Loading..!

ಮಂಗಳೂರು ಕ್ಯಾಥೋಲಿಕ್ ಸಹಕಾರಿ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Bhagya R K | Date:30 ಮೇ 2025
Image not found

ಮಂಗಳೂರು ಕ್ಯಾಥೋಲಿಕ್ ಸಹಕಾರಿ ಬ್ಯಾಂಕ್ ಲಿಮಿಟೆಡ್ 2025ನೇ ಸಾಲಿನಲ್ಲಿ ಹಿರಿಯ ಹಾಗೂ ಕಿರಿಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯದ ಕನಸು ಕಾಣುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.


ಹುದ್ದೆಗಳ ವಿವರಗಳು :
ಬ್ಯಾಂಕ್ ಹೆಸರು : ಮಂಗಳೂರು ಕ್ಯಾಥೋಲಿಕ್ ಸಹಕಾರಿ ಬ್ಯಾಂಕ್ ಲಿಮಿಟೆಡ್
ಒಟ್ಟು ಹುದ್ದೆಗಳು : 10
ಅರ್ಜಿಯ ವಿಧಾನ : ಆಫ್ಲೈನ್
ಉದ್ಯೋಗ ಸ್ಥಳ : ಮಂಗಳೂರು


ಹುದ್ದೆಗಳ ಹೆಸರು :
ಹಿರಿಯ ಸಹಾಯಕರು – 02
ಕಿರಿಯ ಸಹಾಯಕರು – 08


ವಿದ್ಯಾರ್ಹತೆ :
ಹಿರಿಯ ಸಹಾಯಕರಿಗೆ :
- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (B.Com/BA/BBA/BCA/B.Sc/M.Sc).
- ಕನ್ನಡ ಭಾಷೆಯಲ್ಲಿ ಪಠಣ, ಬರವಣಿಗೆ ಮತ್ತು ಮಾತಿನಲ್ಲಿ ಪ್ರಾವೀಣ್ಯತೆ.
- ಕಂಪ್ಯೂಟರ್ ಜ್ಞಾನ (Open Office, ಟೈಪಿಂಗ್, ಇಂಟರ್ನೆಟ್ ಬಳಕೆ).
- ಬ್ಯಾಂಕಿಂಗ್ ಅಥವಾ ಗ್ರಾಹಕ ಸಂಪರ್ಕದಲ್ಲಿ ಅನುಭವ ಇದ್ದರೆ ಆದ್ಯತೆ.


ಕಿರಿಯ ಸಹಾಯಕರಿಗೆ :
- ಯಾವುದೇ ಪದವಿ (B.Com/BA/BBA/BCA/B.Sc/M.Sc).
- ಕನ್ನಡ ಭಾಷಾ ಪ್ರಾವೀಣ್ಯತೆ.
- ಕಂಪ್ಯೂಟರ್ ಬಳಕೆಯ ಮೂಲಭೂತ ಅರಿವು.


ವಯೋಮಿತಿ (09-ಜೂನ್-2025ರಂತೆ) :
ಸಾಮಾನ್ಯ ವರ್ಗ : ಗರಿಷ್ಠ 35 ವರ್ಷ
OBC (2A, 2B, 3A, 3B) : ಗರಿಷ್ಠ 38 ವರ್ಷ
SC/ST/Category-I : ಗರಿಷ್ಠ 40 ವರ್ಷ
ಕನಿಷ್ಠ ವಯಸ್ಸು : 18 ವರ್ಷ


ವೇತನ ಶ್ರೇಣಿ :
ಹಿರಿಯ ಸಹಾಯಕರು :
₹21,600/- ರೂ ಗಳಿಂದ 40,050/- ರೂ ಗಳ ವರೆಗೆ  


ಕಿರಿಯ ಸಹಾಯಕರು :
₹20,000–/- ರೂ ಗಳಿಂದ 36,300/- ರೂ ಗಳ ವರೆಗೆ  


ಅರ್ಜಿ ಶುಲ್ಕ :
ಸಾಮಾನ್ಯ ಹಾಗೂ ಇತರ ಹಿಂದುಳಿದ ವರ್ಗಗಳು : ₹1,180/- (₹1,000 + 18% GST)
SC/ST/Category-I : ₹590/- (₹500 + 18% GST)


ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ (ಒಟ್ಟು 200 ಅಂಕಗಳು):
  * ಕನ್ನಡ – 50 ಅಂಕ
  * ಸಾಮಾನ್ಯ ಜ್ಞಾನ – 25 ಅಂಕ
  * ಗಣಿತ/ತಾರ್ಕಿಕತೆ – 25 ಅಂಕ
  * ವಾಣಿಜ್ಯ – 50 ಅಂಕ
  * ಭಾರತ ಸಂವಿಧಾನ/ಬ್ಯಾಂಕಿಂಗ್ – 25 ಅಂಕ
  * ಕಂಪ್ಯೂಟರ್ ಜ್ಞಾನ – 25 ಅಂಕ
ಸಂದರ್ಶನ : ಲಿಖಿತ ಪರೀಕ್ಷೆಯಲ್ಲಿ ಶೇಕಡಾ 85 ಅಂಕಗಳ ನಂತರ ಸಂದರ್ಶನಕ್ಕೆ ಕರೆಯಲಾಗುತ್ತದೆ (1:5 ಅನುಪಾತದಲ್ಲಿ).


ಪ್ರಮುಖ ದಿನಾಂಕಗಳು :
ಅರ್ಜಿಯ ಪ್ರಾರಂಭ ದಿನಾಂಕ : 26-ಮೇ-2025
ಅರ್ಜಿಯ ಕೊನೆಯ ದಿನಾಂಕ : 09-ಜೂನ್-2025


ಮುಖ್ಯ ಸೂಚನೆ :
ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್ ಅಥವಾ ಅಧಿಸೂಚನೆಯ ಮೂಲಕ ಪರಿಶೀಲಿಸಿ ಅರ್ಜಿ ಸಲ್ಲಿಸಿ.


📢 ಉದ್ಯೋಗಾಸಕ್ತರಿಗೆ ವಿಶೇಷ ಮನವಿ : ಈ ಬಗೆಯ ನಿಖರ ಉದ್ಯೋಗ ಮಾಹಿತಿಗಾಗಿ ಪ್ರತಿದಿನ ನಮ್ಮ ಟೆಲಿಗ್ರಾಮ್ ಮತ್ತು ಫೇಸ್ಬುಕ್ ಗುಂಪುಗಳಿಗೆ ಜಾಯಿನ್ ಆಗಿ.

Comments