ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಬ್ ಇನ್ಸ್ಪೆಕ್ಟರ್ (KSISF) ಹುದ್ದೆಗಳ ಭಾಗಶಃ ಅಂತಿಮ ಆಯ್ಕೆ ಪಟ್ಟಿ ಪ್ರಕಟ
Published by: Rukmini Krushna Ganiger | Date:27 ಆಗಸ್ಟ್ 2021

- 20-12-2020 ರಂದು ನಡೆದ ಸಬ್ ಇನ್ಸ್ ಪೆಕ್ಟರ್ (ಪುರುಷ ಮತ್ತು ಮಹಿಳಾ) ಹಾಗೂ ಸೇವಾ ನಿರತ ಹುದ್ದೆಗಳ ನೇಮಕಾತಿಯನ್ನು ಉಲ್ಲೇಖಿತ (1) ರ ಅಧಿಸೂಚನೆ ಅನ್ವಯ ಕೈಗೊಳ್ಳಲಾಗಿರುತ್ತದೆ. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಚೇರಿಯಿಂದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ .ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಗುಣ ಮತ್ತು ನಡತೆ ಹಾಗೂ ದಾಖಲೆ ಪರಿಶೀಲನೆ ಕೈಗೊಳ್ಳುವಂತೆ ಅಡಿಷನಲ್ ಡೈರೆಕ್ಟರ್, ಜನರಲ್ ಆಫ್ ಪೊಲೀಸ್, ಆಂತರಿಕ ಭದ್ರತಾ ವಿಭಾಗ, ಬೆಂಗಳೂರುರವರನ್ನು ಕೋರಲಾಗುತ್ತದೆ. ಅದರಂತೆ ಸದರಿಯವರು ಉಲ್ಲೇಖಿತ (4) ರನ್ವಯ ಸಲ್ಲಿಸಿರುವ ವರದಿಯ ಅನುಸಾರ 3 ನೇ ಭಾಗಶಃ ಅಂತಿಮ ಆಯ್ಕೆಪಟ್ಟಿ (Partial 3rd Final Select List) ಯನ್ನು ಇಲಾಖೆಯ ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಂತಿಮ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ.





Comments