Loading..!

ಎಸ್‌ಬಿಐನಿಂದ 18000 ನೇಮಕಾತಿ ಘೋಷಣೆ : ಈ ಕುರಿತು ಮಾಹಿತಿ ನಿಮಗಾಗಿ
Published by: Yallamma G | Date:7 ಮೇ 2025
not found

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ' (ಎಸ್‌ಬಿಐ) ಈ ವರ್ಷ ಭರ್ಜರಿ ನೇಮಕಾತಿಗೆ ಮುಂದಾಗಿದೆ. ಸುಮಾರು 18 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಇದು ಎಸ್‌ಬಿಐ ದಶಕದ ಇತಿಹಾಸದಲ್ಲಿಯೇ ಅತಿ ದೊಡ್ಡ ನೇಮಕಾತಿ ಆಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಸಿ.ಎಸ್.ಶೆಟ್ಟಿ ಹೇಳಿದ್ದಾರೆ.


                       ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿರುವ ಅವರು, ''ಈ ವರ್ಷ 3,000 ಪ್ರೊಬೆಷನರಿ ಆಫೀಸರ್, 14,000 ಕ್ಲರಿಕಲ್ ಹುದ್ದೆಗಳು ಮತ್ತು ಲೋಕಲ್ ಬ್ಯಾಂಕ್ ಆಫೀಸರ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ'' ಎಂದು ಹೇಳಿದ್ದಾರೆ. ''ತಂತ್ರಜ್ಞಾನವು ವೇಗವಾಗಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ವಲಯವು ಸಹ ಡಿಜಿಟಲ್ ರೂಪಾಂತರಕ್ಕೆ ಒಳಗಾಗುತ್ತಿದೆ. ಇದು ಹಣಕಾಸು ಸುರಕ್ಷತಾ ದೃಷ್ಟಿಯಿಂದ ಉತ್ತಮ ಬೆಳವಣಿಗೆ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ 1,600 ಸಿಸ್ಟಮ್ ಆಫೀಸರ್ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು" ಎಂದು ತಿಳಿಸಿದ್ದಾರೆ. 

Comments