🚆 ರೈಲ್ವೆ ಇಲಾಖೆಯಿಂದ ಬೃಹತ್ ನೇಮಕಾತಿ 2026: 22,000 ಗ್ರೂಪ್-ಡಿ ಹುದ್ದೆಗಳ ಭರ್ಜರಿ ಅವಕಾಶ! ಇಲ್ಲಿದೆ ಸಂಪೂರ್ಣ ವಿವರ
ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಕನ್ನಡಿಗರಿಗೆ ಭಾರತೀಯ ರೈಲ್ವೆ ಇಲಾಖೆಯು ಭರ್ಜರಿ ಸಿಹಿ ಸುದ್ದಿ ನೀಡಿದೆ. ರೈಲ್ವೆ ನೇಮಕಾತಿ ಮಂಡಳಿಯು (RRB) 2026ರ ಸಾಲಿನ ನೇಮಕಾತಿ ಕ್ಯಾಲೆಂಡರ್ ಮತ್ತು ಮುಂಬರುವ ಬೃಹತ್ ನೇಮಕಾತಿಯ ಕುರಿತು ಮಹತ್ವದ ಮಾಹಿತಿ ಬಿಡುಗಡೆ ಮಾಡಿದೆ. ವಿಶೇಷವಾಗಿ SSLC (10ನೇ ತರಗತಿ) ಮತ್ತು PUC (12ನೇ ತರಗತಿ) ಪಾಸಾದ ಅಭ್ಯರ್ಥಿಗಳಿಗೆ ಸುಮಾರು 22,000 ಕ್ಕೂ ಹೆಚ್ಚು ಗ್ರೂಪ್-ಡಿ (Group D / Level-1) ಮತ್ತು ಇತರೆ ಹುದ್ದೆಗಳ ಭರ್ತಿಗೆ ಹಸಿರು ನಿಶಾನೆ ಸಿಕ್ಕಿದೆ.
ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೂ ಈ ಬಾರಿ ಹೆಚ್ಚಿನ ಅವಕಾಶ ಸಿಗುವ ನಿರೀಕ್ಷೆಯಿದೆ. ಪ್ರಮುಖವಾಗಿ ಇಂಜಿನಿಯರಿಂಗ್ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 11,000 ಟ್ರ್ಯಾಕ್ ಮೇಂಟೈನರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ನೇಮಕಾತಿಗೆ ಸಂಬಂಧಿಸಿದ ಅರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನದ, ಈ ನೇಮಕಾತಿ ಪ್ರಕ್ರಿಯೆ ಯಾವಾಗ ಆರಂಭವಾಗುತ್ತದೆ? ಯಾವೆಲ್ಲಾ ಹುದ್ದೆಗಳಿವೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಹಿಂದೆ ನಡೆದ RRB ನೇಮಕಾತಿಯ ಹಳೆಯ ಪ್ರಶ್ನೆ ಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗಳ ವಿವರ (Vacancies Breakdown) : ರೈಲ್ವೆಯ ವಿವಿಧ ವಿಭಾಗಗಳಲ್ಲಿ ಒಟ್ಟು 22,000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಪ್ರಮುಖ ಹುದ್ದೆಗಳು ಈ ಕೆಳಗಿನಂತಿವೆ:
ಅಸಿಸ್ಟಂಟ್ (ಟ್ರಾಫಿಕ್ ಮೂವ್ಮೆಂಟ್) : 600
ಅಸಿಸ್ಟಂಟ್ (ಟ್ರಾಕ್) : 600
ಟ್ರಾಕ್ ಮೆಂಟೈನರ್ : 11,000
ಅಸಿಸ್ಟಂಟ್ (ಪಿ-ವೇ) : 300
ಅಸಿಸ್ಟಂಟ್ (ಎಲೆಕ್ಟ್ರಿಕಲ್) : 800
ಅಸಿಸ್ಟಂಟ್ (ಲೋಕೋ ಶೆಡ್) : 200
ಅಸಿಸ್ಟಂಟ್ (ಆಪರೇಷನ್ಸ್) : 500
ಅಸಿಸ್ಟಂಟ್ (ವರ್ಕ್‌ಶಾಪ್) : 500
ಅಸಿಸ್ಟಂಟ್ (ಸಿಗ್ನಲ್) : 1,000
ಪಾಯಿಂಟ್ಸ್‌ಮ್ಯಾನ್ – B : 5,000
ಅಸಿಸ್ಟಂಟ್ (ವರ್ಕ್‌ಶಾಪ್) : 1,500
📅 ಪ್ರಮುಖ ದಿನಾಂಕಗಳು (RRB Exam Calendar 2026) : ರೈಲ್ವೆ ಇಲಾಖೆಯ ವಾರ್ಷಿಕ ಕ್ಯಾಲೆಂಡರ್ ಪ್ರಕಾರ, ಗ್ರೂಪ್-ಡಿ ಅಧಿಸೂಚನೆಯು ಅಕ್ಟೋಬರ್ 2026 ರಲ್ಲಿ ಹೊರಬರುವ ನಿರೀಕ್ಷೆಯಿದೆ. ಆದರೆ ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಮತ್ತು ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವರ್ಷದ ಮೊದಲ ಭಾಗದಲ್ಲೇ ಆರಂಭವಾಗಲಿದೆ.
