ಟಾಟಾ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯ ಅಂಗಸಂಸ್ಥೆಯಾಗಿರುವ ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರ (NCBS) 2025 ನೇ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಒಟ್ಟು 5 ಕ್ಲರ್ಕ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರು – ಕರ್ನಾಟಕದಲ್ಲಿರುವ ಈ ಸರ್ಕಾರಿ ಉದ್ಯೋಗಾವಕಾಶವನ್ನು ಬಳಸಿಕೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2025ರ ಆಗಸ್ಟ್ 15ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾತಿಯ ಮುಖ್ಯ ವಿವರಗಳು :
ಸಂಸ್ಥೆ ಹೆಸರು : ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರ (NCBS)
ಹುದ್ದೆ ಹೆಸರು : ಕ್ಲರ್ಕ್
ಒಟ್ಟು ಹುದ್ದೆಗಳು : 5
ಉದ್ಯೋಗ ಸ್ಥಳ : ಬೆಂಗಳೂರು – ಕರ್ನಾಟಕ
ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ 21,700/- ರೂ ಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಹತೆಗಳು :
- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (50% ಅಂಕಗಳೊಂದಿಗೆ).
- ಟೈಪಿಂಗ್ ತಿಳಿದಿರಬೇಕು.
- ಪರ್ಸನಲ್ ಕಂಪ್ಯೂಟರ್ ಹಾಗೂ ಅಪ್ಲಿಕೇಶನ್‌ಗಳ ಬಳಕೆ ಗೊತ್ತಿರಬೇಕು, ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರಮಾಣಪತ್ರ ಹೊಂದಿರಬೇಕು.
- ಕನಿಷ್ಠ 1 ವರ್ಷದ clerical ಅನುಭವ ಇದ್ದು, ದೊಡ್ಡ ಹಾಗೂ ಪ್ರಸಿದ್ಧ ಸಂಸ್ಥೆಯಲ್ಲಿ ಪತ್ರವ್ಯವಹಾರ ಮಾಡಿರುವ ಅನುಭವ ಹೊಂದಿರಬೇಕು.
ವಯೋಮಿತಿ :
ಅಭ್ಯರ್ಥಿಗಳು ಗರಿಷ್ಠ ವಯಸ್ಸು 28 ವರ್ಷ (01-07-2025ರ ಹತ್ತಿರದಂತೆ) ಗಳ ವಯೋಮಿತಿಯನ್ನು ಹೊಂದಿರಬೇಕು.
* ವಯೋಮಿತಿಯಲ್ಲಿ ಸಡಿಲಿಕೆ: NCBS ನಿಯಮಾನುಸಾರ ವಿವಿಧ ವರ್ಗದ ಅಭ್ಯರ್ಥಿಗಳಿಗೆ ಸಡಿಲಿಕೆ ಲಭ್ಯವಿದೆ.
ಅರ್ಜಿಶುಲ್ಕ :
ಇತರೆ ಅಭ್ಯರ್ಥಿಗಳು: ₹500/-
SC/ST, PWD, ಮಹಿಳಾ ಮತ್ತು ಮಾಜಿ ಸೇನಾ ಸಿಬ್ಬಂದಿಗೆ : ಶುಲ್ಕವಿಲ್ಲ
ಪಾವತಿ ವಿಧಾನ : ಆನ್‌ಲೈನ್
ಆಯ್ಕೆ ವಿಧಾನ :
* ಲಿಖಿತ ಪರೀಕ್ಷೆ
* ಕೌಶಲ್ಯ ಪರೀಕ್ಷೆ (Skill Test)
ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ಅಧಿಸೂಚನೆಯನ್ನು NCBS ವೆಬ್‌ಸೈಟ್‌ನಲ್ಲಿ ಓದಿ.
2. ಅರ್ಜಿ ಸಲ್ಲಿಸುವ ಮೊದಲು ಇಮೇಲ್ ಐಡಿ, ಮೊಬೈಲ್ ನಂಬರ್ ಮತ್ತು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
3. ಆನ್‌ಲೈನ್ ಅರ್ಜಿ ಲಿಂಕ್ ಮೂಲಕ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
4. ದಾಖಲೆಗಳು ಮತ್ತು ಪೋಟೋ ಅಪ್ಲೋಡ್ ಮಾಡಿ.
5. ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರೆ).
6. ಅರ್ಜಿಯನ್ನು ಸಲ್ಲಿಸಿ ಮತ್ತು ಅಪ್ಲಿಕೇಶನ್ ಸಂಖ್ಯೆ/ರಿಸೀಪ್ಟ್ ನಂಬರ್ ಉಳಿಸಿಡಿ.
ಪ್ರಮುಖ ದಿನಾಂಕಗಳು :
ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : 23 ಜುಲೈ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 ಆಗಸ್ಟ್ 2025
👉 ಸಾರಾಂಶ : ನ್ಯಾಷನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸಸ್ (NCBS)ನಲ್ಲಿ ಕೆಲಸ ಮಾಡುವ ಅವಕಾಶ ನಿಮಗಾಗಿ ಕಾದಿದೆ. ಬೆಂಗಳೂರಿನಲ್ಲಿ ಸರ್ಕಾರಿ ಹುದ್ದೆಗಳನ್ನು ಹಂಬಲಿಸುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ!
ಈ ಕುರಿತು ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ..
Comments