Indian Railway 23 ಮಾರ್ಚ್ 2021 5 years ago
Published by Basavaraj Halli

ಭಾರತೀಯ ರೈಲ್ವೆ ಇಲಾಖೆಯಿಂದ RRB NTPC 6ನೇ ಹಂತದ ಪರೀಕ್ಷಾ ದಿನಾಂಕ ಪ್ರಕಟ

ಭಾರತೀಯ ರೈಲ್ವೆ ಇಲಾಖೆಯಿಂದ RRB NTPC 6ನೇ ಹಂತದ ಪರೀಕ್ಷಾ ದಿನಾಂಕ ಪ್ರಕಟ
ಭಾರತೀಯ ರೈಲ್ವೆ ಇಲಾಖೆಯಾ ನೇಮಕಾತಿ ಮಂಡಳಿಯು ನಾನ್‌-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (NTPC) ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ 6 ನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷಾ ದಿನಾಂಕವನ್ನು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.
ಪರೀಕ್ಷೆಯು ಇದೆ ಏಪ್ರಿಲ್‌ 1, 3, 5, 6, 7 ಮತ್ತು 8 ನೇ ತಾರೀಖಿನಂದು ದೇಶದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಲಾಗುವದು.
6 ನೇ ಹಂತದ ಪರೀಕ್ಷೆಯಲ್ಲಿ ಒಟ್ಟು 6 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಗಾಗಿ ನೋಂದಾಯಿಸಿಕೊಂಡಿರುವುದಾಗಿ ಹಾಗೂ ಅಭ್ಯರ್ಥಿಗಳು ತಮ್ಮ ಪರೀಕ್ಷೆ ನಡೆಯುವ ನಗರ, ದಿನಾಂಕ, ಉಚಿತ ಪ್ರಯಾಣ ಪಾಸ್‌ ಅನ್ನು (ಲಭ್ಯ ಇರುವವರು) ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಆರ್‌ಆರ್‌ಬಿ ತಿಳಿಸಿದೆ.
ಈ ಕುರಿತು ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments