ಅದೆಷ್ಟು ಬಾರಿ ಸರ್ಕಾರಿ ನೇಮಕಾತಿ ಅಧಿಸೂಚನೆಗಳು ನಿಮ್ಮ ಕಣ್ಮುಂದೆಯೇ ಹಾದು ಹೋಗಿವೆ? ನಿಮಗೆ ತಿಳಿದಿರದೆಯೇ ಅವಕಾಶಗಳು ಕೈಜಾರಿವೆಯೇ? ಇದೀಗ ರೈಲ್ ವಿಕಾಸ್ ನಿಗಮ್ (RVNL) ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಪ್ರಾಜೆಕ್ಟ್ ಮ್ಯಾನೇಜರ್, ಸೀನಿಯರ್ ಸೈಟ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಹಾಕಲು ಇದು ಸುವರ್ಣ ಅವಕಾಶ.
ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) 2025ರ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಒಟ್ಟು 09 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪ್ರಾಜೆಕ್ಟ್ ಮ್ಯಾನೇಜರ್, ಸೀನಿಯರ್ ಸೈಟ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ವೆಬ್‌ಸೈಟ್ [www.rvnl.org](http://www.rvnl.org) ನಲ್ಲಿ ಲಭ್ಯವಿದೆ. ಆಸಕ್ತರು ಆಫ್‌ಲೈನ್ ವಿಧಾನದಲ್ಲಿ ಅಥವಾ ವಾಕ್-ಇನ್ ಸಂದರ್ಶನ ಮುಖಾಂತರ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರಗಳು :
ಪ್ರಾಜೆಕ್ಟ್ ಮ್ಯಾನೇಜರ್ : 1
ಕ್ವಾಲಿಟಿ ಅಶ್ಯುರನ್ಸ್ ಎಂಜಿನಿಯರ್ : 1
ಚೀಫ್ ಸೇಫ್ಟಿ ಮ್ಯಾನೇಜರ್ : 1
ಸೀನಿಯರ್ ಸೈಟ್ ಎಂಜಿನಿಯರ್ : 1
SAP ಎಂಜಿನಿಯರ್ (ಡೆವಲಪರ್) : 1
SAP ಎಂಜಿನಿಯರ್ (ಫಂಕ್ಷನಲ್ ಕನ್ಸಲ್ಟೆಂಟ್/ಫಿನ್) : 1
ಡಿಜಿಎಂ (ಐಟಿ) : 1
ಡಿಜಿಎಂ (ಎಸ್ & ಟಿ/ಬಿಡಿ) : 1
ಸೀನಿಯರ್ ಎಕ್ಸಿಕ್ಯೂಟಿವ್ (ಐಟಿ) : 1
ಶೈಕ್ಷಣಿಕ ಅರ್ಹತೆ :
- ಪ್ರಾಜೆಕ್ಟ್ ಮ್ಯಾನೇಜರ್, ಸೀನಿಯರ್ ಸೈಟ್ ಎಂಜಿನಿಯರ್, ಡಿಜಿಎಂ ಹುದ್ದೆಗಳು – B.E ಅಥವಾ B.Tech
- ಕ್ವಾಲಿಟಿ ಅಶ್ಯುರನ್ಸ್ ಎಂಜಿನಿಯರ್ – ಡಿಪ್ಲೊಮಾ, B.E ಅಥವಾ B.Tech
- ಚೀಫ್ ಸೇಫ್ಟಿ ಮ್ಯಾನೇಜರ್ – ಡಿಪ್ಲೊಮಾ, B.E/B.Tech, M.E
- SAP ಎಂಜಿನಿಯರ್ (ಡೆವಲಪರ್) – B.E/B.Tech, BCA, MCA
- SAP ಎಂಜಿನಿಯರ್ (ಫಂಕ್ಷನಲ್ ಕನ್ಸಲ್ಟೆಂಟ್/ಫಿನ್) – B.Com, MBA, M.Com
