Loading..!

ಕರ್ನಾಟಕ ಪೊಲೀಸ್ ಇಲಾಖೆಯಿಂದ 3064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ದೈಹಿಕ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಇದೀಗ ಪ್ರಕಟ
Published by: Yallamma G | Date:13 ಮಾರ್ಚ್ 2024
Image not found

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಮಿಕ್ಕುಳಿದ ವೃಂದದ3064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಗಾಗಿ 2022 ಸೆಪ್ಟೆಂಬರ್ ನಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು, ಹಾಗೂ ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಇಲಾಖೆಯು ಈ ಹುದ್ದೆಗಳಿಗೆ  ದಿನಾಂಕ 28/01/2024 ರಂದು ಲಿಖಿತ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ನೇಮಕಾತಿಯ ಮುಂದಿನ ಹಂತವಾದ ದೈಹಿಕ ಪರೀಕ್ಷೆಯನ್ನು ನಡೆಸಲು ದೈಹಿಕ ಪರೀಕ್ಷೆಗೆ  (PST & PET) ಅರ್ಹರಾದ ಅಭ್ಯರ್ಥಿಗಳ ಜಿಲ್ಲಾವಾರು ತಾತ್ಕಾಲಿಕ ಆಯ್ಕೆಪಟ್ಟಿ ಮತ್ತು ದೈಹಿಕ ಪರೀಕ್ಷೆ ನಡೆಯುವ ದಿನಾಂಕವನ್ನು KSP ಇಲಾಖೆಯು ತನ್ನ ಜಾಲತಾಣದಲ್ಲಿ ಇದೀಗ ಪ್ರಕಟಿಸಿದೆ. ದೈಹಿಕ ಪರೀಕ್ಷೆಯು ದಿನಾಂಕ 18/03/2024 ರಿಂದ ಆರಂಭಗೊಂಡು 22/03/2024 ವರೆಗೆ ನಡೆಯಲಿದೆ. 


- ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಇಲಾಖಾ ಜಾಲತಾಣಕ್ಕೆ ಭೇಟಿ ನೀಡಿ ದೈಹಿಕ ಪರೀಕ್ಷೆಗೆ  (PST & PET) ಅರ್ಹರಾದ ಅಭ್ಯರ್ಥಿಗಳ ಜಿಲ್ಲಾವಾರು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. 

Comments