ಆಡಳಿತಾತ್ಮಕ ಕಾರಣದಿಂದ ಮುಂದೂಡಲಾಗಿದ್ದ ಸಿವಿಲ್ PC ಹುದ್ದೆಗಳ ದೈಹಿಕ ಪರೀಕ್ಷೆ ದಿನಾಂಕ ಮರು ನಿಗದಿ
Published by: Basavaraj Halli | Date:11 ನವೆಂಬರ್ 2020

ಇತ್ತೀಚೆಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ನಾಗರೀಕ ಪೊಲೀಸ್ ಕಾನ್ಸ್ ಟೇಬಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಕಾರಣ ನೀಡಿ ಮುಂದೂಡಲಾಗಿದ್ದ ದೈಹಿಕ ಮತ್ತು ಸಹಿಷ್ಣುತಾ ಪರೀಕ್ಷೆಯನ್ನ ಮುಂದೂಡಿತ್ತು, ಸದರಿ ಈ ಮುಂದೂಡಲಾದ ಪರೀಕ್ಷೆಯನ್ನು ದಿನಾಂಕ 17 ನವೆಂಬರ್ 2020 ರಿಂದ ಆರಂಭಗೊಂಡು 20 ನವೆಂಬರ್ 2020 ರವರೆಗೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದ್ದು ಸದರಿ ದಿನಾಂಕಗಳಿಗನುಗುಣವಾಗಿ ದೈಹಿಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕಚೇರಿಯಿಂದ ಕರೆ ಪತ್ರಗಳನ್ನು ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Comments