Life is like this loading!

We've to prepare well to perform better

ರೈಲ್ವೆ ಇಲಾಖೆಯಿಂದ ಗ್ರೂಪ್ ಡಿ ಹುದ್ದೆಗಳ ನೇಮಕಾತಿಯ ಪರೀಕ್ಷಾ ದಿನಾಂಕ ನಿಗದಿ ಹಾಗೂ ಇತರೆ ಮಾಹಿತಿ ನಿಮಗಾಗಿ
Author: Basavaraj Halli | Date:14 ಡಿಸೆಂಬರ್ 2021
Image not found
ಭಾರತೀಯ ಸರ್ಕಾರದ ರೈಲ್ವೆ ಸಚಿವಾಲಯವು 2019ರ ಜನೆವರಿ ತಿಂಗಳಲ್ಲಿ ದೇಶಾದ್ಯಂತ ಖಾಲಿ ಇರುವ ಲಕ್ಷಾಂತರ ಗ್ರೂಪ್-ಡಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಸದರಿ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಕಂಪ್ಯೂಟರ್ ಆಧಾರಿತ ಪರೀಕ್ಷೆಗಾಗಿ ಇಲಾಖೆಯು ದಿನಾಂಕವನ್ನು ನಿಗದಿಪಡಿಸಿದ್ದು ಪರೀಕ್ಷೆಯನ್ನು ದಿನಾಂಕ 23 ಫೆಬ್ರುವರಿ 2022 ರಿಂದ ಹಲವು ವಿಭಾಗಗಳಲ್ಲಿ ನಡೆಸಲಾಗುವುದು ಎಂದು ತನ್ನ ಇಲಾಖಾ ಪ್ರಕಟಣೆಯಲ್ಲಿ ತಿಳಿಸಿದೆ.

* ಇನ್ನು ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಪರೀಕ್ಷಾ ನಗರ ಹಾಗೂ ದಿನಾಂಕವನ್ನು ಹಾಗೂ SC/ST ಅಭ್ಯರ್ಥಿಗಳ ಪ್ರಯಾಣಭತ್ಯೆ ಕುರಿತ ವಿವರಗಳನ್ನು ಪರೀಕ್ಷೆಗೆ ಹತ್ತು ದಿನ ಮುಂಚಿತವಾಗಿ ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗುವುದು

* ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ಪರೀಕ್ಷೆಗೆ 4 ದಿನ ಮುಂಚಿತವಾಗಿ ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗುವುದು. 

* ಒಟ್ಟು 4,85,607 ಅಭ್ಯರ್ಥಿಗಳ ಅರ್ಜಿಗಳು ಭಾವಚಿತ್ರ ಹಾಗೂ ಸಹಿಯ ಕಾರಣದಿಂದ ತಿರಸ್ಕೃತಗೊಂಡಿದ್ದು, ಇವರುಗಳಿಗೆ ಅರ್ಜಿ ತಿದ್ದುಪಡಿಗಾಗಿ ನಾಳೆಯಿಂದ ಅಂದರೆ ದಿನಾಂಕ 15 ಡಿಸೆಂಬರ್ 2021 ರಿಂದ ಆರಂಭಗೊಂಡು 26 ಡಿಸೆಂಬರ್ 2021ರವರೆಗೆ ಅವಕಾಶವನ್ನು ನೀಡಲಾಗಿರುತ್ತದೆ.

- ಈ ಕುರಿತ ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಇಲಾಖಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ಪಡೆಯಬಹುದಾಗಿದೆ.

Comments