅಂಕ)

📌 ಪ್ರಮುಖ ಸೂಚನೆಗಳು : 
=> ಪ್ರತಿ ತಪ್ಪು ಉತ್ತರಕ್ಕೆ 0.50 ಅಂಕ
=> ಟೈಯರ್-2ನ ಪೇಪರ್ 1, 2 ಎಲ್ಲ ಹುದ್ದೆಗಳಿಗೂ ಕಡ್ಡಾಯ.
=> ಟೈಯರ್-2 ಪೇಪರ್-3 ಕೇವಲ ಜೆಎಸ್‌ಒ, ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್ ಗ್ರೇಡ್-2 ಹುದ್ದೆಗೆ ಅರ್ಜಿ ಹಾಕಿದವರಿಗೆ ಮಾತ್ರ ಇರುತ್ತದೆ.
=> ಟೈಯರ್-2 ಪೇಪರ್-4 ಪರೀಕ್ಷೆಯು ಕೇವಲ ಅಸಿಸ್ಟಂಟ್ ಆಡಿಟ್ ಆಫೀಸರ್, ಅಸಿಸ್ಟಂಟ್ ಅಕೌಂಟ್ಸ್ ಆಫೀಸರ್ ಹುದ್ದೆಗೆ ಮಾತ್ರ ಇರುತ್ತದೆ.
=> ಟೈಯರ್-1 ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಈ ಪೇಪರ್ ಪರೀಕ್ಷೆ ಬರೆಯಬೇಕು.

Comments