ವೇತನ ಶ್ರೇಣಿ :
- ಡಿಜಿಎಂ (ಐಟಿ) – ₹70,000 ರಿಂದ ₹2,00,000/- ಪ್ರತಿಮಾಸ
- ಸೀನಿಯರ್ ಎಕ್ಸಿಕ್ಯೂಟಿವ್ (ಐಟಿ) – ₹27,000 ರಿಂದ ₹1,00,000/- ಪ್ರತಿಮಾಸ
- ಇತರೆ ಹುದ್ದೆಗಳು – RVNL ನಿಯಮಾವಳಿ ಪ್ರಕಾರ
ಅರ್ಜಿ ಶುಲ್ಕ :
- SC/ST/EWS ಅಭ್ಯರ್ಥಿಗಳಿಗೆ : ಶುಲ್ಕವಿಲ್ಲ
- UR/OBC ಅಭ್ಯರ್ಥಿಗಳಿಗೆ : ₹400/- (ಡಿಮಾಂಡ್ ಡ್ರಾಫ್ಟ್ ಮುಖಾಂತರ)
ಆಯ್ಕೆ ವಿಧಾನ :
- ಲಿಖಿತ ಪರೀಕ್ಷೆ
- ದಾಖಲೆ ಪರಿಶೀಲನೆ
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ
1. ವಾಕ್-ಇನ್ ಸಂದರ್ಶನ (ಪ್ರಾಜೆಕ್ಟ್ ಮ್ಯಾನೇಜರ್, ಕ್ವಾಲಿಟಿ ಅಶ್ಯುರನ್ಸ್ ಎಂಜಿನಿಯರ್)ಹುದ್ದೆಗಳಿಗೆ :
ದಿನಾಂಕ: 22-ಆಗಸ್ಟ್-2025, ಬೆಳಗ್ಗೆ 10:00
ಸ್ಥಳ: ರೈಲ್ ವಿಕಾಸ್ ನಿಗಮ್ ಲಿಮಿಟೆಡ್, ಅಹಾರಿಕಾ, ಗ್ರೌಂಡ್ ಫ್ಲೋರ್, ಆಗಸ್ಟ್ ಕ್ರಾಂತಿ ಭವನ, ಭಿಕಾಜಿ ಕಮಾ ಪ್ಲೇಸ್, ಆರ್.ಕೆ.ಪುರಂ, ನವದೆಹಲಿ-110066
2. ಆಫ್‌ಲೈನ್ ಅರ್ಜಿ (ಸೀನಿಯರ್ ಸೈಟ್ ಎಂಜಿನಿಯರ್, ಡಿಜಿಎಂ, SAP ಎಂಜಿನಿಯರ್ ಹುದ್ದೆಗಳು):
- ಅರ್ಜಿಯನ್ನು ಹಾಗೂ ಅಗತ್ಯ ದಾಖಲೆಗಳನ್ನು ಸ್ವ-ಸಹಿ ಸಹಿತ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
- ವಿಳಾಸ :
ಡಿಸ್ಪ್ಯಾಚ್ ಸೆಕ್ಷನ್, ಗ್ರೌಂಡ್ ಫ್ಲೋರ್, ಆಗಸ್ಟ್ ಕ್ರಾಂತಿ ಭವನ, ಭಿಕಾಜಿ ಕಮಾ ಪ್ಲೇಸ್, ಆರ್.ಕೆ.ಪುರಂ, ನವದೆಹಲಿ-110066
ಕೊನೆಯ ದಿನಾಂಕ: 10-ಸೆಪ್ಟೆಂಬರ್-2025
ಪ್ರಮುಖ ದಿನಾಂಕಗಳು :
- ಅರ್ಜಿ ಪ್ರಾರಂಭ ದಿನಾಂಕ: 11-ಆಗಸ್ಟ್-2025
- ವಾಕ್-ಇನ್ ಸಂದರ್ಶನ: 22-ಆಗಸ್ಟ್-2025
- ಆಫ್‌ಲೈನ್ ಅರ್ಜಿ ಕೊನೆಯ ದಿನಾಂಕ: 10-ಸೆಪ್ಟೆಂಬರ್-2025
ಇದೊಂದು ಕೇಂದ್ರ ಸರ್ಕಾರದ ಉದ್ಯೋಗ ಅವಕಾಶವಾಗಿದ್ದು, ರೈಲು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಭಾಗಿಯಾಗಲು ಬಯಸುವ ಇಂಜಿನಿಯರ್‌ಗಳು ಹಾಗೂ ತಾಂತ್ರಿಕ ತಜ್ಞರಿಗೆ ಉತ್ತಮ ಅವಕಾಶ.
Comments