Loading..!

ಕರ್ನಾಟಕ ಪೊಲೀಸ್ ಇಲಾಖೆಯಿಂದ 402 Civil PSI ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ತಿದ್ದುಪಡಿ ಇದೀಗ ಪ್ರಕಟ | ಈ ಕುರಿತು ಮಾಹಿತಿ ನಿಮಗಾಗಿ
Published by: Yallamma G | Date:4 ಆಗಸ್ಟ್ 2025
Image not found

              ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ 402 Civil ಪೊಲೀಸ್ ಸಬ್ ಇನ್ಸ್ಪೆಕ್ಟರ್ ( PSI ) (ಪುರುಷ ಮತ್ತು ಮಹಿಳಾ)ಹುದ್ದೆಗಳ ನೇಮಕಾತಿಗಾಗಿ 03/03/2021 ರಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತುಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಇಲಾಖೆಯು ಈ ಹುದ್ದೆಗಳಿಗೆ ದೈಹಿಕ ಪರೀಕ್ಷೆಯನ್ನು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು.


                ನೇಮಕಾತಿಯ ಮುಂದಿನ ಹಂತವಾದ ಲಿಖಿತ ಪರೀಕ್ಷೆಯನ್ನು ದಿನಾಂಕ 2024 ಅಕ್ಟೋಬರ್ 03 ರಂದು ರಾಜ್ಯ ವಿವಿಧ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಮತ್ತು 11/04/2024 ರಂದು ಅಂತಿಮ ಅಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ನೇಮಕಾತಿ ಮುಂದು ವರಿದ ಹಂತವಾದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸರ್ಕಾರ ಪಾತ್ರದಲ್ಲಿ ನಿರ್ದೇಶಿಸಿರುವಂತೆ 381 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು 26/12/2024 ರಂದು ಇಲಾಖೆಯ ಅಧಿಕೃತ ವೆಬ್ ಸೆಟ್ ನಲ್ಲಿ ಪ್ರಕಟಿಸಲಾಗಿತ್ತು.


                     ಆದ್ದರಿಂದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಪಿ.ಎಸ್.ಐ. (ಸಿವಿಲ್) 402 ಹುದ್ದೆಗಳಿಗೆ ಸಂಬಂಧಿಸಿದಂತೆ ಕಾಯ್ದಿರಿಸಲಾಗಿರುವ 21 (ಕಲ್ಯಾಣ ಕರ್ನಾಟಕ) ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಿ, ತಿದ್ದುಪಡಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿ ಪರಿಶೀಲನೆಯ ಪ್ರಕ್ರಿಯೆಯನ್ನು ನಡೆಸಿ ಉಲ್ಲೇಖ(12)ರ ಸರ್ಕಾರದ ಪತ್ರದಲ್ಲಿ ನಿರ್ದೇಶಿಸಿರುವ ಷರತ್ತುಗಳಿಗೊಳಪಟ್ಟು ಕ್ರಮಕೈಗೊಳ್ಳುವ ಕುರಿತು, ಸರ್ಕಾರದಿಂದ ಮುಂದಿನ ನಿರ್ದೇಶನವನ್ನು ಹಾಗೂ ಅನುಮತಿಯನ್ನು ಕೋರಲಾಗಿರುತ್ತದೆ.


           ಪ್ರಕಟಿಸಲಾಗಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯು ಸರ್ಕಾರದ ಪತ್ರಗಳ ಷರತ್ತಿಗೊಳಪಟ್ಟಿರುತ್ತದೆ. ಅಲ್ಲದೇ ಇದನ್ನು ಹೊರತುಪಡಿಸಿ, ಸದರಿ ಆಯ್ಕೆ ಪಟ್ಟಿಯು ಈ ಕೆಳಕಂಡಂತೆ ತಿಳಿಸಿರುವ ಷರತ್ತುಗಳಿಗೂ ಸಹ ಒಳಪಟ್ಟಿರುತ್ತದೆ.
ಎ) ಈ ಆಯ್ಕೆ ಪಟ್ಟಿಯು ನಿಯಮಗಳನುಸಾರ ರಚಿಸಲಾಗಿರುವ ವೈದ್ಯಕೀಯ ಮಂಡಳಿಯು ನಡೆಸುವ ವೈದ್ಯಕೀಯ ಪರೀಕ್ಷೆಯ ಫಲಿತಾಂಶಗಳಿಗೆ ಒಳಪಟ್ಟಿರುತ್ತದೆ.
ಬಿ) ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು ಇದ್ದ ಕಾರಣದಿಂದ ಸದರಿಯವರಿಗೆ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ, ಯಾವುದೇ ರೀತಿಯ ಕಾನೂನಾತ್ಮಕ ಹಕ್ಕು ಇರುವುದಿಲ್ಲ. ಸದರಿ ನೇಮಕಾತಿಯು ಮೇಲೆ ಉಲ್ಲೇಖಿಸಲಾದ ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಸಿ) ಈ ಆಯ್ಕೆ ಪಟ್ಟಿಯು ಮುಂದಿನ ಯಾವುದೇ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿ / ಮಾನ್ಯ ಉಚ್ಛ ನ್ಯಾಯಾಲಯ / ಮಾನ್ಯ ಭಾರತದ ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಮಾನಗಳಿಗೆ ಒಳಪಟ್ಟಿರುತ್ತದೆ.

Comments