Life is like this loading!

We've to prepare well to perform better

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಕೆಎಸ್ಐಎಸ್ಎಫ್ (KSISF) ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
Author: Savita Halli | Date:20 ಸೆಪ್ಟೆಂಬರ್ 2019
Image not found

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಕೆಎಸ್ಐಎಸ್ಎಫ್ ಪೊಲೀಸ್ ಕಾನ್ಸ್ಟೇಬಲ್ ಪುರುಷ ಹಾಗೂ ಮಹಿಳಾ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 04-06-2018 ರಂದು ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು ಹಾಗೂ ಈ ಹುದ್ದೆಗಳಿಗೆ ಮೊದಲನೆ ಹಂತವಾದ ದೈಹಿಕ ಪರೀಕ್ಷೆಯನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲಾಗಿತ್ತು ಹಾಗೂ ಲಿಖಿತ ಪರೀಕ್ಷೆಯಲ್ಲೂ ದೈಹಿಕ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ಕಳೆದ ವರ್ಷದ ಡಿಸೆಂಬರ್ ತಿಂಗಳ 09 ನೇ ತಾರೀಖಿನಂದು ನಡೆಸಲಾಗಿತ್ತು.

ಪ್ರಸ್ತುತ ಈ ಹುದ್ದೆಗಳಿಗೆ ಒಂದು ಅನುಪಾತ ಒಂದರಂತೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇಂದು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಹೆಸರುಗಳನ್ನು ಪರಿಶೀಲಿಸಬಹುದಾಗಿದೆ.

ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