ಎಲ್‌ಐಸಿ'ಯು 8500 ಅಸಿಸ್ಟಂಟ್ ಹುದ್ದೆಗಳಿಗೆ ಪೂರ್ವ ಪರೀಕ್ಷೆಯನ್ನು ನಡೆಸಿತ್ತು. ಈ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ ಲೈಫ್ ಇನ್ಸುರೆನ್ಸ್ ಕಾರ್ಪೋರೇಷನ್ (LIC) ಅಸಿಸ್ಟಂಟ್ ಹುದ್ದೆಗಳಿಗೆ ಪೂರ್ವ ಪರೀಕ್ಷೆಯನ್ನು ಅಕ್ಟೋಬರ್ 30 ಮತ್ತು 31, 2019 ರಂದು ನಡೆಸಿತ್ತು. ಈ ಪರೀಕ್ಷೆ ಫಲಿತಾಂಶವನ್ನು ಪ್ರಸ್ತುತ ಪ್ರಕಟಿಸಲಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶವನ್ನು ಎಲ್‌ಐಸಿ'ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಚೆಕ್ ಮಾಡಬಹುದು. ಭಾರತೀಯ ಜೀವ ವಿಮಾ ನಿಗಮವು ಅಸಿಸ್ಟಂಟ್ ಹುದ್ದೆಗಳ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ನಡೆಸಲಿದೆ. ಈ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡಲಿದೆ. ✍ ಕರ್ನಾಟಕದಲ್ಲಿ ಖಾಲಿ ಇರುವ ಅಸಿಸ್ಟಂಟ್ ಹುದ್ದೆಗಳ ವಿವರ ಘಟಕವಾರು ಈ ಕೆಳಗಿನಂತಿವೆ. ಬೆಂಗಳೂರು: 40 ಮೈಸೂರು: 65 ಉಡುಪಿ :28 ಶಿವಮೊಗ್ಗ: 51 ರಾಯಚೂರು:73 ಧಾರವಾಡ: 35 ಬೆಳಗಾಂ:73






Comments