Loading..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ 420 ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ದೈಹಿಕ ಪರೀಕ್ಷೆಯ ಪ್ರವೇಶ ಪತ್ರ ಇದೀಗ ಪ್ರಕಟ
Published by: Yallamma G | Date:8 ಫೆಬ್ರುವರಿ 2024
Image not found

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 420 ಕಲ್ಯಾಣ ಕರ್ನಾಟಕದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರಸ್ತುತ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಯ ಮೊದಲ ಹಂತವಾದ ಲಿಖಿತ ಪರೀಕ್ಷೆಯನ್ನು ದಿನಾಂಕ 10 ಸೆಪ್ಟೆಂಬರ್ 2023 ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಯಶಸ್ವಿಯಾಗಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿದ್ದು, ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KSP ಇಲಾಖೆಯು ತನ್ನ ಜಾಲತಾಣದಲ್ಲಿ ದೈಹಿಕ ಪರೀಕ್ಷೆಯ ದಿನಾಂಕ ಮತ್ತು ಪ್ರವೇಶ ಪತ್ರವನ್ನು ಇದೀಗ ಪ್ರಕಟಿಸಿದೆ. ದೈಹಿಕ ಪರೀಕ್ಷೆಯು 2024 ಫೆಬ್ರವರಿ 12 ರಿಂದ 15 ರ ವರೆಗೆ ನಡೆಯಲಿವೆ. 
- Physical Test ನಡೆಯುವ ಸ್ಥಳ ಮತ್ತು ದಿನಾಂಕ :
★ 12-02-2024: ಯಾದಗಿರಿ
★ 13-02-2024: ಬೀದರ್, ಬಳ್ಳಾರಿ, ಕೊಪ್ಪಳ
★ 14-02-2024: ರಾಯಚೂರು, ಕಲಬುರಗಿ, ವಿಜಯನಗರ
★ 15-02-2024: ಬೆಂಗಳೂರು ಸಿಟಿ.
- ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಇಲಾಖಾ ಜಾಲತಾಣಕ್ಕೆ ಭೇಟಿ ನೀಡಿ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

Comments