ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿನ 2000 ಚಾಲಕ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ | ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
Published by: Yallamma G | Date:22 ಡಿಸೆಂಬರ್ 2022

ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿನ ಹುದ್ದೆಗಳ ನಿರೀಕ್ಷೆಯಲ್ಲಿದ್ದ, ರಾಜ್ಯದ ಅಭ್ಯರ್ಥಿಗಳಿಗೆ ಇದೀಗ ಸಿಹಿಸುದ್ದಿ ಬಂದಿದ್ದು, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಖಾಲಿ ಇರುವ 2000 ಚಾಲಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಚಾಲಕರಿಗೆ ಈವರೆಗೆ ತರಬೇತಿ ಅವಧಿಯಲ್ಲಿ 10 ಸಾವಿರ ರೂ ನೀಡಲಾಗುತ್ತಿತ್ತು, ಆ ಮೊತ್ತವನ್ನು ಈಗ 20 ಸಾವಿರ ರೂಗಳಿಗೆ ಹೆಚ್ಚಿಸಲಾಗುವುದು ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ಹುದ್ದೆಗಳ ಆಕಾಂಕ್ಷಿಗಳು ಕೂಡಲೇ ಉತ್ತಮ ತಯಾರಿ ಆರಂಭಿಸಿ ಯಶಸ್ವಿಯಾಗಿ.
* ಈ ಕುರಿತು ಸಾರಿಗೆ ಸಚಿವ ಶ್ರೀರಾಮಲು ಅವರು ಕೂಡ ಅಧಿಕೃತವಾಗಿ ತಿಳಿಸಿದ್ದು, ಇನ್ನೇನು ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ.

Comments