ಭಾರತೀಯ ರೈಲ್ವೆಯು 2024ರಲ್ಲಿ ನಡೆಸಿದ ನೇಮಕಾತಿ ಪ್ರಕ್ರಿಯೆಯು ದೇಶದ ಯುವಜನರಲ್ಲಿ ಅಪಾರ ಆಸಕ್ತಿಯನ್ನು ಉಂಟುಮಾಡಿದೆ. ರೈಲ್ವೆ ಸಚಿವಾಲಯವು ಸಂಸತ್ತಿನಲ್ಲಿ ಹಂಚಿದ ಅಂಕಿ-ಅಂಶಗಳ ಪ್ರಕಾರ, 64,197 ಹುದ್ದೆಗಳಿಗೆ 1.87 ಕೋಟಿ ಅರ್ಜಿಗಳು ಸಲ್ಲಿಕೆಯಾಗಿವೆ. ಇದು ರೈಲ್ವೆ ವಲಯದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಹೆಚ್ಚಿನ ಬೇಡಿಕೆ ಇದ್ದುದನ್ನು ಸೂಚಿಸುತ್ತದೆ. ರೈಲ್ವೆ ಸಚಿವರು ಈ ಮಾಹಿತಿಯನ್ನು ಖಾಲಿ ಹುದ್ದೆಗಳು ಮತ್ತು ಅವುಗಳ ಭರ್ತಿ ಪ್ರಕ್ರಿಯೆಯ ಕುರಿತು ಸಂಸತ್ತಿನಲ್ಲಿ ಮಂಡಿಸಿದರು.
ಕಳೆದ ನಾಲ್ಕರಿಂದ ಐದು ವರ್ಷಗಳಲ್ಲಿ, ರೈಲ್ವೆ ವಿಭಾಗದಲ್ಲಿ ಹಲವಾರು ಕಾರಣಗಳಿಂದ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗಿದೆ. ಪ್ರಮುಖವಾಗಿ, ಬೃಹತ್ ಸಂಖ್ಯೆಯಲ್ಲಿ ನಿವೃತ್ತಿ ಹೊಂದಿದ ಉದ್ಯೋಗಿಗಳು, ರೈಲ್ವೆ ನೆಟ್ ವರ್ಕ್ ವಿಸ್ತರಣೆ ಮತ್ತು ತಾಂತ್ರಿಕ ಆಧುನೀಕರಣಗಳು ಈ ಸ್ಥಿತಿಗೆ ಕಾರಣವಾಗಿವೆ. ಹೊಸ ರೈಲು ಮಾರ್ಗಗಳ ನಿರ್ಮಾಣ, ಸುರಕ್ಷತಾ ಸಾಧನಗಳ ಅಳವಡಿಕೆ, ವಿದ್ಯುದೀಕರಣ ಯೋಜನೆಗಳು ಮತ್ತು ಡಿಜಿಟಲ್ ಪರಿವರ್ತನೆಯಿಂದ ಹೊಸ ರೀತಿಯ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಇದರ ಪರಿಣಾಮವಾಗಿ, ತಾಂತ್ರಿಕ ಮತ್ತು ಅತಾಂತ್ರಿಕ ಎರಡೂ ರೀತಿಯ ಹುದ್ದೆಗಳಲ್ಲಿ ನೇಮಕಾತಿ ಪ್ರಕ್ರಿಯೆ ತ್ವರಿತಗೊಂಡಿದೆ.
ರೈಲ್ವೆ ಸಚಿವಾಲಯದ ಪ್ರಕಾರ,1.08 ಲಕ್ಷ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇದರಲ್ಲಿ 92,116 ಖಾಲಿ ಹುದ್ದೆಗಳನ್ನು 2024 ರಲ್ಲಿ 10 ಕೇಂದ್ರೀಕೃತ ಉದ್ಯೋಗ ಅಧಿಸೂಚನೆಗಳ (ಸಿಇಎನ್) ಮೂಲಕ ಭರ್ತಿ ಮಾಡಲು ಯೋಜಿಸಲಾಗಿದೆ. ಹೆಚ್ಚು ಬೇಡಿಕೆಯಿರುವ ಹುದ್ದೆಗಳಲ್ಲಿ ಸಹಾಯಕ ಲೋಕೋಪೈಲಟ್ (ಎಎಲ್ಪಿ), ತಂತ್ರಜ್ಞರು, ರೈಲ್ವೆ ಪೊಲೀಸ್ ಫೋರ್ಸ್ (ಆರ್ಪಿಎಫ್) ಸಿಬ್ಬಂದಿ, ಕಿರಿಯ ಎಂಜಿನಿಯರ್ ಗಳು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ನಾನ್-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (ಎನ್ಟಿಪಿಸಿ) ಸೇರಿವೆ.
ಪ್ರಸ್ತುತ ಶಾಲಿನ ಅರ್ಜಿಗಳು :
=> ಎಎಲ್ ಪಿ ಹದ್ದೆಗಳು 18799 ಸ್ಥಾನಗಳಿಗೆ 1840347 ಅರ್ಜಿಗಳು
=> ಟೆಕ್ನಿಷಿಯನ್ ಹುದ್ದೆಗಳು 14298 ಸ್ಥಾನಗಳಿಗೆ 2699892 ಅರ್ಜಿಗಳು
=> ಆರ್ ಪಿ ಎಫ್ ಕಾನ್ಸ್ಟೇಬಲ್ ಹುದ್ದೆಗಳು 4208 ಸ್ಥಾನಗಳಿಗೆ 4530288 ಅರ್ಜಿಗಳು.
Comments