• ಸಹಾಯಕ ಲೋಕೋ ಪೈಲಟ್ (ALP) : ಫೆಬ್ರವರಿ 2026
• ಟೆಕ್ನಿಷಿಯನ್ (Technician) : ಮಾರ್ಚ್ 2026
• ಸೆಕ್ಷನ್ ಕಂಟ್ರೋಲರ್ : ಏಪ್ರಿಲ್ 2026
• ಜೂನಿಯರ್ ಎಂಜಿನಿಯರ್ (JE) : ಜುಲೈ 2026
• ಗ್ರೂಪ್-ಡಿ (Level-1) : ಅಕ್ಟೋಬರ್ 2026
ನೈಋತ್ಯ ರೈಲ್ವೆ (SWR) ಹುಬ್ಬಳ್ಳಿಯಲ್ಲಿ ಎಷ್ಟು ಹುದ್ದೆಗಳಿವೆ?
ಕರ್ನಾಟಕದ ಅಭ್ಯರ್ಥಿಗಳು ಹೆಚ್ಚಾಗಿ ಗಮನಹರಿಸುವ ನೈಋತ್ಯ ರೈಲ್ವೆ ವಲಯದಲ್ಲಿ (South Western Railway) ಕೇವಲ 90 ಹುದ್ದೆಗಳನ್ನು ಗುರುತಿಸಲಾಗಿದೆ. ಆದರೆ, ಉತ್ತರ ರೈಲ್ವೆಯಲ್ಲಿ ಅತಿ ಹೆಚ್ಚು ಅಂದರೆ 3,537 ಹುದ್ದೆಗಳ ನೇಮಕಾತಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯೂ ಇದೆ.
RRB ನೇಮಕಾತಿಯ ಹಳೆಯ ಪ್ರಶ್ನೆ ಪತ್ರಿಕೆಗಳನ್ನೂ ಪ್ರಾಕ್ಟೀಸ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
🎓 ಶೈಕ್ಷಣಿಕ ಅರ್ಹತೆ (Educational Qualification) :
🔹ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು.
🔹ಅಥವಾ ITI (NCVT/SCVT) ಪ್ರಮಾಣಪತ್ರ ಅಥವಾ ನ್ಯಾಷನಲ್ ಅಪ್ರೆಂಟಿಶಿಪ್ ಸರ್ಟಿಫಿಕೇಟ್ (NAC) ಹೊಂದಿರಬೇಕು.
ವಯೋಮಿತಿ (Age Limit) :
• ಕನಿಷ್ಠ ವಯಸ್ಸು: 18 ವರ್ಷಗಳು
• ಗರಿಷ್ಠ ವಯಸ್ಸು: 33 - 36 ವರ್ಷಗಳು (ವರ್ಗದ ಆಧಾರದ ಮೇಲೆ ಸಡಿಲಿಕೆ ಇರುತ್ತದೆ)
• SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ವಿಧಾನ (Selection Process)
1. CBT (Computer Based Test): ಆನ್‌ಲೈನ್ ಲಿಖಿತ ಪರೀಕ್ಷೆ.
2. PET (Physical Efficiency Test): ದೈಹಿಕ ಸಾಮರ್ಥ್ಯ ಪರೀಕ್ಷೆ.
3. ದಾಖಲೆ ಪರಿಶೀಲನೆ (DV): ಅಸಲಿ ದಾಖಲೆಗಳ ಪರಿಶೀಲನೆ.
4. ವೈದ್ಯಕೀಯ ಪರೀಕ್ಷೆ (Medical Exam).
ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ: ಈಗಾಗಲೇ ರೈಲ್ವೆ ಮಂಡಳಿಯು ಈ ಹುದ್ದೆಗಳ ಭರ್ತಿಗೆ ಹಸಿರು ನಿಶಾನೆ ತೋರಿಸಿದ್ದು, ಶೀಘ್ರದಲ್ಲೇ ಆರ್.ಆರ್.ಬಿ (RRB) ವೆಬ್‌ಸೈಟ್‌ನಲ್ಲಿ ಅಧಿಸೂಚನೆ ಪ್ರಕಟವಾಗಲಿದೆ.
🔔 ಪ್ರಮುಖ ಮಾಹಿತಿ
ರೈಲ್ವೆ ಉದ್ಯೋಗಗಳು ಶಾಶ್ವತ ಸರ್ಕಾರಿ ಉದ್ಯೋಗಗಳು
ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ
ದೇಶದಾದ್ಯಂತ ಕೆಲಸ ಮಾಡುವ ಅವಕಾಶ
📲 ಇಂತಹ ದೈನಂದಿನ ಕನ್ನಡ ಉದ್ಯೋಗ ಸುದ್ದಿಗಳು, ರೈಲ್ವೆ, KPSC, KEA, SSLC & PUC ಜಾಬ್ ಅಪ್ಡೇಟ್ಸ್ಗಾಗಿ
👉 KPSCVaani ಅನ್ನು ಫಾಲೋ ಮಾಡಿ.
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ






Comments