ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳಿಗೆ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ತರಬೇತಿಯು ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಎಸ್‌ಸಿ ಅಭ್ಯರ್ಥಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಈ ಲೇಖನದಲ್ಲಿ ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಹತಾ ಮಾನದಂಡಗಳು, ಅರ್ಜಿ ಪ್ರಕ್ರಿಯೆಯ ಹಂತಗಳು ಮತ್ತು ತರಬೇತಿಯಿಂದ ದೊರೆಯುವ ಪ್ರಮುಖ ಲಾಭಗಳ ಬಗ್ಗೆ ವಿವರವಾಗಿ ತಿಳಿಸಲಾಗುವುದು.
ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದೋ ಸುವರ್ಣಾವಕಾಶ..! ಸಮಾಜ ಕಲ್ಯಾಣ ಇಲಾಖೆ (ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರ) ವತಿಯಿಂದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
2025-26ನೇ ಸಾಲಿನಲ್ಲಿ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ, ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಪೂರ್ವ-ನೇಮಕಾತಿ ಪರೀಕ್ಷಾ ಪೂರ್ವ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಈ ತರಬೇತಿ ಕರ್ನಾಟಕ ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಪ್ರತ್ಯೇಕವಾಗಿ 60 ದಿನಗಳ ವಸತಿಯುತವಾಗಿ ನಡೆಸಲಾಗುವುದು.
ತರಬೇತಿ ವಿವರಗಳು:
- ಸೌಲಭ್ಯ: ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಪೂರ್ವ-ನೇಮಕಾತಿ ತರಬೇತಿ
- ಅವಧಿ: 60 ದಿನಗಳು
- ವಸತಿ: ವಸತಿಯುತ (ಉಚಿತ ವಸತಿ ಸೌಲಭ್ಯ)
- ಅರ್ಹತೆ: ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳು ಮಾತ್ರ
- ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 26 ವರ್ಷ
- ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು
- ಪ್ರದೇಶ: ಕರ್ನಾಟಕ ರಾಜ್ಯದ 4 ಕಂದಾಯ ವಿಭಾಗಗಳು
ತರಬೇತಿ ಪ್ರಮುಖ ಅಂಶಗಳು
- ದೈಹಿಕ ವ್ಯಾಯಾಮ ಮತ್ತು ಫಿಟ್ನೆಸ್ ತರಬೇತಿ
- ಓಟ, ಎತ್ತರ ಜಿಗಿತ, ಕತ್ತೆ ಜಿಗಿತ ಮುಂತಾದ ಕ್ರೀಡಾ ಅಭ್ಯಾಸಗಳು
- ತರಗತಿಗಳಲ್ಲಿ ಪಾಠಮಾಲೆ
- ದಿನಕ್ಕೆ 3 ಬಾರಿ ಊಟದ ವ್ಯವಸ್ಥೆ
ಎತ್ತರ:
ಪುರುಷರು – ಕನಿಷ್ಠ 168 ಸೆಂ.ಮೀ, ಎದೆ – ಕನಿಷ್ಠ 86 ಸೆಂ.ಮೀ
ಮಹಿಳೆಯರು – ಕನಿಷ್ಠ 157 ಸೆಂ.ಮೀ, ತೂಕ – ಕನಿಷ್ಠ 45 ಕೆ.ಜಿ
ಅರ್ಹತಾ ಮಾನದಂಡಗಳು
- ನಿವಾಸ: ಕರ್ನಾಟಕ ರಾಜ್ಯದ ನಿವಾಸಿ
- ಜಾತಿ: ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು
- ವಾರ್ಷಿಕ ಆದಾಯ: ಎಲ್ಲಾ ಮೂಲಗಳಿಂದ ರೂ. 5 ಲಕ್ಷ ಮೀರಿರಬಾರದು
ಶೈಕ್ಷಣಿಕ ಅರ್ಹತೆ: ಅರ್ಜಿ ಕೊನೆಯ ದಿನಾಂಕದೊಳಗೆ ಮಾನ್ಯತೆ ಪಡೆದ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು
ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು ದೈಹಿಕ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ
ಅಧಿಕೃತ ವೆಬ್‌ಸೈಟ್: https://igccdkarnataka.gov.in
ಅಂತಿಮ ದಿನಾಂಕ: 31-08-2025
ಪ್ರಮುಖ ಸೂಚನೆಗಳು
ಅಭ್ಯರ್ಥಿಯು ಆಯ್ಕೆ ಮಾಡಿದ ವಿಭಾಗದ ಪ್ರಕಾರ ತರಬೇತಿ ವಿಭಾಗವನ್ನು ನಿಯೋಜಿಸಲಾಗುತ್ತದೆ.
ಈ ತರಬೇತಿ, ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ತಯಾರಿ ನಡೆಸುತ್ತಿರುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ದೈಹಿಕ, ಮಾನಸಿಕ ಹಾಗೂ ಸ್ಪರ್ಧಾತ್ಮಕ ತಯಾರಿಯಲ್ಲಿ ಮಹತ್ವದ ನೆರವಾಗಲಿದೆ.
Comments