ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಿಂದ 2025ನೇ ಸಾಲಿನ 5,000ಕ್ಕೂ ಹೆಚ್ಚು ಜೂನಿಯರ್ ಅಸೋಸಿಯೇಟ್ (ಬ್ಯಾಂಕ್ ಕ್ಲರ್ಕ್) ಹುದ್ದೆಗಳ ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು 14-09-2025ರಂದು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಪ್ರಾಥಮಿಕ ಆನ್‌ಲೈನ್ ಪರೀಕ್ಷೆಗೆ ಸಂಬಂಧಿಸಿದ ಕಾಲ್ ಲೆಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಅರ್ಜಿದಾರರು ತಮ್ಮ ರಿಜಿಸ್ಟ್ರೇಷನ್ ಸಂಖ್ಯೆ/ರೋಲ್ ಸಂಖ್ಯೆ ಹಾಗೂ ಪಾಸ್‌ವರ್ಡ್ ಬಳಸಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
2025ರ ಆಗಸ್ಟ್ 06ರಿಂದ 26ರವರೆಗೆ ಅರ್ಜಿ ಸಲ್ಲಿಸಿದ್ದ ಅರ್ಹ ಅಭ್ಯರ್ಥಿಗಳಿಗೆ, ಆನ್‌ಲೈನ್ ಪ್ರಿಲಿಮಿನರಿ ಪರೀಕ್ಷೆ ಸೆಪ್ಟೆಂಬರ್ 20, 21 ಮತ್ತು 27ರಂದು ದೇಶದ ವಿವಿಧ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.
ಅಭ್ಯರ್ಥಿಗಳು ತಮ್ಮ ಕಾಲ್ ಲೆಟರ್‌ಗಳನ್ನು SBI ಅಧಿಕೃತ ವೆಬ್‌ಸೈಟ್‌ನಲ್ಲಿನ ಲಿಂಕ್ ಮುಖಾಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪರೀಕ್ಷೆಗೆ ಹಾಜರಾಗುವವರು ಕಾಲ್ ಲೆಟರ್ ಜೊತೆಗೆ ಮಾನ್ಯ ಗುರುತಿನ ದಾಖಲೆಯೊಂದನ್ನು ಕಡ್ಡಾಯವಾಗಿ ತಂದುಕೊಳ್ಳಬೇಕಾಗಿದೆ ಎಂದು ಎಸ್‌ಬಿಐ ಸೂಚಿಸಿದೆ.
ಅಭ್ಯರ್ಥಿಗಳು ಸಮಯಕ್ಕೆ ತಕ್ಕಂತೆ ಕಾಲ್ ಲೆಟರ್ ಡೌನ್‌ಲೋಡ್ ಮಾಡಿಕೊಂಡು, ಪರೀಕ್ಷಾ ಸೂಚನೆಗಳನ್ನು ಗಮನವಿಟ್ಟು ಪಾಲಿಸುವಂತೆ ಬ್ಯಾಂಕ್ ಮನವಿ ಮಾಡಿದೆ.
ಪರೀಕ್ಷಾ ವಿವರಗಳು :
- ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
- ಹುದ್ದೆ ಹೆಸರು: ಕ್ಲರ್ಕ್ (ಜೂನಿಯರ್ ಅಸೋಸಿಯೇಟ್)
- ಒಟ್ಟು ಹುದ್ದೆಗಳು: 6,589
- ಪ್ರವೇಶ ಪತ್ರ ಬಿಡುಗಡೆ ದಿನಾಂಕ: 14 ಸೆಪ್ಟೆಂಬರ್ 2025
- ಪರೀಕ್ಷಾ ದಿನಾಂಕಗಳು: 20, 21 ಹಾಗೂ 27 ಸೆಪ್ಟೆಂಬರ್ 2025
- ಆಯ್ಕೆ ಪ್ರಕ್ರಿಯೆ: ಪ್ರಿಲಿಮ್ಸ್ + ಮೆನ್ಸ್
- ಅಧಿಕೃತ ವೆಬ್‌ಸೈಟ್: www.sbi.co.in
- ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಮುಂಚೆ ಕನಿಷ್ಠ ಒಂದು ಗಂಟೆ ಮುಂಚೆಯೇ ಕೇಂದ್ರದಲ್ಲಿ ಹಾಜರಾಗಬೇಕು.
- ಪ್ರವೇಶ ಪತ್ರದಲ್ಲಿ ಇರುವ ವಿವರಗಳು
- ಅಭ್ಯರ್ಥಿಯ ಹೆಸರು, ರೋಲ್ ಸಂಖ್ಯೆ
- ಫೋಟೋ ಹಾಗೂ ಸಹಿ
- ಪರೀಕ್ಷೆಯ ದಿನಾಂಕ, ಸಮಯ ಹಾಗೂ ಕೇಂದ್ರ ವಿಳಾಸ
- ವರದಿ ಸಮಯ, ಸೂಚನೆಗಳು
ಪರೀಕ್ಷಾ ಮಾದರಿ (Prelims Exam Pattern 2025)
- ಒಟ್ಟು ಪ್ರಶ್ನೆಗಳು: 100
- ಒಟ್ಟು ಅಂಕಗಳು: 100
- ಅವಧಿ: 60 ನಿಮಿಷಗಳು (3 ವಿಭಾಗಗಳಿಗೆ 20 ನಿಮಿಷ ಪ್ರತಿ)
- ನೆಗೆಟಿವ್ ಮಾರ್ಕಿಂಗ್: ತಪ್ಪು ಉತ್ತರಕ್ಕೆ ¼ ಅಂಕ ಕಡಿತ
ವಿಷಯ : ಪ್ರಶ್ನೆಗಳು, ಅಂಕಗಳು, ಅವಧಿ
- ಇಂಗ್ಲಿಷ್ ಭಾಷೆ: 30 ಪ್ರಶ್ನೆಗಳು, 30 ಅಂಕಗಳು, 20 ನಿಮಿಷಗಳು
- ಸಂಖ್ಯಾತ್ಮಕ ಸಾಮರ್ಥ್ಯ: 35 ಪ್ರಶ್ನೆಗಳು, 35 ಅಂಕಗಳು, 20 ನಿಮಿಷಗಳು
- ತಾರ್ಕಿಕ ಸಾಮರ್ಥ್ಯ: 35 ಪ್ರಶ್ನೆಗಳು, 35 ಅಂಕಗಳು, 20 ನಿಮಿಷಗಳು
- ಒಟ್ಟು : 100ಪ್ರಶ್ನೆಗಳು, 100ಅಂಕಗಳು, 60 ನಿಮಿಷ
👉 ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು SBI Career Page ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ಪರೀಕ್ಷಾ ದಿನಾಂಕ, ಸಮಯ ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.
Comments