Loading..!

ಸಮಾಜ ಕಲ್ಯಾಣ ಇಲಾಖೆಯಿಂದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ
Published by: Basavaraj Halli | Date:8 ಫೆಬ್ರುವರಿ 2021
Image not found
ರಾಜ್ಯದಲ್ಲಿ  ಅನೇಕ SC/ST ಪಂಗಡಕ್ಕೆ ಸೇರಿದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು, ಕರ್ನಾಟಕ ಸಮಾಜ ಕಲ್ಯಾಣ ವತಿಯಿಂದ ಸರ್ಕಾರವು ಪ್ರತಿಭಾವಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಪ್ರೋತ್ಸಾಹಧನವನ್ನು ನೀಡುತ್ತಾ ಬಂದಿದೆ.

ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ 35000 ಸಾವಿರವರೆಗೂ ಪ್ರೋತ್ಸಾಹಧನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

->ಅಧ್ಯಯನಕ್ಕೆ ಪ್ರೋತ್ಸಾಹಧನವನ್ನು ವಿಂಗಡಿಸಲಾಗಿದೆ:

- ಪಿಯುಸಿ ಮತ್ತು ಡಿಪ್ಲೋಮೋ : 20000/-

- ಯಾವುದೇ ಪದವಿ : 25000/-

- ಸ್ನಾತಕೋತ್ತರ ಪದವಿ : 30000/-

- ಇಂಜಿನಿಯರಿಂಗ್, ನರ್ಸಿಂಗ್, ಅಗ್ರಿಕಲ್ಚರ್ : 35000/-

* ಸೂಚನೆ : 2020ನೇ ಸಾಲಿನಲ್ಲಿ ಮೊದಲ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರ ಈ ಪ್ರೋತ್ಸಾಹಧನಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಪ್ರೋತ್ಸಾಹಧನಕ್ಕೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 15 ಫೆಬ್ರುವರಿ 2021

Comments

Murthinaik M Naik ಫೆಬ್ರ. 26, 2021, 12:40 ಪೂರ್ವಾಹ್ನ