Indian Railway 13 ಆಗಸ್ಟ್‍ 2019 7 years ago

ರೈಲ್ವೆ ನೇಮಕಾತಿ ಇಲಾಖೆಯ ನಡೆಸಿದ 2019 ನೇ ಸಾಲಿನ ಜೂನಿಯರ್ ಇಂಜಿನಿಯರ್ ಹುದ್ದೆಗಳ CBT-1 ಪರೀಕ್ಷಾ ಫಲಿತಾಂಶ ಪ್ರಕಟ

ರೈಲ್ವೆ ನೇಮಕಾತಿ ಇಲಾಖೆಯ ನಡೆಸಿದ 2019 ನೇ ಸಾಲಿನ ಜೂನಿಯರ್ ಇಂಜಿನಿಯರ್ ಹುದ್ದೆಗಳ CBT-1 ಪರೀಕ್ಷಾ ಫಲಿತಾಂಶ ಪ್ರಕಟ
ಆರ್‌ಆರ್‌ಬಿ ಜೆಇ ನೇಮಕಾತಿ ಫಲಿತಾಂಶ 2019 ಬಿಡುಗಡೆಯಾಗಿದೆ : ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ), RRB JE CBT 1 ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ರೈಲ್ವೆ RRB JE CBT 1 ಪರೀಕ್ಷೆಗೆ ಹಾಜರಾದ ಆಕಾಂಕ್ಷಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಆರ್‌ಆರ್‌ಬಿ ಜೆಇ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಆರ್‌ಆರ್‌ಬಿ ಜೆಇ ಫಲಿತಾಂಶ 2019 ಅನ್ನು ಮೆರಿಟ್ ಲಿಸ್ಟ್ ರೂಪದಲ್ಲಿ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಅಭ್ಯರ್ಥಿಗಳು ತಮ್ಮ ಆರ್‌ಆರ್‌ಬಿ ಜೆಇ ಫಲಿತಾಂಶ 2019 ಅನ್ನು ಡೌನ್‌ಲೋಡ್ ಮಾಡಲು ತಮ್ಮ ಪ್ರಾದೇಶಿಕ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಲ್ಲದೆ, CBT 2 ಹಂತದ ಪರೀಕ್ಷೆಯ ವೇಳಾಪಟ್ಟಿ ಸಹ ಬಿಡುಗಡೆ ಮಾಡಲಾಗಿದ್ದು. ಆಗಸ್ಟ್ ತಿಂಗಳ 28 ನೇ ತಾರೀಕಿನಿಂದ ಆರಂಭವಾಗಿ ಸೆಪ್ಟಂಬರ್ ತಿಂಗಳ 01 ನೇ ತಾರೀಕಿನವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಕುರಿತ ಪ್ರಕಟಣೆಯನ್ನು ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ.
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments