Loading..!

ಭಾರತೀಯ ರೈಲ್ವೆ ಮಂಡಳಿಯಲ್ಲಿ (RRB) ಖಾಲಿ ಇರುವ 9,000 ಟೆಕ್ನಿಷಿಯನ್ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ | ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
Published by: Bhagya R K | Date:5 ಫೆಬ್ರುವರಿ 2024
Image not found

ಭಾರತೀಯ ರೈಲ್ವೆ ಮಂಡಳಿಯ ಟೆಕ್ನಿಷಿಯನ್ ಹುದ್ದೆಗಳ ನಿರೀಕ್ಷೆಯಲ್ಲಿದ್ದ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಇದೀಗ ಸಿಹಿಸುದ್ದಿ ಬಂದಿದ್ದು, ಭಾರತೀಯ ರೈಲ್ವೆ ಮಂಡಳಿಯಲ್ಲಿ (RRB) ಖಾಲಿ ಇರುವ 9,000 ಟೆಕ್ನಿಷಿಯನ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ನೇಮಕಾತಿ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಫೆಬ್ರವರಿಯಲ್ಲಿ ಕೊನೆಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ. ಈ ಹುದ್ದೆಗಳ ಆಕಾಂಕ್ಷಿಗಳು ಕೂಡಲೇ ಉತ್ತಮ ತಯಾರಿ ಆರಂಭಿಸಿ ಯಶಸ್ವಿಯಾಗಿ.
- 2018ರಲ್ಲಿ ರೈಲ್ವೆಯು ಅಸಿಸ್ಟೆಂಟ್ ಲೊಕೋ ಪೈಲಟ್ ಮತ್ತು ಟೆಕ್ನಿಷಿಯನ್ ಸೇರಿ 64,371 ಹುದ್ದೆಗಳಿಗೆ ಒಟ್ಟಾಗಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಆದರೆ, ಈಗಾಗಲೇ 5,696 ಅಸಿಸ್ಟೆಂಟ್ ಲೊಕೋ ಪೈಲಟ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟವಾಗಿದೆ. 9,000 ಟೆಕ್ನಿಷಿಯನ್ ಹುದ್ದೆಗಳಿಗೆ ನೇಮಕಾತಿ ನಡೆಸುವುದಾಗಿ ಇದೀಗ ಪ್ರಕಟಣೆಯಲ್ಲಿ ತಿಳಿಸಿದೆ.
* ಈ ಕುರಿತು ಇನ್ನೇನು ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ.

Comments

User ಫೆಬ್ರ. 6, 2024, 11:28 ಪೂರ್ವಾಹ್ನ