Loading..!

ರಾಷ್ಟ್ರಿಯ ಮಿಲಿಟರಿ ಶಾಲೆಗಳಲ್ಲಿ ಅಸಿಸ್ಟೆಂಟ್ ಮಾಸ್ಟರ್ (ಇಂಗ್ಲಿಷ್) ಹುದ್ದೆಗಳಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Yallamma G | Date:19 ಆಗಸ್ಟ್ 2025
Image not found

ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ರಾಷ್ಟ್ರಿಯ ಮಿಲಿಟರಿ ಶಾಲೆ (Rashtriya Military Schools) ಇಂಗ್ಲಿಷ್ ವಿಷಯದ ಅಸಿಸ್ಟೆಂಟ್ ಮಾಸ್ಟರ್ (Assistant Master – English) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ನೇರ ನೇಮಕಾತಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರತ್ತದೆ. 


📌 ಹುದ್ದೆಯ ವಿವರ:
ಹುದ್ದೆ: ಅಸಿಸ್ಟೆಂಟ್ ಮಾಸ್ಟರ್ (English)
ವರ್ಗ: Group ‘B’, Non-Gazetted, Non-Ministerial
ವೇತನ: 7ನೇ ವೇತನ ಆಯೋಗದ ಪ್ರಕಾರ Level–7 (₹44,900 – ₹1,42,400 + ಭತ್ಯೆ)
ಒಟ್ಟು ಹುದ್ದೆ: 01 


🎯 ಅರ್ಹತೆ:
* ಅನಿವಾರ್ಯ ವಿದ್ಯಾರ್ಹತೆ:

1. ಇಂಗ್ಲಿಷ್ ವಿಷಯದಲ್ಲಿ ಪದವಿ (ಮೂರು ವರ್ಷಗಳಲ್ಲಿಯೂ ಇಂಗ್ಲಿಷ್ ವಿಷಯ ಅಧ್ಯಯನ ಮಾಡಿದಿರಬೇಕು).
2. B.Ed ಪದವಿ.
3. ಇಂಗ್ಲಿಷ್ ಓದುವುದು, ಬರೆಯುವುದು ಮತ್ತು ಮಾತನಾಡುವಲ್ಲಿ ಪಾಟವಿರಬೇಕು.
* ಆಕರ್ಷಕ (Desirable) ಅರ್ಹತೆಗಳು:
1. ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ.
2. ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಒಂದು ವರ್ಷದ ಅಧ್ಯಾಪನ ಅನುಭವ.
3. ಕ್ರೀಡೆ/ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಿರಿಯ ಪ್ರೌಢಶಾಲೆ ಮಟ್ಟದ ಸಾಧನೆ.
4. CTET ಉತ್ತೀರ್ಣ.
5. ಕಂಪ್ಯೂಟರ್‌ನಲ್ಲಿ Microsoft Office ಬಳಸುವ ಮೂಲಭೂತ ಜ್ಞಾನ.


📅 ವಯೋಮಿತಿ:
- ಗರಿಷ್ಠ 30 ವರ್ಷ
- ಸರ್ಕಾರೀ ನೌಕರರಿಗೆ ಗರಿಷ್ಠ 5 ವರ್ಷಗಳ ಸಡಿಲಿಕೆ
- ಭೂಪೂರ್ವ ಸೈನಿಕರಿಗೆ ಸರ್ಕಾರದ ನಿಯಮಾನುಸಾರ ವಿನಾಯಿತಿ


📮 ಅರ್ಜಿ ಸಲ್ಲಿಕೆ:
ಅಭ್ಯರ್ಥಿಗಳು ಕಡ್ಡಾಯವಾಗಿ ಆಫ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ:
Principal,
Rashtriya Military School,
PB No 25040, Museum Road PO,
Opp. Johnson Market, Hosur Road,
Bengaluru – 560025.


📆 ಕೊನೆಯ ದಿನಾಂಕ:
ಈ ಅಧಿಸೂಚನೆ Employment News/Rozgar Samachar (02-Aug 2025) ಪ್ರಕಟವಾದ ದಿನಾಂಕದಿಂದ 42 ದಿನಗಳೊಳಗೆ ಅರ್ಜಿ ತಲುಪಿರಬೇಕು.


⚠️ ಮುಖ್ಯ ಸೂಚನೆ:
=> ಎಲ್ಲಾ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳು (SSLC, PUC, ಪದವಿ, B.Ed, ಅನುಭವ ಪ್ರಮಾಣಪತ್ರ, EWS ಪ್ರಮಾಣಪತ್ರ) ಕಡ್ಡಾಯವಾಗಿ ಸೇರಿಸಬೇಕು.
=> ಅಪೂರ್ಣ ಅರ್ಜಿಗಳು, ತಪ್ಪು ಮಾಹಿತಿಗಳು, ಅಗತ್ಯ ದಾಖಲಾತಿಗಳಿಲ್ಲದ ಅರ್ಜಿಗಳು ನೇರವಾಗಿ ತಿರಸ್ಕರಿಸಲಾಗುತ್ತದೆ.
=> ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಯಾವುದೇ ಮಿಲಿಟರಿ ಶಾಲೆಯಲ್ಲಿ ಸೇವೆ ಸಲ್ಲಿಸಲು ಬದ್ದರಾಗಿರಬೇಕು


🔗 ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಯಿಗಾಗಿ ಅಧಿಕೃತ ವೆಬ್‌ಸೈಟ್ ನೋಡಿ:
👉 www.rashtriyamilitaryschools.edu.in

Comments